ಶರೀಫ ನದಾಫ
ಬೈಲಹೊಂಗಲ 25: ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರಮುಖ ಬಜಾರ ರಸ್ತೆಯ ಅರ್ಬನ್ ಬ್ಯಾಂಕ ಮುಂಭಾಗದ ರಸ್ತೆ ಧೂಳಿನಿಂದ ಕೂಡಿದ ಪರಿಣಾಮ ನಾಗರಿಕರು ಪುರಸಭೆ ಅಧಿಕಾರಿಗಳ ವಿರುದ್ಧ ದಿನನಿತ್ಯ ಹಿಡಿಶಾಪ ಹಾಕುವಂತಾಗಿದೆ.
ಈ ಮುಖ್ಯ ರಸ್ತೆಯ ಅಕ್ಕಪಕ್ಕದಲ್ಲಿ ಕಿರಾಣಿ ಅಂಗಡಿ, ಕಾಳಿನ ವ್ಯಾಪಾರಸ್ಥರು, ಸ್ಟೇಶನರಿ, ಎಲೆ-ಅಡಿಕೆ ವ್ಯಾಪಾರಸ್ಥರು ಹಾಗೂ ಬಟ್ಟೆ ಅಂಗಡಿಗಳು, ಔಷಧ ಅಂಗಡಿಗಳು ಇದ್ದು ಪ್ರತಿನಿತ್ಯ ಈ ರಸ್ತೆಯ ಮೂಲಕ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು ಮಣ್ಣಿನಿಂದ ಕೂಡಿರುವ ಧೂಳು ಅಂಗಡಿಯ ಒಳಗೆ ನುಗ್ಗುತ್ತಿದೆ. ಗ್ರಾಹಕರಿಗೆ ಇದರಿಂದ ತೀವೃ ತೊಂದರೆಯಾಗುತ್ತಿದೆ. ಪಾದಚಾರಿಗಳು ಈ ರಸ್ತೆಯ ಮೂಲಕ ತೆರಳಬೇಕಾದರೆ ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿಮರ್ಾಣವಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಅಂಗಡಿ ವ್ಯಾಪಾರಸ್ಥರು ಕೂಡಾ ಗ್ರಾಹಕರಿಗೆ ವಸ್ತುಗಳನ್ನು ನೀಡುವದು ಬಿಟ್ಟು ಅಂಗಡಿಯಲ್ಲಿರುವ ಧೂಳನ್ನು ಸ್ವಚ್ಛ ಮಾಡುವದೇ ನಿತ್ಯ ಕಾಯಕವಾಗಿದೆ.
ಈ ರಸ್ತೆ ದುರಸ್ತಿಗಾಗಿ ಹಲವಾರು ತಿಂಗಳುಗಳಿಂದ ಪುರಸಭೆಗೆ ದುಂಬಾಲು ಬಿದ್ದಾಗ ಜಲ್ಲಿಕಲ್ಲಿನಿಂದ ಮೆಟಲಿಂಗ್ ಮಾಡಲಾಗಿತ್ತು. ನಂತರ ಕೆಂಪು ಮಣ್ಣಿನಿಂದ ರೂಲಿಂಗ್ ಮಾಡಿ ಕಾಟಾಚಾರಕ್ಕೆ ಎಂಬಂತೆ ಪಾದಚಾರಿಗಳಿಗೆ ಅನೂಕೂಲ ಮಾಡಿ ಕೈ ತೊಳೆದುಕೊಂಡಿದ್ದರು. ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುವದರಿಂದ ಮತ್ತೆ ತೆಗ್ಗು ದಿನ್ನೆಗಳು ನಿಮರ್ಾಣವಾಗಿ ಅದೇ ರಾಗ ಅದೇ ಹಾಡು ಎನ್ನುವಂತಾಗಿದೆ. ಈಗ ಪ್ರತಿದಿನ ರಸ್ತೆಯಲ್ಲಿ ಧೂಳು ಎಳುತ್ತಿರುವುದರಿಂದ ಪುರಸಭೆಯವರು ಧೂಳನ್ನು ತಡೆಯಲು ಟ್ಯಾಂಕರ್ ನೀರು ಪ್ರತಿನಿತ್ಯ ಸಿಂಪರಿಸುತ್ತಿದ್ದಾರೆ ಇಷ್ಟಾದರೂ ಧೂಳು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ.
