ಜನವಾಣಿಯನ್ನು ದೇವವಾಣಿಯಾಗಿ ಮಾಡಿದ ಕೀರ್ತಿ ಶರಣರದು

ಜನವಾಣಿಯನ್ನು ದೇವವಾಣಿಯಾಗಿ ಮಾಡಿದ ಕೀರ್ತಿ ಶರಣರದು The glory of making the voice of the people into the voice of God belongs to Sharan.

ಜನವಾಣಿಯನ್ನು ದೇವವಾಣಿಯಾಗಿ ಮಾಡಿದ ಕೀರ್ತಿ ಶರಣರದು 

ವಿಜಯಪುರ, 28 : ಶಿ.ಶಿ.ಬಸವನಾಳರು ಆದರ್ಶ ಪ್ರಾಧ್ಯಾಪಕರಾಗಿ, ಸಮರ್ಥ ಸಂಪಾದಕರಾಗಿ, ನಿಸ್ಪೃಹ ಸಮಾಜ ಕಾರ‌್ಯಕರ್ತರಾಗಿ, ಸತ್ಯಾನ್ವೇಷಣೆಯ ಸಂಶೋಧಕರಾಗಿ, ನಿಷ್ಪಕ್ಷಪಾತ ಪತ್ರಿಕಾಕರ್ತರಾಗಿ, ಕುಟುಂಬವತ್ಸಲರಾಗಿ, ಕರುಣಾಮಯಿ ಆಪದ್ ಭಾಂದವರಾಗಿ, ಕಾಯಕಯೋಗಿಯಾಗಿ ಬದುಕಿದವರು. ಅಷ್ಟೇ ಅಲ್ಲ ಕನ್ನಡದಲ್ಲಿ ಕೈಕೊಂಡ ಅವರ ಕಾರ‌್ಯ ಸಾಧನೆ ಅಸದೃಶ್ಯವಾಗಿದೆ. ಅನುಕರಣೀಯವು ಆಗಿದೆ. ಜನವಾಣಿಯನ್ನು ದೇವವಾಣಿ ಮಾಡಿದರೆಂದು ಬಸವನಾಳರು ಹೇಳಿದ್ದು ಅರ್ಥಪೂರ್ಣವಾಗಿದೆ ಎಂದು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮುಖ್ಯಸ್ಥ ಡಾ. ಮಹೇಶ ಚಿಂತಾಮಣಿಯವರು ಹೇಳಿದರು.  ಶನಿವಾರ ನಗರದಲ್ಲಿ ನಡೆದ ವಚನಪಿತಾಮಹ ಡಾ. ಫ.ಗು.ಹಳಕಟ್ಟಿ ಅನುಭಾವ ಹಿ ಮರುಭೆಟ್ಟಿ ಕಾರ‌್ಯಕ್ರಮದಲ್ಲಿ ಮಾತನಾಡಿದರು.  ಬೆಳಗಾವಿ, ಧಾರವಾಡ, ತಮ್ಮ ಕರ್ಮಭೂಮಿ ಮಾಡಿಕೊಂಡು, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವುಗಳ ಸದಸ್ಯರಾಗಿ ವಿವಿಧ ಗ್ರಂಥಗಳನ್ನು ಪ್ರಕಟಿಸಿ ಮತ್ತು ಪತ್ರಿಕಾ ಸಂಪಾದಕರಾಗಿ ಕಾರ‌್ಯ ಮಾಡಿದ್ದು ಶ್ಲಾಘನೀಯವಾಗಿದೆ.  ಅಂತೆಯೇ ಇವರಿಗೆ ಹಲವಾರು ಪ್ರಶಸ್ತಿಗಳು ಸಂದವು. 

ಬಿ.ಎಂ.ಪಾಟೀಲರವರು ಪ್ರಾರ್ಥಿಸಿದರು. ಡಾ. ವಿ.ಡಿ.ಐಹೊಳ್ಳಿ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಡಾ. ಸುಭಾಸ ಕನ್ನೂರ ಕಾರ‌್ಯಕ್ರಮ ನಿರೂಪಿಸಿದರು. ಡಾ. ಸಂಗಮೇಶ ಮೇತ್ರಿ ವಂದಿಸಿದರು. ಡಾ. ಎಂ.ಎಸ್‌.ಮದಭಾವಿ, ಆರ್‌.ಕೆ.ಕುಲಕರ್ಣಿ, ಪ್ರೊ. ಎಸ್‌.ಬಿ.ದೊಡಮನಿ, ಎಸ್‌.ವಾಯ್‌.ಗದಗ, ಮ.ಗು.ಯಾದವಾಡ, ಜ.ಸ.ಗಲಗಲಿ, ಬಿ.ಆರ್‌.ಬನಸೋಡೆ, ವಿ.ಎಸ್‌.ಖಾಡೆ, ವ್ಹಿ.ಎಸ್‌.ಬಗಲಿ, ಕೆ.ಎಸ್‌.ಬಿರಾದಾರ, ಎಂ.ಎಸ್‌.ಝಳಕಿ, ಅರವಿಂದ ಕಂಚ್ಯಾಣಿ, ಡಾ. ಎಂ.ಎಸ್‌.ಚಾಂದದಕವಟೆ, ಡಾ. ಸೋಮಶೇಖರ ವಾಲಿ, ಎಸ್‌.ಬಿ.ನಾಡಗೌಡ, ಹತ್ತಿ ಮತ್ತು ಬ್ಯಾಕೋಡ, ಕೊಪ್ಪಾ ಮೇಡಂ ಸುಭಾಸ ಯಾದವಾಡ ಸುಮಾರು 60ಕ್ಕಿಂತ ಹೆಚ್ಚು ಜನ ಉಪಸ್ಥಿತರಿದ್ದರು.