ಆತ್ಮ ರಕ್ಷಣೆ ನೀಡುವ ಕರಾಟೆಯನ್ನು ಸರ್ಕಾರ ಪ್ರೋತ್ಸಾಹಿಸಬೇಕು
The government should encourage karate as a form of self-defense
ಹಾವೇರಿ 04:ಎಲ್ಲಾ ವಯಸ್ಸಿನವರು ಕಲಿಯಬಹುದಾದ ಹಾಗೂ ತಮ್ಮನ್ನು ತಾವು ಆತ್ಮರಕ್ಷಣೆ ನೀಡುವ ಕರಾಟೆಯನ್ನು ಸರ್ಕಾರ ಪ್ರೋತ್ಸಾಹಿಸಬೇಕಿದೆ ಎಂದು ಕರಾಟೆ ತರಬೇತಿದಾರರಾದ ಉಡಚಪ್ಪ ಮಾಳಗಿ ಹೇಳಿದರು.
ಇಲ್ಲಿನ ಜಿಲ್ಲಾ ಕ್ರೀಡಾಂಗಣದ ಒಳಾಂಗಣದಲ್ಲಿ ಆಯೋಜಿಸಿದ ಕರಾಟೆ ಬ್ಲಾಕ್ ಬೆಲ್ಟ್,ಬ್ರೌನ್ ಬೆಲ್ಟ್.ಆರಂಜಿ,ಪಿಂಕ್ ಹಾಗೂ ವೈಟ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಬೆಲ್ಟ್ ಸರ್ಟಿಪಿಕೆಟ್ ವಿತರಣಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಸ್ವೀಕರಿಸಿ ಅವರು ಮಾತನಾಡಿದರು.
ಎಲ್ಲಾ ಕಾಲ-ಸಂದರ್ಭಗಳಲ್ಲಿ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳಲು ಕರಾಟೆ ಸಹಕಾರಿಯಾಗಲಿದೆ.ಕರಟೆಯ ತರಬೇತಿಯನ್ನು ಆಸಕ್ತಿದಾಯಕವಾಗಿ ಕಲಿಯಲು ಕಿರಿಯ-ಹಿರಿಯರು ಮುಂದಾಗಬೇಕು.ಹೆಚ್ಚಿನ ಪ್ರೋತ್ಸಾಹ ನೀಡಲು ಸರ್ಕಾರ ಮುಂದಾಗಬೇಕು.ಜಿಲ್ಲೆಯಲ್ಲಿ ಕರಾಟೆಗೆ ಪ್ರೋತ್ಸಾಹ ನೀಡಲು ಹಿರಿಯ ತರಬೇತಿದಾರರು ಸಿದ್ದರಿದ್ದೇವೆ ಎಂದು ಉಡಚಪ್ಪ ಮಾಳಗಿ ಹೇಳಿದರು.
ಗ್ರೈಡ್ ಮಾಸ್ಟರ್ 7ನೇ ಬ್ಲಾಕ್ ಬೆಲ್ಟ್ ತರಬೇತಿದಾರರಾದ ಮಂಜುನಾಥ ಜೈನ್ ಅವರು ಕರಾಟೆ ಬ್ಲಾಕ್ ಬೆಲ್ಟ್,ಬ್ರೌನ್ ಬೆಲ್ಟ್.ಆರಂಜಿ,ಪಿಂಕ್ ಹಾಗೂ ವೈಟ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತಿರ್ಣರಾದವರಿಗೆ ಬೆಲ್ಟ್ ಸರ್ಟಿಪಿಕೆಟ್ ಹಾಗೂ ಬೆಲ್ಟ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು ಹೆಚ್ಚಿನ ಸಂಖ್ಯೆಯಲ್ಲಿ ಕರಾಟೆ ತರಬೇತಿ ಪಡೆಯಲು ವಿದ್ಯಾರ್ಥಿಗಳು ಮುಂದೆ ಬರಬೇಕಿದೆ.ಆರೋಗ್ಯಕರ ಸಮಾಜಕ್ಕೆ ಕರಾಟೆ ಸಹಕಾರಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹರೀಶ ಮಾಳಗಿ,ಉಪಾಧ್ಯಕ್ಷರಾದ ರಾಮು ಯಳ್ಳೂರ,ಫಕ್ಕಿರೇಶ ಹರಿಜನ,ಅಹ್ಮದಶರೀಪ ತೆರಣಿ,ಕೋಚಿಂಗ್ ಮಾಸ್ಟರ್ ಮಂಜುನಾಥ ಕೆರೆಕೊಪ್ಪ,
ಆಕಾಶ ಜೈನ್,ಪ್ರದೀಪ ಉಪ್ಪಾರ, ಶ್ರೀಧರ ಬ್ಯಾಡಗಿ, ಪ್ರದೀಪಕುಮಾರ ಉಪ್ಪಾರ ಕರಾಟೆ ಸಂಘದ ಪದಾಧಿಕಾರಿಗಳು,ಕರಾಟೆ ತರಬೇತಿದಾರರು ಹಾಗೂ ಕರಾಟೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 