ರಷ್ಯಾ ಸೇನೆ ಸೇರಿದ್ದ 10 ಭಾರತೀಯರ ಸಾವು ಆಘಾತಕಾರಿ "ಚಾರ ಹಂಚಿಕೊಂಡ ಪಂಜಾಬ್ ವ್ಯಕ್ತಿ
The death of 10 Indians who joined the Russian army is shocking,” shared a Punjabi man
ಜಲಂಧರ್: ಕಾಣೆಯಾಗಿದ್ದ ಸಹೋದರನನ್ನು ಹುಡುಕುವ ಸಲುವಾಗಿ ರಷ್ಯಾಗೆ ತೆರಳಿ, ಭಾರತಕ್ಕೆ ಬರಿಗೈಯಲ್ಲಿ ವಾಪಸ್ ಆಗಿರುವ ಪಂಜಾಬ್ ವ್ಯಕ್ತಿಯೊಬ್ಬರು ಆಘಾತಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಪರ ಹೋರಾಡಲು ಸೇನೆಗೆ ಸೇರಿದ್ದ 10 ಮಂದಿ ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ಭಾನುವಾರ ಹೇಳಿದ್ದಾರೆ.
ಜಲಂಧರ್ನ ಗೊರಯಾ ನಿವಾಸಿ ಜಗದೀಪ್ ಕುಮಾರ್ ಅವರು, ರಷ್ಯಾದಲ್ಲಿ ಮೃತಪಟ್ಟವರಲ್ಲಿ ಮೂವರು ಪಂಜಾಬ್ನವರು. ಉಳಿದವರು ಜಮ್ಮು ಹಾಗೂ ಉತ್ತರ ಪ್ರದೇಶದವರು ಎಂದು ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಭಾರತೀಯರು ಮೃತಪಟ್ಟಿರುವುದನ್ನು ದೃಢೀಕರಿಸುವ ಕೆಲವು ದಾಖಲೆಗಳನ್ನು ರಾಜ್ಯಸಭಾ ಸದಸ್ಯ ಬಲ್ಬೀರ್ ಸಿಂಗ್ ಸೀಚೆವಾಲ್ ಅವರ ಕಚೇರಿಗೆ ತಲುಪಿಸಿರುವುದಾಗಿ ತಿಳಿಸಿರುವ ಜಗದೀಪ್, ಭಾರತದ ಒಟ್ಟು ನಾಲ್ವರು ರಷ್ಯಾದಲ್ಲಿ ನಾಪತ್ತೆಯಾಗಿದ್ದಾರೆ ಎಂದೂ ಹೇಳಿದ್ದಾರೆ.
ಸೇನೆಗೆ ಭಾರತೀಯರನ್ನು ನೇಮಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಸೇನೆಯಲ್ಲಿರುವ ಎಲ್ಲ ಭಾರತೀಯರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಭಾರತ ಸೆಪ್ಟೆಂಬರ್ನಲ್ಲಿ ರಷ್ಯಾಗೆ ಒತ್ತಾಯಿಸಿತ್ತು. ಹಾಗೆಯೇ, ಆಮಿಷಗಳಿಗೆ ಒಳಗಾಗದೆ, ಮುಂದೆ ಎದುರಾಗಬಹುದಾದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ರಷ್ಯಾ ಸೇನೆಗೆ ಸೇರದಂತೆ ಭಾರತೀಯರಿಗೂ ಎಚ್ಚರಿಸಿತ್ತು. ಏತನ್ಮಧ್ಯೆ, ರಷ್ಯಾ ಸೇನೆಗೆ ಭಾರತದ ಯುವಕರ ನೇಮಕಾತಿಯನ್ನು ಸಂಪೂರ್ಣ ನಿಲ್ಲಿಸಲು ಕೇಂದ್ರ ತನ್ನ ಪ್ರಭಾವ ಬಳಸಬೇಕು ಎಂದು ಸೀಚೆವಾಲ್ ಅವರೂ ಮನವಿ ಮಾಡಿದ್ದರು.
