ಜಗತ್ತಿನಲ್ಲಿ ತಂದೆ ತಾಯಿಗೆ ಅತ್ಯಂತ ಶ್ರೇಷ್ಠ ಸ್ಥಾನ: ಯಳಗೇರಿ
The greatest place in the world for parents: Yelageri
ಜಗತ್ತಿನಲ್ಲಿ ತಂದೆ ತಾಯಿಗೆ ಅತ್ಯಂತ ಶ್ರೇಷ್ಠ ಸ್ಥಾನ: ಯಳಗೇರಿ
ಹಾವೇರಿ 14: ಜಗತ್ತಿನಲ್ಲಿ ತಂದೆ ತಾಯಿಯವರಿಗೆ ಅತ್ಯಂತ ಶ್ರೇಷ್ಠವಾದ ಸ್ಥಾನವಿದೆ ಎಂದು ಬಸವ ಬಳಗದ ಅಧ್ಯಕ್ಷ ವಿ.ಜಿ ಯಳಗೇರಿ ಹೇಳಿದರು. ನಗರದ ಬಸವಭವನದಲ್ಲಿ ಬಸವ ಬಳಗದಿಂದ ನೂತನವಾಗಿ ಆರಂಭಿಸಲಾಗಿರುವ ದತ್ತಿ ಉಪನ್ಯಾಸದ ಅಂಗವಾಗಿ ಶಿವಬಸಪ್ಪ ಮುದ್ದಿ ಅವರ ತಂದೆ ತಾಯಿಯರಾದ ಬಸಪ್ಪ ಮುದ್ದಿ ಈರಮ್ಮ ಮುದ್ದಿ ಅವರ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿ ಮಕ್ಕಳನ್ನು ಹೆತ್ತು, ಹೊತ್ತು ಸಾಕಿ ಸಲುಹಿ ತಮ್ಮ ಜೀವನವನ್ನೇ ಮುಡುಪಾಗಿಟ್ಟು ಮಕ್ಕಳಿಗೆ ಸಂಸ್ಕಾರಯುತ ವ್ಯಕ್ತಿತ್ವವನ್ನು ನೀಡುವುದರಲ್ಲಿ ತಂದೆ ತಾಯಿಯರ ಪಾತ್ರ ಮಹತ್ವವಾಗಿರುವುದರಿಂದ ತಾಯಿಯನ್ನು ಭೂಮಿಗೆ ತಂದೆಯನ್ನು ಆಕಾಶಕ್ಕೆ ಹೋಲಿಸಲಾಗುತ್ತದೆ. ಅವರ ಋಣವನ್ನು ತೀರಿಸುವುದು ಕಷ್ಟಸಾಧ್ಯ. ಆದರೆ ಅವರು ಹಾಕಿಕೊಟ್ಟ ಸನ್ಮಾರ್ಗದ ಸಮಾಜಮುಖಿಯ ಸಂಸ್ಕಾರಯುತ ಜೀವನವನ್ನು ನಡೆಸಿದರೆ ಅವರ ಋಣವನ್ನು ಸ್ವಲ್ಪ ಮಟ್ಟಿಗಾದರೂ ಪೂರೈಸಿದಂತಾಗುತ್ತದೆ ಎಂದರು. ಶಿವಯೋಗಿ ಬೆನ್ನೂರ, ಉಳಿವೆಪ್ಪ ಪಂಪಣ್ಣನವರ ದತ್ತಿದಾನಿಗಳ ನಿಕಟ ಸಂಪರ್ಕದ ಬಗ್ಗೆ ಮಾತನಾಡಿದರು. ಎನ್.ಬಿ. ಕಾಳೆ ಬಸವಾದಿ ಶಿವಶರಣರ ವಚನ ಸಾಹಿತ್ಯ ಮತ್ತು ಅದರ ಶ್ರೇಷ್ಠತೆ ಬಗ್ಗೆ ತಿಳಿಸಿದರು. ಶಿವಬಸಪ್ಪ ಮುದ್ಧಿ ಪ್ರಸ್ತಾವಿಕವಾಗಿ ಮಾತನಾಡಿದರು. ಮಲ್ಲಿಕಾರ್ಜುನ್ ಹಿಂಚಿಗೇರಿ ನಿರೂಪಿಸಿದರು.ಚನ್ನಬಸಪ್ಪ,ರುದ್ರ್ಪ, ಪ್ರಭುಲಿಂಗ ಮುದ್ದಿ, ಮುರಿಗೆಪ್ಪ ಕಡೆಕೊಪ್ಪ, ಗಂಗಣ್ಣ ಮಾಸೂರ, ಜಗದೀಶ್ ಹತ್ತಿ ಕೋಟಿ, ಶಿವಾನಂದ ಹೊಸ ಮನಿ, ಕಾವ್ಯ ಅಂಗಡಿ, ಅಕ್ಕಮಹಾದೇವಿ ಹಾನಗಲ್ ಮುದ್ದಿ ಕುಟುಂಬಸ್ಥರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 