ಉಪವಾಸದ ಅಂತರಾರ್ಥವು ದೈಹಿಕ ಮತ್ತು ಆಧ್ಯಾತ್ಮಿಕ ಶಿಸ್ತು ಆಗಿದೆ : ರಿಯಾಜ್ ಅಹಮ್ಮದ್
The essence of fasting is physical and spiritual discipline: Riyaz Ahmed
ಕೊಪ್ಪಳ 05: ರಮಝಾನ್ ಮತ್ತು ಉಪವಾಸದ ಅಂತರಾರ್ಥವುದೈಹಿಕ ಮತ್ತು ಆಧ್ಯಾತ್ಮಿಕ ಶಿಸ್ತು ಆಗಿದೆ: ಪವಿತ್ರ ಕುರ್‌ಆನ್ ಹೇಳುತ್ತದೆ: ’ಓ ಸತ್ಯವಿಶ್ವಾಸಿಗಳೇ, ನಿಮ್ಮ ಪೂರ್ವಜರಿಗೆ ವಿಧಿಸಿದಂತೆ ನಿಮಗೂ ಉಪವಾಸವನ್ನು ವಿಧಿಸಲಾಗಿದೆ, ಇದರಿಂದ ನೀವು ದೈವಭಕ್ತಿಯುಳ್ಳವರಾಗಲಿ (ತಕ್ವಾ)’. ಇಲ್ಲಿ ಉಪವಾಸ ಎಂದರೆ ಕೇವಲ ಹಸಿವು-ನೀರಿಡಕೆಯಲ್ಲ. ಇದು ಕೆಟ್ಟ ಆಲೋಚನೆಗಳಿಂದ, ಅಸೂಯೆಯಿಂದ ಮುಕ್ತಿ ಪಡೆಯುವ ತರಬೇತಿ."ಯಾಗಿದೆ ಎಂದು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಘಟಕದ ಸಹ ಕಾರ್ಯದರ್ಶಿ ರಿಯಾಜ್ ಅಹಮದ್ ಹೇಳಿದರು,
ಅವರು ನಗರದ ರೈಲ್ವೆ ನಿಲ್ದಾಣ ರಸ್ತೆ ಬಳಿ ಇರುವ ಮಸ್ಜಿದೆ ಆಲಾ ಆವರಣ ದಲ್ಲಿ ಕೊಪ್ಪಳ ಸದ್ಭಾವನಾ ವೇದಿಕೆ ಮತ್ತು ಜಮಾತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕ ಇವುಗಳ ಸಂಯುಕ್ತ ಆಶಯದಲ್ಲಿ ರಮಜಾನ್ ಮಾಸಾಚರಣೆ ಪರಿಯುಕ್ತ ಏರಿ್ಡಸಿದ ಇಫ್ತಾರ್ ಚೌಹಾರ್ದ ಕೂಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಮಾರೋಪ ಭಾಷಣ ಮಾಡಿ ಮಾತನಾಡಿದರು,ಮುಂದುವರೆದು ಮಾತನಾಡಿ "ಒಬ್ಬ ಶ್ರೀಮಂತನಿಗೂ ಹಸಿವಿನ ಸಂಕಟವನ್ನು ಉಣ್ಣಿಸುವ ಮೂಲಕ, ಸಮಾಜದ ಬಡವನ ನೋವನ್ನು ಅರಿಯುವಂತೆ ಮಾಡುವುದೇ ಈ ತಿಂಗಳ ವಿಶೇಷ. ಪ್ರವಾದಿ ಮುಹಮ್ಮದ್ (ಸ) ಅವರು ಹೇಳಿದ್ದಾರೆ:
’ಯಾರು ಸುಳ್ಳು ಹೇಳುವುದನ್ನು ಮತ್ತು ಕೆಟ್ಟ ಕೆಲಸಗಳನ್ನು ಬಿಡುವುದಿಲ್ಲವೋ, ಅವರು ಅನ್ನ ನೀರು ಬಿಡುವುದರಲ್ಲಿ ದೇವನಿಗೆ ಯಾವುದೇ ಆಸಕ್ತಿಯಿಲ್ಲ’. ಅಂದರೆ ಚಾರಿತ್ರ್ಯ ನಿರ್ಮಾಣವೇ ಉಪವಾಸದ ಗುರಿ."ಯಾಗಿದೆ ಎಂದರು ಕುರ್‌ಆನ್ ಮತ್ತು ಮಾನವೀಯ ಸಂದೇಶ: "ಕುರ್‌ಆನ್ ಕೇವಲ ಮುಸ್ಲಿಮರಿಗಲ್ಲ, (ಹುದಲಿನ್ನಾಸ್) ಅದು ಮಾನವಕುಲಕ್ಕೆ ಮಾರ್ಗದರ್ಶಕವಾಗಿ ಅವತೀರ್ಣವಾದ ದೈವಿಕ ಸಂದೇಶವಾಗಿದೆ.
