ಬಯಲಲ್ಲಿ ಗುಡಿಸಲು, ಹಸುಗೂಸುಗಳನ್ನು ಬಗಲಿಗೆ ಕಟ್ಟಿಕೊಂಡು ದುಡಿಯುವ ಮಹಿಳೆಯರ ಕಷ್ಟ ಅಷ್ಟಿಟ್ಟಲ್ಲ ಸಂತೋಷಕುಮಾರ್ ಕಾಮತ್
The hardships of women who work in open fields, with their calves tied to their shoulders, are not
ಮಾಂಜರಿ 28: ಗಡಿಭಾಗದಲ್ಲಿ ಇದೀಗ ಕಬ್ಬು ಕಟಾವು ಹಂಗಾಮು ತೀವ್ರ ವೇಗ ಪಡೆದುಕೊಂಡಿದೆ. ಈ ಕಾಯಕದಲ್ಲಿ ಮಕ್ಕಳನ್ನು ಕಟ್ಟಿಕೊಂಡು ನಡುವು ಬಗ್ಗಿಸಿ ದುಡಿಯುವ ಮಹಿಳೆಯರ ಕಷ್ಟ ಯಾರಿಗೂ ಬೇಡ.
ಗಂಡಸರು ದಿನವಿಡಿ ಕಬ್ಬು ಕಟಾವು ಮಾಡಿದರೆ. ಅವರ ಜೊತೆಗಿದ್ದ ಹೆಣ್ಣುಮಕ್ಕಳು ಬೆಳಗಿನ ಜಾವ ಬೇಗನೆ ಎದ್ದು ನೀರು ತುಂಬಿ ದಿನಗಳ ಆರೈಕೆ ಮುಗಿಸುತ್ತಾರೆ. ನಂತರ ಅಡುಗೆ ಮಾಡಿ ಡಬ್ಬಿ ತುಂಬಿಕೊಂಡು ಚಿಕ್ಕ ಮಕಳನ್ನು ಕರೆದುಕೊಂಡು ಕಬ್ಬಿನ ಗದ್ದೆಯಲ್ಲಿ ನೆರಳು ಮಾಡಿ ಮಲಗಿಸಿ ಮಾಡಲು ತಮ್ಮ ಪತಿಗೆ ಸಹಾಯ ಮಾಡುತ್ತಾರೆ. ಕಬ್ಬು ಕಟಾವು ಮಾಡಲು ತಮ್ಮ ಪತಿಗೆ ಕಡಿದ ಕಬ್ಬನ್ನು ಒಂದುಗೂಡಿಸಿ ಗಂಟು ಕಟ್ಟುವುದು, ಮೇವು ಸಂಗ್ರಹಿಸುವುದು ಸಂಜೆಯವರೆಗೆ ಕಡಿದ ಕಬ್ಬನ್ನು ಲಾರಿಯಲ್ಲಿ ತುಂಬಲು ಪತಿಗೆ ನೆರವಾಗುತ್ತಾರೆ.
ದಸರಾ ಹಬ್ಬ ಮುಗಿಯುತ್ತಿದ್ದಂತೆ ಗುತ್ತಿಗೆದಾರರ ಲಾರಿಯಲ್ಲಿ ಕೊಡ, ಬಕೆಟ್, ಹಾಸಿಗೆ, ಹೊದಿಕೆ, ಸಂಗ್ರಹವಿದ್ದ ಒಂದಿಷ್ಟು ಕಾಳು-ಕಡಿಯೊಂದಿಗೆ ತಮ್ಮೂರನ್ನು ತ್ಯಜಿಸಿ ನೂರಾರು ಕಿ.ಮೀ. ದೂರದ ಕರ್ನಾಟಕ ಗಡಿಗೆ ಬರುತ್ತಾರೆ. ಇಲ್ಲಿನ ಸಕ್ಕರೆ ಕಾರ್ಖಾನೆಗಳ ಆವರಣ ಇಲ್ಲವೇ, ಅಲ್ಲಲ್ಲಿ ರಸ್ತೆಗಳ ಬದಿಯ ಬಯಲಲ್ಲಿ ಗುಡಿಸಲು ಕಟ್ಟುತ್ತಾರೆ. ಹಸುಗೂಸುಗಳನ್ನು ಬಗಲಿಗೆ ಕಟ್ಟಿಕೊಂಡು ಬರುವ ಕಬ್ಬು ಕಟಾವು ಕೂಲಿಕಾರರ ಹೆಣ್ಣು ಮಕ್ಕಳು, ಇನ್ನುಳಿದ ಮಕ್ಕಳನ್ನು ತಮ್ಮೂರಲ್ಲೇ ವೃದ್ಧ ಅತ್ತೆ, ಮಾವ, ಅಜ್ಜ, ಅಜ್ಜಿಯ ಬಳಿ ಬಿಟ್ಟು ಬಂದಿರುತ್ತಾರೆ. ಸಕ್ಕರೆ ಕಾರ್ಖಾನೆಗಳ ಕಬ್ಬು ಕಟಾವು ಹಂಗಾಮು ಪ್ರಾರಂಭದಿಂದ ಚಕ್ರ ನಿಲ್ಲುವವರೆಗೆ ಈ ಕುಟುಂಬಗಳ ಕೂಲಿ ಕೆಲಸ ಮುಂದುವರಿಯುತ್ತದೆ.
