ಹೋಳಿ ಹುಣ್ಣಿಮೆಯಿಂದು ಸದ್ಭಕ್ತೆ ಹಾಲಮ್ಮದೇವಿ ಹಾಗೂ ಯಲ್ಲಮ್ಮ ದೇವಿ ಜಾತ್ರಾಮಹೋತ್ಸವ

ಹೋಳಿ ಹುಣ್ಣಿಮೆಯಿಂದು ಸದ್ಭಕ್ತೆ ಹಾಲಮ್ಮದೇವಿ ಹಾಗೂ ಯಲ್ಲಮ್ಮ ದೇವಿ ಜಾತ್ರಾಮಹೋತ್ಸವ The festival of the devotees Halamma Devi and Yellamma Devi is celebrated on the full moon day of H

ಬೀಳಗಿ 01 : ತಾಲೂಕಿನ ಹೊಸರೊಳ್ಳಿ ಗ್ರಾಮದಲ್ಲಿ ಕೃಷ್ಣಾ ತೀರದಲ್ಲಿ ನೆಲೆಸಿರುವ ಗುರು ಪದ್ಮರಾಜ ಶಿವಾಚಾರ್ಯರ ಸದ್ಭಕ್ತೆ ಹಾಲಮ್ಮದೇವಿ ಹಾಗೂ ಯಲ್ಲಮ್ಮ ದೇವಿ ಜಾತ್ರಾಮಹೋತ್ಸವ ಮಾರ್ಚ 3 ಹೋಳಿ ಹುಣ್ಣಿಮೆ ದಿನದಂದು ಸಡಗರ ಸಂಭ್ರಮದಿಂದ ಜರುಗಲಿದೆ. ಸ್ಥಳೀಯ ಗುರು ಪದ್ಮರಾಜ ಹಿರೇಮಠದ ಪೂಜ್ಯರಾದ ಶಂಕರಯ್ಯನವರು ಮುಂಜಾನೆ 6-00 ಘಂಟೆಗೆ ಪದ್ಮರಾಜ ಕತೃ ಗದ್ದುಗೆಗೆ ಹಾಲಮ್ಮದೇವಿ,  ಯಲ್ಲಮ್ಮದೇವಿ ಹಾಗೂ ಮಲ್ಲಿಕಾರ್ಜುನ ದೇವರುಗಳಿಗೆ ಮಹಾರುದ್ರಾಭಿಷೇಕ ನೇರವೇರಿಸುವವರು. ಮುಂಜಾನೆ 7-30 ಕ್ಕೆ "ಹೋಮ" ಕಾರ್ಯಕ್ರಮ ಜರಗುವುದು.

ಹಾಲಮ್ನದೇವಿ ದೇವಸ್ಥಾನದಿಂದ ಮು.8.00 ಕೃಷ್ಣಾ ನದಿಗೆ ಸ್ನಾನಕ್ಜೆ ಹೋಗಿ ನಂತರ ಅಲಿ ಹಾಲಮ್ಮದೇವಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಪ್ರತಿಷ್ಟಾಪಿಸಿ ಸಕಲ ವಾದ್ಯ ವೈಭವಗಳೊಂದಿಗೆ, ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನಕ್ಕೆ ಮರಳಿ ಅಲ್ಲಿಂದ ರೊಳ್ಳಿ ಗ್ರಾಮದ ಮುಖ್ತದ್ವಾರದ ಮೂಲಕ ಪ್ರಮುಖ ಬೀದಿಯಲ್ಲಿ ಹಾಯ್ದು  ಹಿರೇಮಠದ ಗುರು ಪದ್ಮರಾಜರ ಕರ್ತೃ ಗದ್ದುಗೆಯ ಸನ್ನಿಧಿಗೆ ಸುಮಂಗಲೆಯರ ಆರತಿಯೊಂದಿಗೆ ಸನಾದಿ, ಡೊಳ್ಳುಗಳು ಮತ್ತು ವಿವಿಧ ವಾದ್ಯವೈಭವಗಳೊಂದಿಗೆ ಆಗಮಿಸಿ ಉಡಿ ತುಂಬಿಸಿಕೊಂಡು ದರ್ಶನ ಪಡೆದು ಅ ನಂತರ ಮರಳಿ ಸದ್ಭಕ್ತರ ಮನೆಗಳಿಗೆ ಬೇಟಿ ನೀಡಿ ಪುನಃ  ಸ್ವಸ್ಥಾನ ದೇವಸ್ಥಾನಕ್ಕೆ ಪಲ್ಲಕ್ಕಿ ಉತ್ಸವ ತೆರಳುವುದು. 

ನಂತರ ಮ.1.00 ಕ್ಕೆ ಸದ್ಭಕ್ತರಾದ ವಿಜಯಪೂರ ಜಿಲ್ಲೆಯ ಉಪ್ಪಲದಿನ್ನಿ ಗ್ರಾಮದ  ಈರಸಂಗಪ್ಪ ಸಂಗಪ್ಪ ಗಾಣಿಗೇರ ಉಪ್ಪಲದಿನ್ನಿ ಬಬಲೇಶ್ವರ ಇವರ ಸ್ಮರಣಾರ್ಥ ಅವರ ಸುಪುತ್ರ ಶ್ರೀಶೈಲ ಈರಸಂಗಪ್ಪ ಗಾಣಿಗೇರ ಹಾಗೂ ಕುಟುಂಬದವರಿಂದ ಜರುಗಲಿದೆ ಹೋಳಿ ಹುಣ್ಣಿಮೆಯ ದಿವಸ ಪ್ರತಿ ವರ್ಷ ನಿರಂತರವಾಗಿ ಜರಗುವದು. ಕಾರಣ ಸದ್ಭಕ್ತರೆಲ್ಲರೂ ಆಗಮಿಸಿ ದೇವಿಯ ದರ್ಶನಾಶೀರ್ವಾದ ಪಡೆದು, ಪ್ರಸಾದ ಸ್ವೀಕರಿಸಿ ಪುಣ್ಯ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ಬೀಳಗಿ ಬಾಡಗಂಡಿಯಿಂದ ವಾಹನ ಸೌಕರ್ಯ ಇರುತ್ತದೆ ಎಂದು ಹಾಲಮ್ಮದೇವಿ ದೇವಸ್ಥಾನ ಜೀರ್ಣೋದ್ದಾರ ಸಮಿತಿ ಹಾಗೂ ಹೊಸರೊಳ್ಳಿ ದೈವ ಮಂಡಳಿ, ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಜಾತ್ರಾಮಹೋತ್ಸವದ ನಿಮಿತ್ಯ ಮಾರ್ಚ 2 ಸೋಮವಾರ ದಿನ ದೇವರ ಜಾಗರಣೆಗಾಗಿ ಮನಗೂಳಿ ಯಲ್ಲಮ್ಮ ದೇವಿ ಚೌಡಕಿ ಪದಗಳು ಜರುಗಲಿವೆ.