ಜನತೆ ಬೀದಿಗಿಳಿದು ಹೋರಾಟ ಮಾಡುವ ಮುನ್ನವೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ತೆಗ್ಗು ದಿನ್ನೆ ಮುಚ್ಚಿಸಿ ರಸ್ತೆ ದುರಸ್ತಿಗೆ ಮುಂದಾಗುತ್ತಾರೆಯೇ ಎಂದು ಜನತೆ ಕಾದು ನೋಡುವಂತಾಗಿದೆ.
ಟ್ರಾಫಿಕ್ ಜಾಮ: ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದೆ. ರಸ್ತೆಗೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ರಸ್ತೆ ಮಾತ್ರ ಇಕ್ಕಟ್ಟಾಗಿದೆ. ರಸ್ತೆಯ ಅಕ್ಕಪಕ್ಕದಲ್ಲಿಯೇ ಹಣ್ಣಿನ ವ್ಯಾಪಾರಸ್ಥರ ಗಾಡಿಗಳು, ಸಣ್ಣ ಪುಟ್ಟ ವ್ಯಾಪಾರಸ್ಥರು ರಸ್ತೆಯಲ್ಲಿಯೇ ಕುಳಿತು ವ್ಯಾಪಾರ ವಹಿವಾಟು ನಡೆಸುತ್ತಿರುವದರಿಂದ ಪಾದಚಾರಿಗಳು ನಿತ್ಯ ಪರದಾಡುವಂತಾಗಿದೆ. ಭಾರಿ ವಾಹನಗಳು ಕೂಡ ಈ ರಸ್ತೆಯಲ್ಲಿ ಸಂಚರಿಸುವದರಿಂದ ದಿನ ನಿತ್ಯ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪೊಲೀಸ್ ಇಲಾಖೆ ಬಜಾರ ರಸ್ತೆಯನ್ನು ಇನ್ನಾದರೂ ಏಕಮುಖಿ ಸಂಚಾರಗೊಳಿಸಿ ಟ್ರಾಫಿಕ್ ಮುಕ್ತಗೊಳಿಸುತ್ತಾರೆಯೇ ಕಾದು ನೋಡೋಣ?
ಅರ್ಬನ್ ಬ್ಯಾಂಕ ರಸ್ತೆಯು ಅಲ್ಲಲ್ಲಿ ತೆಗ್ಗು ದಿನ್ನೆಗಳಿಂದ ಕೂಡಿ ರಸ್ತೆ ಹದಗೆಟ್ಟು ಪಾದಚಾರಿಗಳು ಧೂಳಿನಿಂದ ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ಪುರಸಭೆ ಅಧಿಕಾರಿಗಳು ರಸ್ತೆ ಡಾಂಬರೀಕರಣ ಕೈಗೊಂಡು ಒಳ್ಳೆಯ ಪರಿಸರ ನಿಮರ್ಾಣ ಮಾಡಲಿ.
ಉಮೇಶ ರೇವಣಕರ, ನಾಗರಿಕರು
ಈ ಕುರಿತು ವಿಷಯ ನನ್ನ ಗಮನಕ್ಕೆ ಬಂದಿದ್ದು ತಕ್ಷಣ ಪುರಸಭೆ ಅಧಿಕಾರಿಗಳಿಗೆ ಸೂಚಿಸಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗುವದು.
ಮಾರುತಿ ಎಂ.ಪಿ. ಉಪವಿಭಾಗಾಧಿಕಾರಿ, ಪುರಸಭೆ ಆಡಳಿತಾಧಿಕಾರಿ