ಕನ್ನಡ ಅಧ್ಯಾಪಕರ ಸಂಘ ಸ್ಥಾಪನೆ ಸಂತಸದ ಸಂಗತಿ

ಕನ್ನಡ ಅಧ್ಯಾಪಕರ ಸಂಘ ಸ್ಥಾಪನೆ ಸಂತಸದ ಸಂಗತಿ  The establishment of the Kannada Teachers' Association is a matter of happiness


ಕಲಬುರಗಿ 29: ಕನ್ನಡ ಅಧ್ಯಾಪಕರ ಸಂಘ ಸ್ಥಾಪಿಸಿರುವುದು ಸಂತಸದ ಸಂಗತಿಯಾಗಿದೆ. ಸಂಘಗಳು ಆರ್ಥಿಕವಾಗಿ ಬಲಿಷ್ಠವಾಗಬೇಕಾದರೆ ಅಧ್ಯಾಪಕರು ಸಂಘಕ್ಕೆ ದೇಣಿಗೆ ಹಾಗೂ ವಂತಿಗೆ ನೀಡಬೇಕು. ಕನ್ನಡ ಭಾಷೆಯ ಪೋಷಣೆ ಮತ್ತು ಉಳಿವಿಗಾಗಿ ಸಂಘವು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಶಿಕಾಂತ ಉಡಿಕೇರಿ ಹೇಳಿದರು.  

ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಆಯೋಜಿಸಿದ್ದ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕರಾದ ಡಾ. ಚಿತ್ಕಳಾ ಮಠಪತಿ, ಡಾ. ಅನ್ನಪೂರ್ಣಾ ಪಾಟೀಲ, ಡಾ. ಶ್ರೀಶೈಲ ನಾಗರಾಳ, ಡಾ. ಸುರೇಂದ್ರ ಕೇರಮಗಿ, ಡಾ. ಅಮೃತಾ ಕಟಕೆ ಹಾಗೂ ಕುವೆಂಪು ಭಾಷಾ ಭಾರತಿಯ ಅನುವಾದ ಪ್ರಶಸ್ತಿಗೆ ಭಾಜನರಾದ ಡಾ. ಸೂರ್ಯಕಾಂತ ಸುಜಾತ್ ಅವರನ್ನು ಸನ್ಮಾನಿಸಲಾಯಿತು.  

ಹೊಸದಾಗಿ ಪುಸ್ತಕ ಪ್ರಕಟಿಸಿದ ಡಾ. ಮಲ್ಲಿನಾಥ ತಳವಾರ, ಡಾ. ಮಿರಾಜ್ ಪಾಷಾ, ಡಾ. ಸಂಗಣ್ಣ ಸಿಂಗೆ ಹಾಗೂ ಡಾ. ದತ್ತಾತ್ರೇಯ ಅವರನ್ನು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಅಧ್ಯಾಪಕರ ಸಂಘದ ಪದಾಧಿಕಾರಿಗಳ ಪದಗ್ರಹಣ ನಡೆಯಿತು.  

ಕಾರ್ಯಕ್ರಮದಲ್ಲಿ ಮಹಿಳಾ ಪ್ರತಿನಿಧಿ ಸುವರ್ಣ ವಜ್ಜೆ ಸೇರಿದಂತೆ ಸಂಘದ ಪದಾಧಿಕಾರಿಗಳಾದ ಡಾ. ಜಗಪ್ಪ ತಳವಾರ, ಡಾ. ಮಲ್ಲಪ್ಪ ಮಾನೇಗಾರ, ಡಾ. ರೇವಣಸಿದ್ದ ನಿಂಗನಾಯ್ಕ, ಡಾ. ರವೀಂದ್ರ ಕುಂಬಾರ, ಡಾ. ದಯಾನಂದ ಕಾಂಬಳೆ, ಡಾ. ಗುಲಾಮ್ ಮಹೆಬೂಬ್, ಡಾ. ಸಂಗೀತಾ ಹಿರೇಮಠ, ಡಾ. ಮರೇಪ್ಪ ಮೇತ್ರೆ, ಮಾರುತಿ ಮಾಪರ್ಳ್ಳಿ, ಡಾ. ರುಕ್ಮಿಣಿ, ಭೀಮಣ್ಣ ಬೆಡಕಪಳ್ಳಿ ಸೇರಿದಂತೆ ವಿವಿಧ ಕಾಲೇಜುಗಳ ಅಧ್ಯಾಪಕರು ಉಪಸ್ಥಿತರಿದ್ದರು.