ಸಾಹಿತ್ಯ ಶರಣರ ಅಂತರಂಗದ ಅರಿವಿನ ಮನೆಯಲ್ಲಿ ಮೂಡಿಬಂದ ಅನುಭವ : ಎಸ್ ಎಸ್ ಪಾಟೀಲ

ಸಾಹಿತ್ಯ ಶರಣರ ಅಂತರಂಗದ ಅರಿವಿನ ಮನೆಯಲ್ಲಿ ಮೂಡಿಬಂದ ಅನುಭವ : ಎಸ್ ಎಸ್ ಪಾಟೀಲ The experience of being a house of inner awareness for literary devotees: SS Patil

ಮುದ್ದೇಬಿಹಾಳ 21:  ವಚನ ಸಾಹಿತ್ಯ ಅನುಭವಿಗಳ ಸಾಹಿತ್ಯ. ಈ ಸಾಹಿತ್ಯ ಶರಣರ ಅಂತರಂಗದ ಅರಿವಿನ ಮನೆಯಲ್ಲಿ ಮೂಡಿಬಂದ ಅನುಭವ ಸಾಹಿತ್ಯ ವಚನಗಳು ಕುರಿತು ಬರೆದ ಕಾವ್ಯಗಳಲ್ಲ  ಹೃದಯದ ಪರದೆಯ ಮೇಲೆ ಮೂಡಿಬಂದ ಮುಕ್ತಗಳು, ದರೇ​‍್ವರಿದ ಒಡಲೆಂಬ ಬಂಡಿಗೆ ಕಡೆಗೀಲು ಕೀಲುಗಳಾಗಿವೆ ವಚನಗಳು ಸತ್ಯದ ಮಾರ್ಗಕ್ಕೆ ಸುಲಭ ಸೋಪಾನಗಳು ಎಂದು  ಢಳವಗಿ ಮಡಿವಾಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್ ಎಸ್ ಪಾಟೀಲ ಹೇಳಿದರು,  ತಾಲೂಕಿನ ಢವಳಗಿ ಗ್ರಾಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಬಸವ ಬಾಲ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದೊಂದಿಗೆ ಹಮ್ಮಿಕೊಂಡ ಲಿಂ, ಯಮುನಾಬಾಯಿ ರಾಮಪ್ಪ ಕಲಕೇರಿ, ಲಿಂ, ಹನುಮಂತರಾಯ ರಾಮಪ್ಪ ಕಲಕೇರಿ ಲಿಂ, ಗಿರಿಜಾ ಹನುಮಂತರಾಯ ಕಲಕೇರಿ ಇವರ ಸ್ಮರಣಾರ್ಥ ಶರಣ ಕಿರಣ , ವಿದ್ಯಾರ್ಥಿಗಳಿಗಾಗಿ ಪ್ರಶ್ನೋತ್ತರ ಕ್ವಿಜ್ ಕಾರ್ಯಕ್ರಮದಲ್ಲಿ  ಬಾಗವಹಿಸಿ ಅವರು ಮಾತನಾಡಿದರು. ಪ್ರತಿ ದಿನವೂ ಎದ್ದ ತಕ್ಷಣ ಒಂದು ವಚನವನ್ನು ಓದುವುದು ಅದರ ಚಿಂತನೆಯಲ್ಲಿ ಅಂದಿನ ಕಾಯಕವನ್ನು ಮಾಡುವುದು ರೂಡಿಸಿಕೊಳ್ಳಬೇಕು.

