ಮಾರುತೇಶ್ವರ ಕಾರ್ತಿಕೋತ್ಸವ, ಬಂದ ಲಕ್ಷ್ಮೀದೇವಿ ಜಾತ್ರೆ ವೈಭವ
The grandeur of the Lakshmi Devi fair has arrived at Maruteshwara Kartik festival
ಮಾರುತೇಶ್ವರ ಕಾರ್ತಿಕೋತ್ಸವ, ಬಂದ ಲಕ್ಷ್ಮೀದೇವಿ ಜಾತ್ರೆ ವೈಭವ
ರನ್ನ ಬೆಳಗಲಿ 01: ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಸುಕ್ಷೇತ್ರ ಮಹಾ ಕವಿ ರನ್ನನ ಜನ್ಮಸ್ಥಳವಾದ ರನ್ನ ಬೆಳಗಲಿಯ ಆರಾಧ್ಯದೈವ ಮಾರುತೇಶ್ವರ ಕಾರ್ತಿಕೋತ್ಸವ ಮತ್ತು ಬಂದ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವ ಜರಗುತ್ತಿದೆ.
ಮಂಗಳವಾರ ಮಾರುತೇಶ್ವರ ದೇವಸ್ಥಾನದಲ್ಲಿ ಮರು ಕಾರ್ತಿಕೋತ್ಸವ ಮುಂಜಾನೆ ಅವಧಿಯಲ್ಲಿ ಜರುಗಿದರೆ. ಸಾಯಂಕಾಲ ನಡುಓಕಳಿ ವಿಜೃಂಭಣೆಯಿಂದ ಜರುಗಿತು.
ಬುಧವಾರ ದಿ.2ರಂದು ಕೃಷ್ಣ ಹಿರೇಹೊಳೆಯಿಂದ ಮೆರವಣಿಗೆ ಮೂಲಕ ಎತ್ತಿನ ಗಾಡಿಗಳಲ್ಲಿ ತಂದ ಗಂಗಾಜಲದಿಂದ ಬಂದ ಲಕ್ಷ್ಮಿ ದೇವಿಗೆ ಅಭಿಷೇಕ ಹಾಗೂ ಮಹಾಪೂಜೆ ಮತ್ತು ಪಟ್ಟಣದ ಎಲ್ಲಾ ದೇವರುಗಳ ಅಭಿಷೇಕ ಜರುಗುವುದು. ನಂತರ ಬಂದ ಲಕ್ಷ್ಮಿ ದೇವಿ ಅಣ್ಣನಾದ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಪರಮಾನಂದ ದೇವರ ಹಾಗೂ ಹಿಡಕಲ್ ಗ್ರಾಮದ ಲಕ್ಕಮ್ಮ ದೇವಿ ಪಲ್ಲಕ್ಕಿ ಆಗಮಿಸುವುದು. ನಂತರ ಮಧ್ಯಾಹ್ನ 12 ಗಂಟೆಗೆ ಕರಿಕಟ್ಟುವದು ನಂತರ ಮಾರುತೇಶ್ವರ ದೇವಸ್ಥಾನದಲ್ಲಿ ವೈಭವದ ಕಡೆಯ ಹಾಲು ಓಕಳಿ ಸಾಯಂಕಾಲ ನಾಲ್ಕು ಗಂಟೆಗೆ ಊರಿನ ಸರ್ವ ಹಿರಿಯರ ನೇತೃತ್ವದಲ್ಲಿ ನೆರವೇರುತ್ತದೆ. ಓಕಳಿ ಮುಕ್ತಾಯಗೊಂಡ ನಂತರವೇ ಪಟ್ಟಣದ ಆರಾಧ್ಯ ದೇವತೆ ಬಂದ ಲಕ್ಷ್ಮೀ ದೇವಿಯ ರಥೋತ್ಸವದ ವೈಭವ ಜರಗುವುದು.
ನೆರೆಯ ಮುಗಳಖೋಡ ಗ್ರಾಮದ ಪರಮಾನಂದ ಅಜ್ಜನ ಪಲ್ಲಕ್ಕಿ, ಒಂಟಗೋಡಿ, ಹಿಡಕಲ್ಲ ಗ್ರಾಮಗಳ ಲಕ್ಷ್ಮೀದೇವಿಯರ ಪಲ್ಲಕ್ಕಿ, ಸ್ಥಳೀಯ ದೇವಾಣದೇವತೆಗಳ ಪಲ್ಲಕ್ಕಿಗಳು ಪಾಲ್ಗೊಳ್ಳುವವು, ವಿಶೇಷವಾಗಿ ಅತಿ ಎತ್ತರದ ಖಂಡಾಳ ಬಾಸಿಂಗ್,ನಂದಿ ಕೋಲು, ಜನಪದ ಕಲಾ ಪ್ರಕಾರಗಳಾದ ಕುದುರೆ ಕುಣಿತ, ಹಲಗೆ ವಾದನ, ಸಹನಾಯಿ ವಾದನ, ಕರಡಿಮೇಳ, ಕುದುರೆ ಕುಣಿತ, ರಾಮಾಯಣ, ಮಹಾಭಾರತ, ಸನ್ನಿವೇಶಗಳ ಪ್ರಸ್ತುತಪಡಿಸುವ ಗೊಂಬೆ ವೇಷಧಾರಿಗಳ ಚದ್ಮವೇಷವು ಅದರ ಮಧ್ಯೆ ಹಾಸ್ಯ ನಗೆಯನ್ನು ಬೀರುವ ಜೋಕರ್ ಗೊಂಬೆಗಳ ಕುಣಿತ ನೋಡುಗರನ್ನು ನಕ್ಕು ನಲಿಸುತ್ತವೆ ಹೀಗೆ ಹತ್ತು ಹಲವು ಜನಪದ ಕಲಾ ಮೇಳಗಳ ಮಧ್ಯದಲ್ಲಿ ಶ್ರೀದೇವಿಯ ರಥೋತ್ಸವವು ಪಾದಗಟ್ಟೆಯಿಂದ ಪ್ರಾರಂಭಗೊಂಡು ದೇವಿಯ ಭವ್ಯ ಮಂದಿರದ ವರೆಗೆ ರಾತ್ರಿಪೂರ್ಣ ಸಾಗುವುದು.
