ಇಡೀ ರಾಜ್ಯವೇ ತಲೆ ತಗ್ಗಿಸುವ ಸ್ಥಿತಿ
The entire state is in a state of mourning
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸುತ್ತಲೂ ಜೀವ ತೆಗೆಯುವವರನ್ನು ಸಾಕಿಕೊಂಡಿದ್ದು, ಬಳ್ಳಾರಿ ಘಟನೆಯಿಂದ ಇಡೀ ರಾಜ್ಯವೇ ತಲೆ ತಗ್ಗಿಸುವ ಸ್ಥಿತಿ ಬಂದಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೇ ನಿಮ್ಮ ಸುತ್ತಲೂ ಎಂತಹವರನ್ನು ಸಾಕಿಕೊಂಡಿದ್ದೀರಿ ನೋಡಿ. ಭರತ್ ರೆಡ್ಡಿಯ ಈ ವರ್ತನೆಗೆ ಅವನು ಮಾತ್ರ ಕಾರಣವಲ್ಲ. ಆತ ಮಾಡಿರುವ ತಪ್ಪು ಅವನದ್ದು ಮಾತ್ರ ಅಲ್ಲದೇ, ಅವನನ್ನು ಸಾಕಿಕೊಂಡಿರುವವರ ತಪ್ಪು ಕೂಡ ಇದೆ. ಭರತ್ ರೆಡ್ಡಿ ವರ್ತನೆ ನಾಗರಿಕ ಸಮಾಜ ಸಹಿಸಿಕೊಳ್ಳುವುದಿಲ್ಲ. ಮೊದಲೆಲ್ಲಾ ಇಂತಹ ಘಟನೆ ಬಿಹಾರ, ಯುಪಿಗಳಲ್ಲಿ ನಡೆಯುತ್ತಿತ್ತು. ಇದೀಗ ಕರ್ನಾಟಕದಲ್ಲೂ ನಡೆದಿದ್ದು, ಭರತ್ ರೆಡ್ಡಿ ವಿಧಾನಸಭೆಯಲ್ಲಿ ಉನ್ಮಾದದಿಂದ ಮಾತನಾಡುವಾಗಲೇ ಆತನ ವಿರುದ್ಧ ಸ್ಪೀಕರ್ ಕ್ರಮ ತೆಗೆದುಕೊಳ್ಳಬೇಕಿತ್ತು. ಆತನ ಉನ್ಮಾದದ ಮಾತನ್ನು ಪೋಷಿಸಿದ ಕಾರಣದಿಂದ ಭರತ್ ರೆಡ್ಡಿ ಈ ಹಂತಕ್ಕೆ ಬಂದಿದ್ದಾನೆ ಎಂದು ಕಿಡಿಕಾರಿದರು.
ನಮ್ಮ ಬಳಿಯೂ ವೆಪನ್ ಇದೆ, ನಮ್ಮ ಬಳಿಯೂ ಗನ್ ಮ್ಯಾನ್ಗಳಿದ್ದಾರೆ. ಯಾರೂ ಸಹ ಇಂತಹ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಕೊಟ್ಟ ಸ್ವಾತಂತ್ರ್ಯದಿಂದ ಇವರೆಲ್ಲಾ ಈ ರೀತಿ ಮಾಡುತ್ತಿದ್ದಾರೆ. ಬಳ್ಳಾರಿಯಲ್ಲಿ ಜೀವ ಹೋಗಿರುವುದು ಕೇವಲ ಕಾಂಗ್ರೆಸ್ ಕಾರ್ಯಕರ್ತನದ್ದಲ್ಲ, ಅದು ಒಬ್ಬ ಕನ್ನಡಿಗನ ಜೀವ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಈ ಪ್ರಕರಣದಲ್ಲಿ ಜನಾರ್ಧನ್ ರೆಡ್ಡಿ ಅವರನ್ನು ಹೇಗೆ ಎ1 ಮಾಡಿದ್ದೀರಾ ಎಂದು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಯಾವ ಮೇಲ್ಪಂಕ್ತಿ ಹಾಕುತ್ತಿದ್ದಾರೆಂದು ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ, ದೇವರಾಜ ಅರಸು ಅವರ ರೆಕಾರ್ಡ್ ಮುರಿಯುತ್ತಾರೆ. ಆದರೆ ದೇವರಾಜ ಅರಸು ಅವರ ಆಡಳಿತದ ವೈಖರಿ ಪಾಲಿಸಲು ನಿಮಗೆ ಆಗಲ್ಲ ಎಂದು ವಾಗ್ದಾಳಿ ನಡೆಸಿದರು.
ವರುಣ ಕ್ಷೇತ್ರದಲ್ಲಿ ನಿವೇಶನ ಇಲ್ಲದವರಿಗೆ ಮೊದಲು ನಿವೇಶನ ಕೊಡಿ. ಕೋಗಿಲು ಬಡವಾಣೆಯಲ್ಲಿದ್ದವರು ಅಕ್ರಮವಾಗಿ ಬಾಂಗ್ಲಾದಿಂದ ಬಂದಿರುವ ಜನರು. ಅವರಿಗೆ ಏಕೆ ನಮ್ಮ ಭೂಮಿ ಕೊಡುತ್ತಿದ್ದೀರಾ. ಇವತ್ತು ಅವರಿಗೆ ಮನೆ ಕೊಟ್ಟು ನಾಳೆ ಅವರಿಗೆ ಮತದಾರರ ಪಟ್ಟಿ ಕೊಟ್ಟು ವೋಟ್ ಬ್ಯಾಂಕ್ ಮಾಡಿಕೊಳ್ಳುವುದು ನಿಮ್ಮ ಪ್ಲ್ಯಾನಾ? ಎಂದು ಪ್ರಶ್ನಿಸಿದ ಅವರು, ಬಾಂಗ್ಲಾ ದೇಶದ ಜನರು ವಾಸಿಸಲು ಜಾಗ ಕೊಟ್ಟು ಕರ್ನಾಟಕದ ಭವಿಷ್ಯಕ್ಕೆ ಗಂಡಾಂತರ ಸೃಷ್ಟಿ ಮಾಡುತ್ತಿದ್ದೀರಾ ಎಂದು ಟೀಕಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 