ಶಿಕ್ಷಣ ಸಮುದಾಯಕ್ಕೆ ಸಮಾಜದಲ್ಲಿ ಅಪಾರವಾದ ಗೌರವ ಸನ್ಮಾನಗಳಿವೆ- ಡಾ. ಆರ್‌. ಎಂ. ಕುಬೇರ​‍್ಪ

ಶಿಕ್ಷಣ ಸಮುದಾಯಕ್ಕೆ ಸಮಾಜದಲ್ಲಿ ಅಪಾರವಾದ ಗೌರವ ಸನ್ಮಾನಗಳಿವೆ- ಡಾ. ಆರ್‌. ಎಂ. ಕುಬೇರ​‍್ಪ  The education community enjoys immense respect and honor in the society- Dr. R. M. Kuberpa

                  ರಾಣೇಬೆನ್ನೂರು 09 :  ಶಿಕ್ಷಣ ಸಮುದಾಯಕ್ಕೆ ಸಮಾಜದಲ್ಲಿ ಗೌರವ ಮತ್ತು ಮಾನ ಸನ್ಮಾನಗಳಿವೆ ಇತಿಹಾಸದಿಂದಲೂ ಬಹು ಗೌರವವನ್ನು ಹೊಂದಿರುವ ಶಿಕ್ಷಕರು ಇಂದು  ಮತ್ತಷ್ಟು ಗೌರವ ಮಾನ ಸನ್ಮಾನಗಳನ್ನು ಪಡೆಯುವ ಗುಣ ಧರ್ಮಗಳನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಬಿ.ಎ. ಜೆ.ಎಸ್‌.ಎಸ್‌. ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್‌.ಎಂ. ಕುಬೇರ​‍್ಪ ಹೇಳಿದರು. ಅವರು, ಕಾಲೇಜಿನ ಪ್ರೊ, ಐ. ಜಿ.ಸನದಿ  ಸಭಾಭವನದಲ್ಲಿ, ಬೆಂಗಳೂರು ಶಾಲಾ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ, ಹಾವೇರಿ  ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಆಯೋಜಿಸಿದ್ದ, ಶಿಕ್ಷಕರ ತರಬೇತಿ  " ಮರು ಸಿಂಚನ, ಗಣಿತಗಣಕ, ಓದು ಕರ್ನಾಟಕ  " ಮತ್ತು ವಿವಿಧ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

                ಶಿಕ್ಷಕರು ಒಬ್ಬ ವ್ಯಕ್ತಿಯಲ್ಲ ಅವರು ಬಹು ಭಾಷೆ, ಜ್ಞಾನ,ವಿಜ್ಞಾನ ಮತ್ತು ಗಣಿತ ಹಾಗೂ ಇತರೆ ವಿಷಯಗಳನ್ನು ಕಣಜ ಎಲ್ಲವನ್ನು  ಅಳವಡಿಸಿಕೊಂಡಾಗ ಮಾತ್ರ ಪ್ರಬುದ್ಧ ಶಿಕ್ಷಕನಾಗಲು ಸಾಧ್ಯವಾಗುವುದು ಎಂದರು. ಹೊಸ, ಹೊಸ ಯೋಜನೆ ಮತ್ತು ಯೋಚನೆಗಳು ಆಧುನಿಕತೆ ವ್ಯವಸ್ಥೆಗೆ ಅನುಗುಣವಾಗಿ ಶಿಕ್ಷಣ ಇಲಾಖೆ ತರಬೇತಿ ಕಾರ್ಯಗಾರಗಳು ಆಯೋಜಿಸುವುದು ಸಹಜ. ವಿಷಯಗಳ ಅಧ್ಯಯನ, ನಮ್ಮ ವೃತ್ತಿ  ಬದುಕಿನ ಸಹಜ ಧರ್ಮವಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮಸುಂದರ ಅಡಿಗ ಅವರು ಮಾತನಾಡಿ, ಶಿಕ್ಷಕರು ನಿರಂತರ ಅಧ್ಯಯನಶೀಲರಾಗಬೇಕು.  

                ಮಕ್ಕಳಲ್ಲಿ ಇಂದು ಬಹು ಜಾಣ್ಮೆ ಇದೆ. ಅವರಿಗೆ ವಿಷಯಕ್ಕನುಗುಣವಾಗಿ, ಯಾವುದೇ ಗೊಂದಲವಿಲ್ಲದೆ, ಅತ್ಯಂತ ಸಹಜ ಮತ್ತು ಸರಳ ಬೋಧನಾ ಕೌಶಲ್ಯವನ್ನು ಅಳವಡಿಸಿಕೊಂಡು, ಮನ ಮುಟ್ಟುವಂತೆ  ಪಾಠ ಮಾಡುವ ಅಗತ್ಯ ಮತ್ತು ಅವಶ್ಯಕತೆ ಇಂದಿನ ಅಗತ್ಯವಿದೆ ಎಂದರು. ಬಿಎಡ್ ಕಾಲೇಜು ಪ್ರಾಚಾರ್ಯ ಡಾ. ಮೃತ್ಯುಂಜಯ ಎಂ.ಎಂ. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಶಿಕ್ಷಣ ಸಮನ್ವಯಾಧಿಕಾರಿ ಮಂಜು ನಾಯ್ಕ, ಸಂಯೋಜನಾಧಿಕಾರಿ ಗಂಗಪ್ಪ ನಾಯ್ಕ್‌, ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ್ ಚಿಂದಿ, ನೋಡಲ್ ಅಧಿಕಾರಿ ಲೋಕಪ್ಪ, ಎನ್ಜಿಓ ಕಾರ್ಯದರ್ಶಿ, ಮಂಜುನಾಥ ಹೆಚ್, ಬಿ. ಆರಿ​‍್ಪ, ಗಳಾದ ನಾಗರಾಜ್, ಗಂಗಪ್ಪ, ಸವಿತಾ ಹಾದಿಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪ್ರಶಿಕ್ಷಣಾರ್ಥಿ  ಸವಿತಾ ಸಂಗಡಿಗರು ಪ್ರಾರ್ಥಿಸಿದರು. ತರಬೇತಿ ಅಧಿಕಾರಿ ಗಂಗಪ್ಪ ನಾಯಕ್ ಸ್ವಾಗತಿಸಿ,  ಸವಿತಾ ಹಾದಿಮನಿ ನಿರೂಪಿಸಿ, ಬಿಆರ್ ಪಿ ವಿಜಯ ಆಡಿನವರ,ವಂದಿಸಿದರು.