ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ : ಗ್ರಾಪಂ ಅಧ್ಯಕ್ಷೆ ಪೂಜಾರಿ ಈರಮ್ಮ
The future of children is in the hands of teachers: Gram Panchayat President Poojary Eeramma
ಕಂಪ್ಲಿ 14: ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಮೆಟ್ರಿ ಕ್ಲಸ್ಟರ್‌ವತಿಯಿಂದ ಬದಲಾವಣೆ ಶಿಕ್ಷಣ ಭವಿಷ್ಯದ ನಿರ್ಮಾಣ ಎಂಬಂತೆ ಪೋಷಕರ-ಶಿಕ್ಷಕರ ಮಹಾಸಭೆ ಶುಕ್ರವಾರ ನಡೆಯಿತು. ಗ್ರಾಪಂ ಅಧ್ಯಕ್ಷೆ ಪೂಜಾರಿ ಈರಮ್ಮ ರಮೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ. ಪ್ರತಿಯೊಂದು ಹಂತದಲ್ಲಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕಾಗಿದೆ. ಶಿಕ್ಷಣದ ಜೊತೆಗೆ ವ್ಯಕ್ತಿತ್ವ ವಿಕಾಸ ಅತಿಮುಖ್ಯವಾಗಿದೆ ಎಂದರು. ಮುಖ್ಯಗುರು ಎಚ್.ಪಿ.ಸೋಮಶೇಖರ ಮಾತನಾಡಿ, ಮಕ್ಕಳಲ್ಲಿ ಒಳ್ಳೆಯ ಶಿಕ್ಷಣ ನೀಡುವುದು ಪ್ರತಿಯೊಬ್ಬ ಶಿಕ್ಷಕರ ಕರ್ತವ್ಯವಾಗಿದೆ. ಇಂದಿನ ಮಕ್ಕಳೇ ಇಂದಿನ ಪ್ರಜೆಗಳು ಎಂಬಂತೆ ಶಿಕ್ಷಣವನ್ನು ಪಡೆದುಕೊಂಡಾಗ ಮಾತ್ರ ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಪ್ರತಿಭಾವಂತ ಮಕ್ಕಳಿಗೆ ಹಳೆ ವಿದ್ಯಾರ್ಥಿಗಳಿಂದ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಎನ್.ನಾಗರಾಜ, ಸದಸ್ಯರಾದ ಬೂದಾಳ್ ರವಿ, ವಿರುಪಾಕ್ಷಿ, ದೇವರಮನೆ ಮಲ್ಲಿಕಾರ್ಜುನ, ಒಡೆಯರ್‌ಸ್ವಾಮಿ, ವಡ್ರು ಜಡೆಪ್ಪ, ಎಸ್ಡಿಎಂಸಿ ಅಧ್ಯಕ್ಷರಾದ ಶಿವರಾಜಕುಮಾರ, ದೇವರಮನೆ ಪಂಪಾಪತಿ, ಸದಸ್ಯರಾದ ಪೂಜಪ್ಪ, ಕರೇಗೌಡ್ರು ಮಂಜುನಾಥ, ಕೆ.ರಾಮಲಿ, ಗೊರವರ ಗಾದಿಲಿಂಗಪ್ಪ, ಪಿ.ನಾಗೇಶ್ವರಿ, ಸಹಕಾರ ಸಂಘದ ಅಧ್ಯಕ್ಷ ಸಿದ್ದಯ್ಯ, ಮುಖ್ಯಗುರುಗಳಾದ ಎಚ್.ಪಿ.ಸೋಮಶೇಖರ, ನಂದಕಿಶೋರ್, ಮುಖಂಡರಾದ ಸಣ್ಣ ಮರೇಗೌಡ, ಸುರೇಶಗೌಡ, ಉಮೇಶಗೌಡ, ಗುಬಾಜಿ ರಾಮಾಂಜಿನಿ, ಗೌಡ್ರು ಷಣ್ಮುಕ, ಎಸ್.ಮಾರೇಶ, ಶಿವಕುಮಾರ, ಮಲ್ಲಿಕಾರ್ಜುನ, ಟಿ.ಎನ್.ರಮೇಶ, ಉಪ್ಪಾರಹಳ್ಳಿ ಸತ್ಯಣ್ಣ ಸೇರಿದಂತೆ ಪೋಷಕರು ಹಾಗೂ ಸಹ ಶಿಕ್ಷಕರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 