’ನಾವೆಲ್ಲರೂ ಒಂದೇ ತಂದೆ-ತಾಯಿಯ ಮಕ್ಕಳು’. ಇಲ್ಲಿ ಜಾತಿ, ವರ್ಣ, ಭಾಷೆಯ ಆಧಾರದ ಮೇಲೆ ಶ್ರೇಷ್ಠತೆ ಇಲ್ಲ. ಯಾರು ಹೆಚ್ಚು ಸಜ್ಜನರೋ ಅವರೇ ಶ್ರೇಷ್ಠರು."ಎಂದು ವಿವರಿಸಿದರು,ಸೌಹಾರ್ದತೆಯ ಕುರಿತು: ಮಾತನಾಡಿ "ಸೌಹಾರ್ದತೆ ಎಂದರೆ ಒಬ್ಬರನ್ನೊಬ್ಬರು ಸಹಿಸಿಕೊಳ್ಳುವುದಲ್ಲ, ಒಬ್ಬರನ್ನೊಬ್ಬರು ಗೌರವಿಸುವುದು. ಸೃಷ್ಟಿಕರ್ತನನ್ನು ಪ್ರೀತಿಸುವವನು ಅವನ ಸೃಷ್ಟಿಗಳನ್ನು ದ್ವೇಷಿಸಲು ಸಾಧ್ಯವಿಲ್ಲ."ಪ್ರಸ್ತುತ ಸಮಾಜದ ಅಗತ್ಯತೆ ಮತ್ತು ನಮ್ಮ ಜವಾಬ್ದಾರಿ : ಬಗ್ಗೆ ವಿವರಿಸಿ ದ ಅವರು ಸಮಾಜದ ಒಡಕುಗಳನ್ನು ತೊಡೆದುಹಾಕಿ ಪರಸ್ಪರರನ್ನು ಬೆಸೆಯುವುದು: "ಇಂದು ಸಮಾಜದಲ್ಲಿ ಗೋಡೆಗಳು ಹೆಚ್ಚುತ್ತಿವೆ, ಸೇತುವೆಗಳು ಕಡಿಮೆಯಾಗುತ್ತಿವೆ.
ತಪ್ಪು ತಿಳುವಳಿಕೆಗಳೇ ಅಶಾಂತಿಗೆ ಕಾರಣ. ಇಂತಹ ’ಸೌಹಾರ್ದ ಕೂಟ’ಗಳು ಆ ಗೋಡೆಗಳನ್ನು ಉರುಳಿಸಿ ಮನಸ್ಸುಗಳನ್ನು ಜೋಡಿಸುವ ಕೆಲಸ ಮಾಡಬೇಕು.""ಸದ್ಭಾವನಾ ವೇದಿಕೆ" ಮತ್ತು "ಜಮಾಅತೆ ಇಸ್ಲಾಮೀ ಹಿಂದ್" ಸಂಘಟನೆಗಳ ಕೆಲಸಗಳನ್ನು ಪ್ರಸ್ತಾಪಿಸಿ., ಸಮಾಜದ ಬಡತನ, ಅನಕ್ಷರತೆ ಮತ್ತು ನೈತಿಕ ಅಧಃಪತನದ ವಿರುದ್ಧ ನಾವೆಲ್ಲರೂ ’ಭಾರತೀಯರಾಗಿ’ ಒಂದಾಗಬೇಕು. ಪ್ರವಾದಿಯವರು ಹೇಳಿದ್ದಾರೆ: ’ಒಬ್ಬ ವ್ಯಕ್ತಿ ತನಗಾಗಿ ಯಾವುದನ್ನು ಇಷ್ಟಪಡುತ್ತಾನೋ ಅದನ್ನೇ ತನ್ನ ನೆರೆಯವನಿಗೂ ಇಷ್ಟಪಡುವವರೆಗೆ ಅವನು ಸತ್ಯವಿಶ್ವಾಸಿಯಾಗಲಾರ’. ನಮ್ಮ ನೆರೆಹೊರೆಯವರು ಯಾರೇ ಆಗಿರಲಿ, ಅವರ ಸುಖ-ದುಃಖದಲ್ಲಿ ಭಾಗಿಯಾಗುವುದು ನಮ್ಮ ಧರ್ಮ."ಸಮಾರೋಪವಾಗಿ ಸಂದೇಶದ ಸಾರ: "ಈ ಸಂಜೆ ನಾವು ಸೇವಿಸುವ ಪಲಹಾರ ನಮ್ಮ ದೇಹಕ್ಕೆ ಶಕ್ತಿ ನೀಡಿದರೆ, ಇಲ್ಲಿನ ವಿಚಾರಗಳು ನಮ್ಮ ಆತ್ಮಕ್ಕೆ ಶಕ್ತಿ ನೀಡಲಿ.
