ನಂದಿ ಸಹಕಾರಿ ಸಕ್ಕರೆ ಕಾರಖಾನೆಯ ವಾಷರ್ಿಕ ಸರ್ವಸಾಧಾರಣ ಸಭೆ ಯಶಸ್ವಿ

ವಿಜಯಪುರ 25: ವಿಜಯಪುರ ತಾಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರಖಾನೆಯ 2017-18ನೇ ಸಾಲಿನ ವಾಷರ್ಿಕ ಸರ್ವಸಾಧಾರಣಾ ಸಭೆಯು ಸಫಮವಾರ ಕಾಖರ್ಾನೆಯ ಆವರಣದಲ್ಲಿ ಯಶಸ್ವಿಯಾಗಿ ಜರುಗಿತು.

    ಕಾಖರ್ಾನೆಯ ಉಪಾಧ್ಯಕ್ಷ ಡಿ.ಎಸ್. ದೇಸಾಯಿ ಅವರು ಸಭೆಯ ಅಧ್ಯಕ್ಷತೆ ವಹಿಸಿ 2017-18 ಸಾಲಿನ ವಾಷರ್ಿಕ ವರದಿ ಓದಿದರು.

        ಸಭೆಯಲ್ಲಿ ಶೇರು ಸದಸ್ಯರು ಕೇಳಿದ ವಿವಿಧ ಪ್ರಶ್ನೆಗಳಿಗೆ ನಿದರ್ೇಶಕ ಮಂಡಳಿಯವರು ಹಾಗೂ ವ್ಯವಸ್ಥಾಪಕ ನಿದರ್ೇಶಕರವರು ಮತ್ತು ವಿಭಾಗದ ಮುಖ್ಯಸ್ಥರು  ಉತ್ತರ ನೀಡಿದರು. 

       ಕಾರಖಾನೆಯ ವ್ಯವಸ್ಥಾಪಕ ನಿದರ್ೇಶಕ ರಾಜಗೋಪಾಲ್ ಅವರು ಮಾತನಾಡಿ, ಕಾಖರ್ಾನೆಯು 26ನೇ ವರ್ಷದ ಕಬ್ಬು ಅರೆಯುವ ಹಂಗಾಮಿನಲ್ಲಿ ಅಂದರೆ ಸನ್ 2017-18ರಲ್ಲಿ ಒಟ್ಟು 146 ದಿವಸದಲ್ಲಿ ಒಟ್ಟು 8,43,050 ಮೆ.ಟನ್. ಕಬ್ಬು ನುರಿಸಿ 9,73,824 ಕ್ವಿಂಟಲ್ ಸಕ್ಕರೆ ಉತ್ಪಾದಿಸಿ ಶೇಕಡಾ 11.55 ರಷ್ಟು ಇಳುವರಿ ಪಡೆದಿರುವದನ್ನು ಹಾಗೂ ಮುಂಬರುವ ಸನ್ 2018-19 ಹಂಗಾಮಿಗೆ 10 ಲಕ್ಷ (ಹತ್ತು ಲಕ್ಷ ) ಮೆಟ್ಟಿಕ್ ಟನ್ ಕಬ್ಬು ನುರಿಸುವ ಗುರಿ ಹಮ್ಮಿಕೊಂಡಿರುವದನ್ನು ಸಭೆಗೆ ತಿಳಿಯಪಡಿಸಿ ಮುಂಬರುವ 2018-19ನೇ ಕಬ್ಬು ಅರೆಯುವ ಹಂಗಾಮಿಗೆ ರೈತರು ಕಾಖರ್ಾನೆಗೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಕಳುಹಿಸಬೇಕೆಂದು ರೈತರಿಗೆ ಮನವಿ ಮಾಡಿಕೊಂಡರು. 

ಕಾಖರ್ಾನೆಯ ಆಡಳಿತ ಮಂಡಳಿಯ ನಿದರ್ೇಶಕರಾದ ಶಶಿಕಾಂತಗೌಡ ಪಾಟೀಲ, ಉಮೇಶ ಮಲ್ಲಣ್ಣವರ, ಗೌಡಪ್ಪ ಕೋಣಪ್ಪನವರ, ತಿಮ್ಮನಗೌಡ ಪಾಟೀಲ, ದುಂಡಪ್ಪ ದೇವನಾಳ, ಶಿವನಗೌಡ ಬಿರಾದಾರ, ಪ್ರವೀಣ ಸರನಾಯಕ, ರಮೇಶ ಬಿದನೂರ, ಗೌಡಪ್ಪಗೌಡ ಪಾಟೀಲ, ಈರಣ್ಣಾ ಕೊಪ್ಪದ,  ಹಾಗೂ ಅಪ್ಪಾಸಾಹೇಬ ಗಣಿ,  ಶಶಿಕಾಂತಗೌಡ ಪಾಟೀಲ, ರಮೇಶ ಜಕರಡ್ಡಿ, ಹೆಚ್.ಆರ್. ಬಿರಾದಾರ, ರಾಮಪ್ಪ ಶೇಬಾಣಿ, ಸಿದ್ದಣ್ಣ ದೇಸಾಯಿ, ತಿಮ್ಮಣ್ಣ ಅಮಲಝರಿ, ವೆಂಕಣ್ಣಾ ಬಿದರಿ, ಹಣಮಂತ ಕೊಣ್ಣೂರ, ಹಣಮಂತ ಕಡಪಟ್ಟಿ, ರಾಮಪ್ಪ ಹರಿಜನ, ಗೋಪಾಲ ನಾಯ್ಕರ, ಆನಂದ ಮಂಗಳವೇಡೆ ಹಾಗೂ ರೈತರು -ರೈತ ಮುಖಂಡರು ಉಪಸ್ಥಿತರಿದ್ದರು. ಮಹೇಂದ್ರಕರ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಳಿಕೋಟೆ : ತಾಲೂಕಾ ಮಟ್ಟದ ವ್ಹಾಲಿಬಾಲ ಕ್ರೀಡಾಕೂಟದಲ್ಲಿ ಲಿಂಗದಳ್ಳಿಯ ಸಕರ್ಾರಿ ಪ್ರೌಢ ಶಾಲೆಯ ಬಾಲಕ ಬಾಲಕಿಯರ ತಂಡದವರು ಪ್ರಥಮ ಸ್ಥಾನ ಪಡೆದುಕೊಂಡ ತಂಡಗಳು. 

-------