'ಸೀಚೆವಾಲ್ ಅವರನ್ನು 2024ರ ಜೂನ್ 29ರಂದು ಮೊದಲ ಸಲ ಭೇಟಿಯಾಗಿದ್ದೆ. ಆ ವೇಳೆ, ರಷ್ಯಾ ಸೇನೆಯ ವಶದಲ್ಲಿರುವ ನನ್ನ ಸಹೋದರ ಮಂದೀಪ್ ಕುಮಾರ್ ಮತ್ತು ಇತರ ಭಾರತೀಯ ಯುವಕರನ್ನು ಸುರಕ್ಷಿತವಾಗಿ ವಾಪಸ್ ಕರೆಸುವಂತೆ ಮನವಿ ಮಾಡಿದ್ದೆ' ಎಂದು ಜಗದೀಪ್ ಹೇಳಿದ್ದಾರೆ.
ಇದರ ಬೆನ್ನಲ್ಲೇ, ಸೀಚೆವಾಲ್ ಅವರು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರನ್ನು ಭೇಟಿಯಾಗಿ, ಭಾರತೀಯರನ್ನು ಸುರಕ್ಷಿತವಾಗಿ ಕರೆತರುವಂತೆ ವಿನಂತಿಸಿದ್ದರು. ಪತ್ರವನ್ನೂ ಬರೆದಿದ್ದ ಅವರು, ರಷ್ಯಾದಲ್ಲಿ ಮೃತಪಟ್ಟ ಯುವಕರ ಶವಗಳನ್ನು ದೇಶಕ್ಕೆ ತರುವಂತೆ ಹಾಗೂ ಅವರವರ ಕುಟುಂಬಗಳಿಗೆ ಹಸ್ತಾಂತರಿಸುವಂತೆ ಕೋರಿದ್ದರು. ಹಾಗೆಯೇ, ಯುವಕರಿಗೆ ಆಮಿಷ ಒಡ್ಡುತ್ತಿರುವವರೆ ವಿರುದ್ಧ ಕಠಿಣ ಕ್ರಮಕ್ಕೂ ಒತ್ತಾಯಿಸಿದ್ದರು.
ಸೀಚೆವಾಲ್ ಅವರು ಆರಂಭದಿಂದಲೂ ಸಂತ್ರಸ್ತ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ಅವರ ಶ್ರಮದ ಫಲವಾಗಿ ಹಲವು ಯುವಕರು ತಮ್ಮ ಕುಟುಂಬಗಳನ್ನು ಸೇರಿಕೊಂಡಿದ್ದಾರೆ ಎನ್ನುತ್ತಾ, ಸಂಸದರಿಗೆ ಧನ್ಯವಾದ ತಿಳಿಸಿದ್ದಾರೆ.
ರಷ್ಯಾದ ಟ್ರಾವೆಲ್ ಏಜೆಂಟ್ ಒಬ್ಬರು ಸೇನೆಗೆ ಸೇರುವಂತೆ ತಮ್ಮ ಸಹೋದರನನ್ನು ಒತ್ತಾಯಿಸಿದ್ದರು. ಕುಟುಂಬವರು ಆತನೊಂದಿಗೆ ಕೊನೇ ಸಲ ಮಾತನಾಡಿದ್ದು 2024ರ ಮಾರ್ಚ್ನಲ್ಲಿ. ಅದಾದ ನಂತರ, ಆತನ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ, ರಷ್ಯಾಗೆ ತೆರಳಲು ನಿರ್ಧರಿಸಿದ್ದಾಗಿ ಜಗದೀಪ್ ವಿವರಿಸಿದ್ದಾರೆ.
ಎರಡು ಬಾರಿ ರಷ್ಯಾಗೆ ಹೋಗಿದ್ದ ಎಂದಿರುವ ಜಗದೀಪ್, ಸೀಚೆವಾಲ್ ಅವರು ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು. ಹಾಗೆಯೇ, ಅಲ್ಲಿ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಪತ್ರವನ್ನೂ ನೀಡಿದ್ದರು ಎಂದು ತಿಳಿಸಿದ್ದಾರೆ.
ಮೊದಲ ಸಲ ಹೋದಾಗ 21 ದಿನ ತಂಗಿದ್ದೆ. ಮತ್ತೊಮ್ಮೆ ಹೋದಾಗ ಎರಡು ತಿಂಗಳು ಉಳಿದುಕೊಂಡು, ಭಾರತೀಯರಿಗಾಗಿ ಹುಡುಕಾಟ ನಡೆಸಿ, ಕೆಲವು ಮಾಹಿತಿ ಸಂಗ್ರಹಿಸಿದ್ದೆ. ಭಾಷೆ ಗೊತ್ತಿಲ್ಲದ ಕಾರಣ ಕೆಲವು ಸಮಸ್ಯೆಗಳು ಎದುರಾದವು ಎಂದು ವಿವರಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 