ವೀರಶೈವ ಸಮಾಜಕ್ಕೆ ತುಂಬಾಲಾರದ ನಷ್ಟ ಶಾಮಾನೂರ ನಿಧನ

ವೀರಶೈವ ಸಮಾಜಕ್ಕೆ ತುಂಬಾಲಾರದ ನಷ್ಟ ಶಾಮಾನೂರ ನಿಧನ The death of Shamanur is a great loss to the Veerashaiva community.

        ಕುಕನೂರ  15: ಈ ನಾಡಿನ ವೀರಶೈವ ಸಮಾಜಕ್ಕೆ ಶಿವಶಂಕ್ರ​‍್ಪ ಶಾಮಾನೂರ ರವರ ನಿಧನ ತುಂಬಲಾರದ ನಷ್ಟ ಎಂದು ಜಿಲ್ಲಾ ವೀರಶೈವ ಮಹಾಸಭಾದ ಸದಸ್ಯ ಎಮ್ ಎಸ್ ಹಿರೇಮಠ ಹೇಳಿದರು. ಅವರು ಕುಕನೂರ ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ  ದೀವೀರಶೈವ ಲಿಂಗಾಯತ ಮಹಾಸಭ ಕುಕನೂರ ತಾಲೂಕು ಘಟಕ ಮತ್ತು ಶ್ರೀಮಠದ ವತಿಯಿಂದ ನಡೆದ  ಶಾಮಾನೂರ ಶಿವಶಂಕ್ರ​‍್ಪ, ಮಾಜಿ ಕೇಂದ್ರ ಸಚಿವ ಶಿವರಾಜ ಪಾಟೀಲ, ದಿ ಗದಿಗೆಪ್ಪ ಪವಾಡಶೆಟ್ಟಿ ಯವರ ಶ್ರಧ್ದಾಂಜಲಿ ಸಬೆಯಲ್ಲಿ ಮಾತನಾಡುತ್ತಾ  ಧಾರ್ಮಿಕ ಕ್ಷೇತ್ರ, ಶೈಕ್ಷಣಿಕ ಕ್ಷೇತ್ರಕ್ಕೆ ಶಾಮನೂರ ರವರು ನೀಡಿದ ಕೊಡುಗೆ ಅಪಾರ ಎಂದರು. ನಂತರ ಮಾತನಾಡಿದ ವೀರಶೈವ ಮಹಾಸಭದ ತಾಲೂಕು ಅಧ್ಯಕ್ಷ ಬಸವನಗೌಡ ಪಾಟೀಲ ಮಾತಾನಾಡಿ ಶ್ರೀಮಠದ ಧಾರ್ಮಿಕ ಕಾರ್ಯಗಳಿಗೆ ಗದಿಗೆಪ್ಪ ನವರ ಕೊಡುಗೆ ಅಪಾರ, ಶ್ರೀಮಠದ ಪೂಜ್ಯರ ನೆಚ್ಚಿನ ಶಿಷ್ಯರಾಗಿ ಪಟ್ಟಣದ ಹಿರಿಯರಾಗಿ ಅವರ ಬದುಕು ಸಾರ್ಥಕವಾಗಿದೆ. ಈ ಸಂದರ್ಭದಲ್ಲಿ ಪೂಜ್ಯ ಮಹಾದೇವ ಸ್ವಾಮೀಜಿ, ಇಟಗಿ ಪೂಜ್ಯ ಗುರುಶಾಂತವೀರ ಸ್ವಾಮೀಜಿ, ಹಿರಿಯರಾದ ಈರಣ್ಣ ಅಣ್ಣೀಗೇರಿ, ಬಸಣ್ಣ ದಿವಟರ, ಮಲ್ಲಿಕಾರ್ಜುನ ಕರಮುಡಿ, ತಿಪ್ಪಣ್ಣ ಚಿಕ್ಕಮ್ಯಾಗೇರಿ, ಶರಣಪ್ಪ ಗದಿಗೇರಿ, ವಿಶ್ವನಾಥ ಕುಷ್ಟಗಿ, ಅಶೋಕಯ್ಯ ಹಿರೇಮಠ, ಸಂಗಮೇಶ ಕಲ್ಮಠ ಮತ್ತು ಇತರರು ಇದ್ದರು.  ಫೋಟೋ ಪೈಲ್ : ವೀರಶೈವ ಮಹಾಸಭದ ರಾಷ್ಟ್ರೀಯ ಅಧಕ್ಷ  ಶಾಮಾನೂರ ಶಿವಶಂಕ್ರ​‍್ಪ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.