ಜ್ಞಾನದ ಭಯದಿಂದ ಶಾಲೆ ಮುಚ್ಚುತ್ತಿರುವ ಸರ್ಕಾರ! ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಊರಿನ ಶಾಲೆ ಮುಚ್ಚುವುದನ್ನು ವಿರೋಧಿಸಿ ಬಾಳಗಮಟ್ಟಿ ಗ್ರಾಮಸ್ಥರ ಪ್ರತಿಭಟನೆ!
The government is closing schools out of fear of knowledge! Balagamatti villagers protest against t
ಬೆಳಗಾವಿ :1951 ರಲ್ಲಿ ಸ್ಥಾಪನೆಯಾಗಿರುವ ಬಾಳಗಮಟ್ಟಿಯ ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಗೆ 75 ವರ್ಷಗಳು ತುಂಬಿವೆ. ಶಾಲೆಯ ಅಮೃತ ಮಹೋತ್ಸವದ ಹಿನ್ನೆಲೆಯಿಂದ ಸರ್ಕಾರವು ಶಾಲೆಗೆ ಅಭಿವೃದ್ಧಿಯ ಕೊಡುಗೆ ನೀಡಬೇಕಿತ್ತು ಆದರೆ ಅದಕ್ಕೆ ವಿರುದ್ಧವಾಗಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಲ್ಲಿ ಊರಿನ ಶಾಲೆಯನ್ನು ಮುಚ್ಚಲಾಗುತ್ತಿದೆ. ಸರ್ಕಾರದ ಈ ಜನ ವಿರೋಧಿ ನಡೆಯನ್ನು ಖಂಡಿಸಿ ಊರಿನ ವಿಠೋಬಾ ದೇವಸ್ಥಾನದ ಮುಂದೆ ಸೇರಿದ ಗ್ರಾಮಸ್ಥರು ಎಐಡಿಎಸ್ಓ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಐಡಿಎಸ್ಓ ಜಿಲ್ಲಾ ಸಂಚಾಲಕರಾದ ಮಹಾಂತೇಶ ಬಿಳೂರ್ ಮಾತನಾಡಿ, "ಆಳ್ವಿಕರ ಗದ್ದುಗೆಯು ಜನರ ಅಜ್ಞಾನದ ಮೇಲೆ ನಿಂತಿದೆ ಎಂಬ ಮಾತಿನಂತೆ ಎಲ್ಲ ಕಾಲಕ್ಕೂ ಆಳ್ವಿಕರು ಜನರನ್ನು ಅಜ್ಞಾನಿಗಳನ್ನಾಗಿ ಮಾಡಲು ಯತ್ನಿಸಿದ್ದಾರೆ. ಅದೇ ರೀತಿ ಊರಿನಲ್ಲಿ ಶಾಲೆಗಳಿದ್ದರೆ ಬಡ ಮಕ್ಕಳು ಜ್ಞಾನಾರ್ಜನೆ ಮಾಡುತ್ತಾರೆ. ಪ್ರಪಂಚವನ್ನು ವಸ್ತುನಿಷ್ಠವಾಗಿ ಅರಿಯುವ ಸಾಮರ್ಥ್ಯವನ್ನು ಗಳಿಸಿ ಸಮಸ್ಯೆಗಳನ್ನು ಕಂಡಾಗ ಸರ್ಕಾರಗಳನ್ನು ಪ್ರಶ್ನೆ ಮಾಡುತ್ತಾರೆ. ಈ ಪ್ರಶ್ನೆಗಳಿಗೆ ಸರ್ಕಾರವು ಹೆದರುತ್ತಿದೆ. ಸರ್ಕಾರಗಳ ಅನ್ಯಾಯದ ವಿರುದ್ಧ ಇಂದಿನ ಮಕ್ಕಳು ನಾಳೆ ಹೋರಾಟ ಹೂಡುತ್ತಾರೆ ಎಂದು ಸರ್ಕಾರವು ಬಯಗ್ರಸ್ತವಾಗಿದೆ. ಜ್ಞಾನದ ಈ ಭಯದಿಂದ ಊರಿನ ಶಾಲೆಗಳನ್ನು ಮುಚ್ಚಿ ಬಡ ಮಕ್ಕಳನ್ನು ಅಜ್ಞಾನಕ್ಕೆ ತಳ್ಳುವ ಕುಕೃತ್ಯಕ್ಕೆ ಸರ್ಕಾರವು ಮುಂದಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಂದುವರೆದು, "ಇಂದು ಹಸಿವು, ಬಡತನ, ನಿರುದ್ಯೋಗ ಹಾಗೂ ರೈತರ ಆತ್ಮಹತ್ಯೆ ಸೇರಿದಂತೆ ಅನೇಕ ಸವಾಲುಗಳನ್ನು ನಮ್ಮ ದೇಶ ಎದುರಿಸುತ್ತಿದೆ. ಪ್ರತಿದಿನ 5 ಸಾವಿರಕ್ಕೂ ಅಧಿಕ ಮಕ್ಕಳು ಹಸಿವೆಯಿಂದ ಸಾವಿಗೀಡಾಗುತ್ತಿದ್ದಾರೆ. ಬದುಕುವುದೇ ಸವಾಲ್ ಆಗಿರುವ ಇಂದಿನ ಪರಿಸ್ಥಿತಿಯಲ್ಲಿ ಸರ್ಕಾರಗಳು ಜನರ ಬದುಕನ್ನು ಉತ್ತಮ ಪಡಿಸುವ ಯೋಜನೆಗಳನ್ನು ಜಾರಿಗೊಳಿಸಬೇಕಿತ್ತು. ಆದರೆ ತದ್ವಿರುದ್ಧವಾಗಿ ಜನರ ಬದುಕನ್ನು ಸರ್ವನಾಶಗೊಳಿಸಿ ಕೇವಲ ಕೆಲವು ಜನ ಬಂಡವಾಳ ಶಾಹಿಗಳ ಹಿತಾಶಕ್ತಿಯನ್ನು ಕಾಪಾಡುವ ಕಾಯ್ದೆಗಳನ್ನೇ ಸರ್ಕಾರಗಳು ಜಾರಿ ಮಾಡುತ್ತಿವೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 