ಮಾನವ ಕುಲಕ್ಕೆ ಸಮಾನತೆಯ ದೀಕ್ಷೆ ನೀಡಿದ ಮಹಾನ್ ಚೇತನ
The great spirit who initiated equality for humanity
ಶಿಗ್ಗಾವಿ 13 : ನಿಜಶರಣ ಅಂಬಿಗರ ಚೌಡಯ್ಯನವರು ಕೇವಲ ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಇಡೀ ಮಾನವ ಕುಲಕ್ಕೆ ಸಮಾನತೆಯ ದೀಕ್ಷೆ ನೀಡಿದ ಮಹಾನ್ ಚೇತನ ಎಂದು ಶಿಗ್ಗಾವಿಯ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಗಂಗಾ ಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಸೂಕ್ಷೇತ್ರ ನರಸೀಪೂರದ ನಿಜಶರಣ ಅಂಬಿಗರ ಚೌಡಯ್ಯನವರ ಪೀಠದ ಜಾತ್ರಾಮಹೋತ್ಸವಕ್ಕೆ ತಾಲೂಕಿನ ಭಕ್ತರು ನೀಡಿದ ದವಸದಾನ್ಯಗಳನ್ನು ಶ್ರೀ ಮಠಕ್ಕೆ ಸಾಗಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದಿನ ಯುವ ಪೀಳಿಗೆ ಡಿಜೆಯಂತ ಅಬ್ಬರದ ಸಂಸ್ಕೃತಿಗೆ ಮಾರುಹೋಗುತ್ತಿರುವ ಕಾಲದಲ್ಲಿ ತಾಲೂಕಿನ ಗಂಗಾಮತ ಸಮುದಾಯವು ದಾಸೋಹದಂತ ಸಂಸ್ಕೃತಿಯನ್ನು ಅಪ್ಪಿಕೊಂಡಿರುವುದು ಸಮಾಜದ ಆರೋಗ್ಯಕರ ಬೆಳವಣಿಗೆಗೆ ಸಂಕೇತವಾಗಿದೆ. ಜಾತ್ರಾ ಮಹೋತ್ಸವದ ಅನ್ನದಾಸೋಹಕ್ಕೆ ಯಾವುದೇ ಕೊರತೆ ಬಾರದಂತೆ ಸಮುದಾಯದ ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರೊಟ್ಟಿ, ದವಸ ದಾನ್ಯಗಳನ್ನು ದಾನ ಮಾಡಿದ್ದಾರೆ . ಭಕ್ತರ ಈ ಉದಾರ ಗುಣವು ಶರಣರ ತತ್ವಗಳ ಮೇಲಿರುವ ಭಕ್ತಿಗೆ ಸಾಕ್ಷಿಯಾಗಿದೆ ಎಂದರು.
ಗಂಗಾಮತ ಸಮಾಜದ ಜಿಲ್ಲಾಧ್ಯಕ್ಷ ಪರಶುರಾಮ ಸೊನ್ನದ ಮಾತನಾಡಿ, ತಾಲೂಕಿನ ಸಮಾಜ ಬಾಂಧವರು, ನೌಕರ ಬಂಧುಗಳು ಸೇರಿದಂತೆ ಅನೇಕರು ನಿಜ ಶರಣ ಅಂಬಿಗರ ಚೌಡಯ್ಯನವರ ಗುರುಪೀಠ ಸುಕ್ಷೇತ್ರ ನರಸೀಪುರದಲ್ಲಿ ನಡೆಯುತ್ತಿರುವ ಜಾತ್ರಮಹೋತ್ಸವಕ್ಕೆ ಯಥೇಚ್ಚವಾಗಿ ದವಸದಾನ್ಯಗಳನ್ನು ಮತ್ತು ಸುಮಾರು 40ಸಾವಿರ ರೊಟ್ಟಿಗಳನ್ನು ದಾನ ಮಾಡಿ, ರೊಟ್ಟಿ ಜಾತ್ರೆಯ ಮೂಲಕ ಭಕ್ತರಿಗೆ ಅನ್ನ ದಾಸೋಹಕ್ಕೆ ಸಹಕರಿಸಿದ್ದಾರೆ. ನಮ್ಮ ಸಮಾಜ ಬಾಂಧವರಿಗೆ ಆಶ್ರಯ ನೀಡಿದ ಶಿಗ್ಗಾವಿ ವಿರಕ್ತಮಠದ ಶ್ರೀ ಸಂಗನಬಸವ ಮಹಾಸ್ವಾಮಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ 12ನೇ ಶತಮಾನದ ಶರಣ ಕಲ್ಪನೆಯ ಸಮಾಜಕ್ಕೆ ಮತ್ತೊಮ್ಮೆ ಸಾಕ್ಷೀಕರಿಸಿದ್ದಾರೆ.
ಈ ಜಾತ್ರೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಡಿಸಿಎಂ ಡಿ.ಕೆ.ಶಿವಕುಮಾರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಆಗಮಿಸುತ್ತಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಈರಣ್ಣ ಬಾರ್ಕಿ, ನಿಂಗಣ್ಣ ಹೊಸಪೇಟಿ, ನಾಗಪ್ಪ ಓಲೆಕಾರ, ಬಸವರಾಜ ಹುಳ್ಳಿಕೊಪ್ಪಿ, ದೇವರಾಜ ಸುಣಗಾರ, ಅರ್ಜುನಪ್ಪ ಬಾರ್ಕಿ, ರುದ್ರಣ್ಣ ಬಂಕಾಪೂರ, ರಾಮಣ್ಣ ಅಂದಲಗಿ, ಗುಡ್ಡಪ್ಪ ಸುಣಗಾರ, ಚನ್ನಬಸಪ್ಪ ಅತ್ತಿಗೇರಿ, ನಿಂಗಣ್ಣ ಅತ್ತಿಗೇರಿ, ಗೀರೀಶ ಕರ್ಜಗಿ, ಆನಂದ ಹಾಳಿ, ಅಣ್ಣಪ್ಪ ಬಾರ್ಕಿ, ಚಂದ್ರು ಹಾಳಿ, ಮುತ್ತು ಕಟ್ಟಿಮನಿ, ಮಲ್ಲೇಶಪ್ಪ ಹುಬ್ಬಳ್ಳಿ, ಉಡಚಪ್ಪ ಬಾರ್ಕಿ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 