ಲೈಂಗಿಕ ಅಲ್ಪಸಂಖ್ಯಾತರ ಘನತೆ-ಸಾಮರ್ಥ್ಯಗಳನ್ನು ಗೌರವಿಸಬೇಕಾಗಿದೆ: ಡಾ. ಅಕ್ಕೈ ಪದ್ಮಶಾಲಿ
The dignity and capabilities of sexual minorities must be respected: Dr. Akkai Padmashali
ಲೈಂಗಿಕ ಅಲ್ಪಸಂಖ್ಯಾತರ ಘನತೆ-ಸಾಮರ್ಥ್ಯಗಳನ್ನು ಗೌರವಿಸಬೇಕಾಗಿದೆ: ಡಾ. ಅಕ್ಕೈ ಪದ್ಮಶಾಲಿ
ಬೆಳಗಾವಿ, 04 ; “ಲೈಂಗಿಕ ಅಲ್ಪಸಂಖ್ಯಾತರು ತಾವು ಅನುಭವಿಸಿರುವ ನೋವು-ಅವಮಾನಗಳನ್ನು ಮೀರಿ, ಘನತೆಯುಕ್ತ ಬದುಕುಗಳನ್ನು ಕಟ್ಟಿಕೊಳ್ಳುತ್ತಿದ್ದು ಸಮಾಜದಲ್ಲಿನ ಬಹುಸಂಖ್ಯಾತ ಜನರು ತಮ್ಮ ಪೂರ್ವಗ್ರಹಗಳನ್ನು ಮೀರಿ, ಅವರ ಸಾಮರ್ಥ್ಯಗಳು, ಕೊಡುಗೆಗಳು ಹಾಗೂ ಸವಾಲುಗಳನ್ನು ಅರಿತು, ಗೌರವಿಸಬೇಕಾಗಿದೆ. ತಮ್ಮ ಮನೆ, ನೆರೆಹೊರೆ, ಶಾಲೆಗಳಲ್ಲಿ ಬಹಿಷ್ಕಾರ, ಬೈಗುಳ ಹಾಗೂ ದೌರ್ಜನ್ಯಗಳ ವಿರುದ್ಧ ವೈಯಕ್ತಿಕ ಹಾಗೂ ಸಾಮುದಾಯಿಕ ನೆಲೆಗಳಲ್ಲಿ ಹಕ್ಕು-ಕೇಂದ್ರಿತ ಹೋರಾಟಗಳನ್ನು ನಡೆಸುತ್ತಾ ಬಂದಿರುವ ಲೈಂಗಿಕ ಅಲ್ಪಸಂಖ್ಯಾತರು ಇಂದು ಕೂಡ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ವಿಶ್ವವಿದ್ಯಾಲಗಳು ಮತ್ತು ಇತರ ಸಂಸ್ಥೆಗಳು ಲೈಂಗಿಕ ಅಲ್ಪಸಂಖ್ಯಾತರ ಘನತೆ ಮತ್ತು ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಮತ್ತು ಅವರ ಕುರಿತ ವಿಷಯಗಳನ್ನು ಪಠ್ಯಕ್ರಮದಲ್ಲಿ ಸೇರಿ್ಡಸುವ ಕೆಲಸ ಮಾಡಬೇಕಾಗಿದೆ.” ಎಂದು ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಪರ ಹೋರಾಟಗಾರರು ಹಾಗೂ ’ಒಂದೆಡೆ’ ಸಂಸ್ಥೆ, ಬೆಂಗಳೂರು ಇದರ ಸಂಸ್ಥಾಪಕರಾದ ಡಾ. ಅಕ್ಕೈ ಪದ್ಮಶಾಲಿಯವರು ಅಭಿಪ್ರಾಯಪಟ್ಟರು. ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ ಇವರು ’ಒಂದೆಡೆ’ ಸಂಸ್ಥೆ, ಬೆಂಗಳೂರು ಇವರ ಸಹಯೋಗದೊಂದಿಗೆ ದಿನಾಂಕ 04/09/2025 ರಂದು ನಡೆದ "ಭಾರತದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಸವಾಲುಗಳು ಹಾಗೂ ಹೋರಾಟಗಳು" ಎಂಬ ವಿಷಯದ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ, ದಿಕ್ಸೂಚಿ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಲೇಖಕರು ಹಾಗೂ ‘ಒಂದೆಡೆ’ ಸಂಸ್ಥೆಯ ಟ್ರಸ್ಟಿಯಾಗಿರುವ ಶ್ರೀ ಲಕ್ಷ್ಮಣ ಕನಕಾುಂಟ್ಟ್ಲ(ಮಾಳವಿಕಾ) ಇವರು ರಚಿಸಿರುವ ’ಭರವಸೆ’ ಎಂಬ ಕೃತಿಯನ್ನು ವಿಶ್ವವಿದ್ಯಾಲಯದ ಕುಲಸಚಿವರಾದ ಶ್ರೀ. ಸಂತೋಷ ಕಾಮಗೌಡ ಕೆ.