ಸಂತ ಶ್ರೇಷ್ಠ ಕನಕದಾಸರು ಕೀರ್ತಿನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು
The great saint Kanakadasa worked hard to build an equal society through his hymns.
ರಾಣಿಬೆನ್ನೂರು:8 ಸಂತ ಶ್ರೇಷ್ಠ ಕನಕದಾಸರು ಕೀರ್ತಿನೆಗಳ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದು ಪ್ರಾಚಾರ್ಯ ಕೆ. ಹಳದಪ್ಪ ಹೇಳಿದರು. ಶನಿವಾರ ನಗರದ ಪಿ ಬಿ. ರಸ್ತೆಯಲ್ಲಿರುವ ಹೊಸಮನಿ ಸಿದ್ದಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕನಕದಾಸರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು. ಕನಕದಾಸರ ಸಾಹಿತ್ಯ,ಕೀರ್ತನೆ, ಗೀತೆಗಳು ಜ್ಞಾನದ ಅಗರವಿದ್ದಂತೆ ಮತ್ತು ಸತ್ಯದ ಅರಿವು ಮೂಡಿಸುವ ಕೃತಿಗಳಾಗಿದ್ದವು ಅಲ್ಲದೆ 16ನೇ ಶತಮಾನದಲ್ಲಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿ ಸಮಾಜದ ಅಂಕಡೊಂಕುಗಳನ್ನು ತಿದ್ದಲು ಪ್ರಯತ್ನಿಸಿದರು. ಎಲ್ಲರೂ ಸಮಾನರು, ಪ್ರೀತಿ, ಸಹನೆ, ಮಮತೆ ಸಹಕಾರದಿಂದ ಜೀವನ ನಡೆಸಿದಲ್ಲಿ ನೆಮ್ಮದಿ ಕಾಣಲು ಸಾಧ್ಯ ಎಂದರು. ಭೂಗೋಳ ಶಾಸ್ತ್ರದ ಉಪನ್ಯಾಸಕ ಹೆಚ್.ಶಿವಾನಂದ, ಉಪನ್ಯಾಶಕ ರೇವಣ್ಣನಾಯಕ. ಪಿ.ಟಿ, ಡಾಽ ಹೆಚ್. ಓಂಕಾರನಾಯ್ಕ, ಆಶಾ ಆರ್, ಪ್ರವೀಣ ಪಾಟೀಲ್,ಆನಂದ ಕೆ.ಇ, ಭಾಗ್ಯಹರೀಶ.ಬ್ಯಾಡಗಿ ಸೇರಿದಂತೆ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 