ಕೊಪ್ಪಳದ ಈ ಮಣ್ಣು ಸೌಹಾರ್ದತೆಗೆ ಹೆಸರಾದದ್ದು, ಇಲ್ಲಿನ ಈ ಪರಂಪರೆ ಮುಂದುವರಿಯಲಿ."ಎಂದರುಮೊದಲಿಗೆ ಈ ಸುಂದರ ಅವಕಾಶ ನೀಡಿದ ದೇವನಿಗೆ ಕೃತಜ್ಞತೆಗಳು. ನಂತರ ಎಲ್ಲಾ ಕೆಲಸ ಬಿಟ್ಟು ಬಂದ ಸದ್ಭಾವನಾ ವೇದಿಕೆಯ ಸದಸ್ಯರಿಗೆ, ಪ್ರೀತಿಯಿಂದ ಆಮಂತ್ರಣ ಸ್ವೀಕರಿಸಿದ ಅತಿಥಿಗಳಿಗೆ ಮತ್ತು ಈ ಕಾರ್ಯಕ್ರಮದ ರೂವಾರಿಗಳಿಗೆ ಧನ್ಯವಾದಗಳು. ತಿಳಿಸುವೆ ಎಂದರು,"ಬನ್ನಿ, ಒಟ್ಟಾಗಿ ಪ್ರಾರ್ಥಿಸೋಣ - ನಮ್ಮ ದೇಶದಲ್ಲಿ ಶಾಂತಿ ನೆಲೆಸಲಿ, ಪ್ರೀತಿ ಬೆಳೆಯಲಿ.
"ಎಂದು ಜಮಾತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯ ಘಟಕದ ಸಹ ಕಾರ್ಯದರ್ಶಿ ರಿಯಾಜ್ ಅಹಮದ್ ಅಭಿಪ್ರಾಯ ಪಟ್ಟರು,ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಲಿಂಗಾಯತ್ ಧರ್ಮ ಮಹಾಸಭಾ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಈಶಣ್ಣ ಕೊರಲಹಳ್ಳಿ ಮಾತನಾಡಿ ಪ್ರವಾದಿಯವರು ತೋರಿದ ಮಾರ್ಗ ಪ್ರತಿಯೊಬ್ಬರು ಅನುಸರಿಸಬೇಕು ಎಂದರು, ಕೊಪ್ಪಳ ಸದ್ಭಾವನಾ ವೇದಿಕೆ ಅಧ್ಯಕ್ಷರಾದ ಡಾಕ್ಟರ್ ಸುಶೀಲ್ ಕುಮಾರ್ ಕಲಾಲ್ ರವರು ಮಾತನಾಡಿ ಉಪವಾಸ ಆಚರಣೆ ಇಂದ ಆರೋಗ್ಯ ಸುಧಾರಣೆಯಾಗುತ್ತದೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಈ ಉಪವಾಸ ಆಚರಣೆ ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು,
ಕಾರ್ಯಕ್ರಮದ ಆರಂಭದಲ್ಲಿ ಎಸ್‌ಐಒ ಕೊಪ್ಪಳ ಘಟಕದ ಅಧ್ಯಕ್ಷ ನಬಿಲ್ ಯಹ್ಯಾ ರವರು ಖುರಾನ್ ಪಠಣ ಮಾಡಿದರು, ಜಮಾತ್ ಇಸ್ಲಾಮಿ ಹಿಂದ್ ನ ಸದಸ್ಯ ಅಯಾಜ್ ಅಹಮದ್ ಇದರ ಕನ್ನಡ ಅನುವಾದ ಮಾಡಿದರು ತಾಜುದ್ದೀನ್ ಡೋಟಿಹಾಳ ರವರು ಕಾರ್ಯಕ್ರಮ ನಿರೂಪಿಸಿ ಆರಂಭದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರೆ ಜಮಾತೆ ಇಸ್ಲಾಮಿ ಹಿಂದ್ ಕೊಪ್ಪಳ ಘಟಕದ ಅಧ್ಯಕ್ಷರಾದ ಸೈಯದ್ ಹಿದಾಯತ್ ಅಲಿ ರವರು ಕೊನೆಯಲ್ಲಿ ವಂದನಾರೆ್ಣ ಮಾಡಿದರು, ನಂತರ ಉಪವಾಸ ಪಾರಾಯಣ ನಡೆಯಿತು ಎಲ್ಲರೂ ಸೇರಿ ಫಲಹಾರ ಉಪಹಾರ ಸೇವಿಸಿ ಇಫ್ತಾರ್ ಕೂಟ ಸೌಹಾರ್ದಯೂತ ವಾಗಿ ಆಚರಿಸಿದರು, ನೂರಾರು ಸಂಖ್ಯೆಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಮತ್ತು ಸದ್ಭಾವನಾ ವೇದಿಕೆಯ ಪದಾಧಿಕಾರಿಗಳು ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು ನಂತರ ಸಾಮೂಹಿಕ ಪ್ರಾರ್ಥನೆ ಜರುಗಿತು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 