ಇದರಿಂದ ಶರಣರ ವಚನಗಳು ಹಾಗೂ ಸಾಹಿತ್ಯದ ಗಂಧವು ಬದುಕಿಗೆ ಬೆಳಕನ್ನು ನೀಡುವಂತಹದ್ದಾಗಿರುವುದು ಮಾತ್ರವಲ್ಲದೇ ಬದುನಿಕ ಅರ್ಥವನ್ನು ಅರಿತು ಸನ್ಮಾರ್ಗದ ಜೀವನ ಕಾಣಲು ಸಾಧ್ಯ ಎಂದರು. ಸಾಹಿತಿ ಮಹಾದೇವಿ ಕಂಠಿ ಅವರು  ಮಾತನಾಡಿ ಕಲಕೇರಿ ಮನೆತನ ಅಕ್ಷರ ದಾಸೋಹ ಹಾಗೂ ಶರಣ ಅನುಭಾವದೊಂದಿಗೆ ಅವರ ತತ್ವ ಆದರ್ಶಗುಣಗಳನ್ನು ಮೈಗೂಡಿಸಿಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವುತೊಡಗಿಸಿಕೊಂಡು ಎಲ್ಲರೋಂದಿಗೆ ಸ್ನೇಹ ಬಾಂದವ್ಯದೊಂದಿಗೆ ಜೀವನ ನಡೆಸಿದವರು ಅವರ ಕಾರ್ಯ ನಿಜಕ್ಕೂ ಶ್ಲಾಘನಿಯ ಮಾತ್ರವಲ್ಲದೇ ಬಾಯಿಯವರು ಬಡತನದಲ್ಲಿಯೂ ಕೂಡ ಮಕ್ಕಳ ಪ್ರೇಮಿಯಾಗಿದ್ದರು ಎಂದರು ಈ ವೇಳೆ ವಿದ್ಯಾರ್ಥಿಗಳಿಗಾಗಿ ನಡೆಸಿದ ಪ್ರಶ್ನೋತ್ತರ ಕ್ವಿಜ್ ಕಾರ್ಯಕ್ರಮದಲ್ಲಿ ವಿಜೇತರಾದ ಕುಮಾರಿ ವೈಷ್ಣವಿ ಹಡಪದ, .ಅರ​‍್ಿತ ಕೋಣನವರ್,  ಪ್ರೀತಮ್ ಮಾದರ್, ಐಶ್ವರ್ಯ ಕೋಣನ್ನವರ್, ಗುರುದೇವಿ ಅಡ್ಡೋಡಗಿ, ಸೇರಿದಂತೆ ಅನೇಕ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಡಿವಾಳಪ್ಪ ಬಿರಾದಾರ್ ಬಾಂಬೆ ಗೌಡ್ರು,  ನಾನಗೌಡ ಕೊಣ್ಣೂರವರು,  ಲಕ್ಷ್ಮಿ, ಬಡಿಗೇರ ಭರತನಾಟ್ಯ ಪ್ರದರ್ಶಿಸಿದರು, ಡಾ, ಸಂಗಮೇಶ  ಕಲಹಾಳ,  ಶಿವಾನಂದ ಕಲಕೇರಿ,  ಎಸ್ ಆರ್ ಗೌಡರ್ ,ಎಸ್ ಎಸ್ ಹುನಗುಂದ್ ಮಹಾದೇವಿ ಕಂಠಿ, ಭಾರತಿ ಪಾಟೀಲ, ಬಸವರಾಜ್ ನಾಲತವಾಡ, ಮಹಾಂತಗೌಡ ಸಿದ್ದನಗೌಡ ಬಿರಾದಾರ್ಸಾಹಿತಿಗಳಾದ  ಬಸವರಾಜ್ ಕೋರಿ ಗುರುಬಸಪ್ಪ ಕೋರಿ, ಬಾಪು ಗೌಡ ಪಾಟೀಲ, ಕಾಶಿಬಾಯಿ ರಾಂಪುರ್ , ರಮೇಶ್ ಮೂಲಿಮನಿ, ಬಾಪು ಗೌಡ ಪಾಟೀಲರು ಪ್ರಾರ್ಥಿಸಿದರು. ರಮೇಶ್ ಮೂಲಿಮನಿ ಸ್ವಾಗತಿಸಿದರು, ಬಸವಂತರಾಯ ಬಿರಾದಾರ್,ಬಾಪು ಗೌಡ್ ಬಿರಾದಾರ್‌. ಜೆ ಎಸ್ ಬಿರಾದಾರ್‌. ಬಿ ಎಸ್ .ಪಾಟೀಲ್ .ಎಸ್ ಬಿ . ಬಿರಾದಾರ್,  ಹರಿನಾಥ್ ಎನ್‌... ಎಸ್ ಎಸ್‌. ಅವಟಿ ,ವಿಜಯಲಕ್ಷ್ಮಿ ಕಟ್ಟಿಮನಿ ಎಚ್ ಎಸ್ ಕಥೆಗಾರ, ಮಹೇಶ್ ಕೊಣ್ಣೂರ್, ಎಸ್‌.ಎಚ್ ಸಜ್ಜನ್‌... ಹಾಗೂ ಪರಿಷತ್ ಪದಾಧಿಕಾರಿಗಳು ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.