ರಾಜ್ಯದ ಗಡಿಭಾಗದಲ್ಲಿ ಪಂಚ ನದಿಗಳು ಹರಿದಿರುವುದಿಂದ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳು ಕೂಡ ಗಡಿ ಭಾಗದಲ್ಲಿವೆ. ಹೀಗಾಗಿ ಗಡಿಯಲ್ಲಿ ನಡೆಯುವ ಕಬ್ಬು ಕಟಾವು ಚಟುವಟಿಕೆಯಲ್ಲಿ ಮಹಿಳೆಯರ ಪಾತ್ರ ಅಗಗಣ್ಯವಾಗಿದೆ.
ಕಬ್ಬು ಕಟಾವು ಮಾಡುವವರು ನಮ್ಮ ರಾಜ್ಯದ ಕಾರ್ಮಿಕರ ಜೊತೆಗೆ ಹೊರ ರಾಜ್ಯಗಳಿಂದ ಕಬ್ಬು ಕಟಾವು ಮಾಡಲು ಕೂಲಿಕಾರರ ಕುಟುಂಬಗಳು ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗಕ್ಕೆ ವಲಸೆ ಬರುತ್ತವೆ. ಸುಮಾರು 4-5 ತಿಂಗಳ ಕಾಲ ಬೆಳಗ್ಗೆಯಿಂದ ಸಂಜೆಯವರೆಗೆ ಕೂಲಿ ಮಾಡಿ ಮತ್ತೆ ತಮ್ಮ ಊರುಗಳಿಗೆ ತೆರಳುತ್ತಾರೆ.
ಕಬ್ಬು ನುರಿಯುವ ಹಂಗಾಮಿನಲ್ಲಿ ಕಟಾವಿಗೆ ಬರುವಕೂಲಿಕಾರರೆಂಬ ಕಷ್ಟಜೀವಿಗಳ ಬೀದಿ ಬದಿಯ ಬದುಕನ್ನು ನೋಡಿದರೆ ಎಂಥವರಿಗೂ ಒಂದು ಕ್ಷಣ ಕರುಳು ಚುರ್ ಎನ್ನುತ್ತದೆ. ಮಹಾರಾಷ್ಟ್ರದ ಉಸಮಾನಾಬಾದ, ಬೀಡ, ಲಾತೂರ ಸೇರಿದಂತೆ ವಿವಿಧ ಭಾಗಗಳಿಂದ ಕಬ್ಬು ಕಟಾವು ಮಾಡಲು ಕುಟುಂಬ ಸಮೇತ ಬರುತ್ತಾರೆ.
ಒಟ್ಟಾರೆಯಾಗಿ ಕಬ್ಬು ಕಟಾವು ಮಾಡಲು 4-5 ತಿಂಗಳು ಕಾಲ ತಮ್ಮ ಮನೆಯವರು, ಮಕ್ಕಳನ್ನು ಬಿಟ್ಟು ಎಲ್ಲೊ ಬಂದು ಮಲಗಿ ಎಲ್ಲೊ ಒಂದು ಕಡೆ ಅಡುಗೆ ಹೀಗೆ ಬೇಕಾಬಿಟ್ಟಿಯಾಗಿ ತಮ್ಮ ಜೀವನ ತೆಗೆದು ದುಡಿಮೆ ಮಾಡಿಕೊಂಡು ಹೋಗುವುದು ಪ್ರತಿ ವರ್ಷ ಈ ಕಾರ್ಮಿಕರ ಕಾಯಕವಾಗಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 