ಈ ಜಾತ್ರಾ ವೈಭವ ನೋಡಲು ಸುತ್ತ ಮುತ್ತಲಿನ ಗ್ರಾಮಗಳ ಭಕ್ತರು ಸೇರಿ, ಶ್ರೀದೇವಿಗೆ ಅನೇಕ ಭಕ್ತಿ ಕಾಣಿಕೆ ಸಮರ್ಿಸಿ ಬೇಡಿಕೊಳ್ಳುವ ವಾಡಿಕೆ ಇದೆ. ಮರುದಿನ ಗುರುವಾರದಂದು ಸಾಯಂಕಾಲ ರಾಷ್ಟ್ರಮಟ್ಟದ ಜಂಗಿ ನಿಕಾಲಿ ಕುಸ್ತಿ ಸ್ಪರ್ಧೆ ಜರುಗುತ್ತದೆ, ನಂತರ ಮರು ರಥೋತ್ಸವವು ಬಂದ ಲಕ್ಷ್ಮಿ ದೇವಸ್ಥಾನದ ಆವರಣ ದಿಂದ ತೇರಿನ ಮನೆಯವರೆಗೂ ರಾತ್ರಿ ಪೂರ್ಣ ರಥೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಜರುಗುತ್ತದೆ. ಈ ಎರಡು ದಿನಗಳ ಕಾಲ ಅನೇಕ ಸ್ಥಳಗಳಲ್ಲಿ ಸ್ಥಳೀಯ ಕಲಾವಿದರಿಂದ ನಾಟಕಗಳು, ರಸಮಂಜರಿ ಕಾರ್ಯಕ್ರಮ, ಚೌಡಕಿ ಗಾಯನ, ಗೊಂದಲಿ ಕಥೆಗಳು, ಡೊಳ್ಳಿನ ಗಾಯನಗಳು ಜರುಗುತ್ತವೆ, ಮತ್ತು ಜಾತ್ರೆಗೆ ಆಗಮಿಸಿದ ಸರ್ವ ಭಕ್ತಾದಿಗಳಿಗೆ ಮೂರು ದಿನಗಳ ಕಾಲ ಮಹಾಪ್ರಸಾದವು ಸ್ಥಳೀಯ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಿರಂತರ ಹಗಲು-ರಾತ್ರಿ ಜರುಗುತ್ತದೆ. ಮಾರನೇ ದಿನ ಶುಕ್ರವಾರ ದಂದು ದೇವಸ್ಥಾನದ ಪಕ್ಕದಲ್ಲಿ ಗ್ರಾಮೀಣ ಸಾಹಸ ಕ್ರೀಡೆಯಾದ ಸಂಗ್ರಾಮ ಕಲ್ಲು ಎತ್ತುವ ಸ್ಪರ್ಧೆ ಜರುಗುತ್ತವೆ. ಅದೇ ದಿನ ಮುಗುಳಖೋಡ ಪರಮಾನಂದ ಪಲ್ಲಕ್ಕಿ ನಿರ್ಗಮಿಸುವ ಸಮಯದಲ್ಲಿ ವರ್ಷದ ಭವಿಷ್ಯವಾಣಿಯನ್ನು ಮುಗಳಖೋಡ ಪರಮಾನಂದ ದೇವಸ್ಥಾನದ ಹಿರಿಯ ಅರ್ಚಕರು ಪರಮಾನಂದ ಅಜ್ಜನ ಪಲ್ಲಕ್ಕಿ ಹೊತ್ತಿಕೊಂಡು ವರ್ಷದ ಭವಿಷ್ಯವಾಣಿಯನ್ನು ನುಡಿಯುತ್ತಾರೆ ಇಲ್ಲಿಗೆ ಜಾತ್ರೆ ಮುಕ್ತಾಯಗೊಳ್ಳುತ್ತದೆ ಎಂದು ಜಾತ್ರಾ ಮಹೋತ್ಸವದ ಹಿರಿಯರು ಈ ಮಾಹಿತಿಯನ್ನು ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 