ಎ.ಎಸ್. ಇವರು ಲೋಕಾರೆ್ಣ ಮಾಡಿದರು. ಕೃತಿಯ ಪರಿಚಯ ಮಾಡಿಕೊಟ್ಟ ಶ್ರೀ ಲಕ್ಷ್ಮಣ ಕನಕಾುಂಟ್ಟ್ಲ(ಮಾಳವಿಕಾ) ಇವರು "ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಜನರು ಕೇವಲ ಭಿಕ್ಷಾಟನೆ ಮತ್ತು ಲೈಂಗಿಕ ಕಾರ್ಯಕರ್ತರ ಸಮುದಾಯ ಎಂದು ಗುರುತಿಸುತ್ತಾರೆ. ಆದರೆ ನಮ್ಮಲ್ಲಿರುವ ಪ್ರತಿಭೆ ಮತ್ತು ನಾವು ಸಮಾಜಕ್ಕೆ ಕೊಡುತ್ತಿರುವ ಕೊಡುಗೆಗಳ ಬಗ್ಗೆ ಜನರಲ್ಲಿ ಅವಜ್ಞೆ ಇದೆ. ಅದನ್ನು ತೊಡೆದುಹಾಕುವ ಉದ್ದೇಶದಿಂದ ನಮ್ಮ ಸಮುದಾಯದಲ್ಲಿನ ಸಾಧಕರ ಯಶೋಗಾಥೆಯನ್ನು ಸಾರುವ ಕೃತಿಯೇ ’ಭರವಸೆ’" ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಸಂತೋಷ ಕಾಮಗೌಡ ಕೆ.ಎ.ಎಸ್. ರವರು "ಸಮಾಜದಲ್ಲಿ ತಮಗೆ ದೊರೆಯಬೇಕಾದ ಸ್ಥಾನಮಾನವನ್ನು ಹಾಗೂ ಅವಕಾಶಗಳನ್ನು ಕಂಡುಕೊಳ್ಳಲು ಲೈಂಗಿಕ ಅಲ್ಪಸಂಖ್ಯಾತರು ಮಾಡಿರುವ ಹೋರಾಟಗಳು ಶ್ಲಾಘನೀಯವಾಗಿದ್ದು, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರತಿಯೊಂದು ವಿಭಾಗದಲ್ಲಿ ಲೈಂಗಿಕ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಪ್ರವೇಶಾತಿಯಲ್ಲಿ ಮೀಸಲಾತಿಯನ್ನು ಕಲ್ಪಿಸುವುದರೊಂದಿಗೆ, ಟಚಿಠಿಣಠ ವಿತರಣೆ ಹಾಗೂ ಇತರ ಸಬಲೀಕರಣದ ಯೋಜನೆಗಳಲ್ಲಿ ವಿಶ್ವವಿದ್ಯಾಲಯವು ಎಲ್ಲಾ ರೀತಿಯ ಸಹಕಾರ-ಸಹಾಯ ನೀಡುತ್ತಿದೆ" ಎಂದು ತಿಳಿಸಿದರು.
ಕರ್ನಾಟಕ ಅಂತರಲಿಂಗಿ ಅಸೋಸಿಯೇಷನ್, ಬೆಂಗಳೂರು ಇದರ ಅಧ್ಯಕ್ಷರಾದ ಕುಮಾರಿ. ಅಭೀದಾ ಬೇಗಮ್ ಹಾಗೂ ಬೆಳಗಾವಿಯ ಹ್ಯುಮ್ಯಾನೀಟೀಸ್ ಫೌಂಡೇಶನ್ ನ ವಕ್ತರರಾದ ಕಿರಣ್ ಬೇಡಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡರು.
ವಿಚಾರ ಸಂಕಿರಣದ ಸಂಚಾಲಕರಾದ ಪ್ರೊ. ಅಶೋಕ ಎ. ಡಿಸೋಜಾರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘಟನಾ ಕಾರ್ಯದರ್ಶಿಯಾದ ಡಾ. ದೇವತಾ ಡಿ ಗಸ್ತಿಯವರು ವಂದಿಸಿದರು. ಸುರೇಖಾರವರು ಕಾರ್ಯಕ್ರಮ ನಿರೂಪಿಸಿದರು. ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸಿದ್ಧಲಿಂಗೇಶ್ವರ ಬಿದರಳ್ಳಿ, ಡಾ. ಸಂತೋಷ ಎಲ್. ಪಾಟೀಲ ಹಾಗೂ ಡಾ. ಚಂದ್ರಶೇಖರ ಸಿ. ಬನಸೋಡೆ ಇವರು ಕಾರ್ಯಕ್ರಮದ ಸಹ-ಸಂಘಟಕರಾಗಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 