ಬಳಗಾನೂರಿನಲ್ಲಿ ಮೊದಲನೆ ದಿನದ ಪಾದಯಾತ್ರೆ ನಾವು ಕಟ್ಟಿಕೊಂಡಿರುವ ಸಂಸಾರ ಗಾಳಿಗಿಟ್ಟ ದೀಪವಾಗಿದೆ : ಪೂಜ್ಯಶ್ರೀ ಶಿವಶಾಂತವೀರ ಶರಣರು
The first day's padayatra in Balaganur is a beacon of light for the family we have built: Pujyashri
ಗದಗ 16 : ರೈತ ಭೂಮಿಯೊಳಗೆ ಎಲ್ಲ ಬೆಳೆಯನ್ನು ಬೆಳೆಯುತ್ತಾನೆ. ಹಾಗೇಯ ನನ್ನ ಬಳಗಾನೂರಿನ ಶರಣ ಬಳಗದವರು ಆತ್ಮ ಎನ್ನುವ ಭೂಮಿಯೊಳಗೆ ಭಕ್ತಿ ಎನ್ನುವಂತಹ ಬೆಳೆಯನ್ನು ಬೆಳೆದಿದ್ದಾರೆ ಎಂದು ಬಳಗಾನೂರಿನ ಚನ್ನವೀರ ಶರಣರ ಶ್ರೀಮಠದ ಪೂಜ್ಯಶ್ರೀ ಶಿವಶಾಂತವೀರ ಶರಣರು ಹೇಳಿದರು. ಬಳಗಾನೂರ ಗ್ರಾಮದಲ್ಲಿ ಚಿಕೇನಕೊಪ್ಪದ ಚನ್ನವೀರ ಶರಣರ 31 ನೇ ಪುಣ್ಯಸ್ಮರಣೋತ್ಸವ ಹಾಗೂ ಶ್ರೀಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರವಾರ ಹಮ್ಮಿಕೊಂಡ ಪಾದಯಾತ್ರೆಯಲ್ಲಿ ಅವರು ಮಾತನಾಡಿ, ಬಳಗಾನೂರ ಗ್ರಾಮ ನೋಡಲಿಕ್ಕೆ ಚಿಕ್ಕದಾಗಿದ್ದರೂ ಹೃದಯ ಶ್ರೀಮಂತಿಕೆಯಲ್ಲಿ ಬಹಳ ದೊಡ್ಡದಿದೆ.
ಪ್ರತಿಯೊಬ್ಬರು ಭಕ್ತಿ, ಧರ್ಮ, ಸಂಸ್ಕಾರ ಹಾಗೂ ಸಂಸ್ಕೃತಿ ಮೈಗೊಡಿಸಿಕೊಳ್ಳಬೇಕು ಎನ್ನವುದು ಪಾದಯಾತ್ರೆಯ ಮೂಲ ಉದ್ದೇಶವಾಗಿದೆ. ಶರಣರ ದೃಷ್ಟಿಯಲ್ಲಿ ನಾವು ಕಟ್ಟಿಕೊಂಡಿರುವ ಸಂಸಾರ ಗಾಳಿಗಿಟ್ಟ ದೀಪವಾಗಿದೆ. ಗಳಿಸಿದ ಚಿನ್ನ-ಬೆಳ್ಳಿ, ಹಿಡಿದಿರುವ ಭೂಮಿ, ಪಡೆದಿರುವ ಧನ-ಕನಕ, ಭೌತಿಕ ಸಂಪತ್ತು ಕ್ಷಣಿಕವಾಗಿದೆ. ನಮ್ಮನ್ನು ಸುಖ ನೀಡುವ, ನಮ್ಮನ್ನು ಸುಖಿಯನ್ನಾಗಿಸುವ ಸಂಪತ್ತು ಎಂದರೆ ದೇವರ ಕೃಪೆ, ದೇವರ ಕರುಣೆ ಮತ್ತು ದಾನ-ಧರ್ಮ ನಮ್ಮನ್ನು ಹೆಚ್ಚು ಸುಖಿಗಳನ್ನಾಗಿಸುತ್ತವೆ ಎಂದು ಹೇಳಿದ ಅವರು ಬಳಗಾನೂರ ಗ್ರಾಮವು ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದು, ಪಾದಯಾತ್ರೆಯ ಸಂದರ್ಭದಲ್ಲಿ ಸದ್ಬಕ್ತರೆಲ್ಲರೂ ಸೇರಿಕೊಂಡು ಅಚ್ಚುಕಟ್ಟಾಗಿ ಸಂಭ್ರಮದಿಂದ ಶ್ರೀಗಳನ್ನು ಬರಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸೊರಟೂರು- ಮಲ್ಲಗಿರಿಸಮುದ್ರದ ಓಂಕಾರೇಶ್ವರ ಶ್ರೀಮಠದ ಪೂಜ್ಯಶ್ರೀ ಪಕೀರೇಶ್ವರ ಶ್ರೀಗಳು ಸಮ್ಮುಖ ವಹಿಸಿ ಮಾತನಾಡಿ, ಪಾದಯಾತ್ರೆಯಿಂದ ಮನಸ್ಸು, ದೇಹಕ್ಕೆ ನೆಮ್ಮದಿ ಸಿಗುತ್ತದೆ. ಶ್ರೀಮಠದ ಜಾತ್ರಾ ಮಹೋತ್ಸವದಲ್ಲಿ ಭಕ್ತರು ದಾಸೋಹದಲ್ಲಿ, ಪ್ರಸಾದ ವಿತರಣೆ, ನೀರಿನ ವ್ಯವಸ್ಥೆ, ಶ್ರೀಮಠದಂಗಳವನ್ನು ಸ್ವಚ್ಚತೆ ಮಾಡಿದರೆ ಶರಣರು ನಿಮ್ಮ ಮನದಂಗಳವನ್ನು ಸ್ವಚ್ಚವಾಗಿರಿಸಿ, ಜ್ಞಾನದೀಪ ಬೆಳಗಿಸುತ್ತಾರೆ ಎಂದು ಹೇಳಿದರು. ಪಾದಯಾತ್ರೆಯಲ್ಲಿ ಪೂಜ್ಯಶ್ರೀ ಶಿವಶಾಂತವೀರ ಶರಣರು ಗವಿಸಿದ್ದೇಶ್ವರ ಶ್ರೀಗಳ ಹಾಗೂ ಸಜ್ಜಲಗುಡ್ಡದ ಶರಣಮ್ಮನವರ ಭಕ್ತಿ ಗೀತೆಗಳು ಸೇರಿದಂತೆ ಶರಣರ ವಚನಗಳನ್ನು ಹಾಡುವ ಮೂಲಕ ಗ್ರಾಮಸ್ಥರನ್ನು ಭಕ್ತಿಯ ಮಾರ್ಗದಲ್ಲಿ ಕರೆದುಕೊಂಡು ಹೋದರು. ಚಿಕೇನಕೊಪ್ಪದ ಚನ್ನವೀರ ಶರಣರ ಸೇವಾ ಭಜನಾ ಸಂಘದವರು ಸಾಥ್ ನೀಡಿದರು.
ದಾರಿಯೂದ್ದಕ್ಕೆ ರಂಗೋಲಿಯ ಚಿತ್ತಾರ, ದೀಪಗಳ ಅಲಂಕಾರ, ತಳಿರು-ತೋರಣಗಳಿಂದ ಶೃಂಗರಸಿ ಶ್ರೀಗಳನ್ನು ಬರಮಾಡಿಕೊಂಡರು. ಶಿವಲಿಂಗಯ್ಯ ಶಾಸ್ತ್ರೀಗಳು ಹಿರೇಮಠ ಸಿದ್ದಾಪೂರ ಅವರು ಕೊನೆಗೆ ಶಾಂತಿಮಂತ್ರ ಹೇಳಿದರು. ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಬಳಗಾನೂರಿನ ಬಾವಿ ಬಸವಣ್ಣ ದೇವಸ್ಥಾನದಿಂದ ಎರಡನೇ ದಿನದ ಪಾದಯಾತ್ರೆ ಆರಂಭಗೊಂಡು ಪ್ಲಾಟ್ ನಂ. 1 ಇಂದಿರಾನಗರ, ಪ್ಲಾಟ್ ನಂ. 2 ಕಬಾಡಿ ಪ್ಲಾಟ್, ಶ್ರೀ ಭೀಮಾಂಬಿಕಾ ದೇವಿ ಪ್ಲಾಟ್, ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮತ್ತು ಕಾಶಿಗೌಡ್ರ ಪ್ಲಾಟ್ ವರೆಗೆ ಪಾದಯಾತ್ರೆ ಜರುಗಿ ಮುಖ್ಯರಸ್ತೆ ಮೂಲಕ ಶ್ರೀಮಠವನ್ನು ತಲುಪಿ ಶ್ರೀಗಳ ತುಲಾಬಾರ ಮತ್ತು ಪೂಜ್ಯರ ಆಶೀರ್ವಚನ ನೀಡಲಿದ್ದಾರೆ. ನಂತರ ಗ್ರಾಮಸ್ಥರಿಂದ ಪ್ರಸಾದ ವಿತರಣೆ ನಡೆಯಲಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 