ಕಾರವಾರ: ಬಿಜೆಪಿಯ ಮರಿಪುಡಾರಿಗಳ ಟೀಕೆಗಳಿಗೆ ಬಗ್ಗುವುದಿಲ್ಲ

ಕಾರವಾರ 14: ಬಿಜೆಪಿ ಮರಿಪುಡಾರಿಗಳ ಮೂಲಕ ನನ್ನ ಮೇಲೆ ಟೀಕಾಸ್ತ್ರ ಬಿಡುತ್ತಿದೆ. ಇದಕ್ಕೆ ಬಗ್ಗುವುದಿಲ್ಲ. ಕೇಂದ್ರ ಸಚಿವ ಅನಂತಕುಮಾರ್ ಬಳಿ ಎಷ್ಟು ಅಸ್ತ್ರಗಳಿವೆ ಎಂಬುದನ್ನು ನೋಡುವೆ ಎಂದು ಕೆನರಾ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯಥರ್ಿ, ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.

ಕಾರವಾರದ ಪತ್ರಿಕಾಭವನದಲ್ಲಿ ರವಿವಾರ ಸುದ್ದಿಗೋಷ್ಠಿ ಮಾಡಿದ ಅವರು ನಾನು ಆನೆ ಇದ್ದಂತೆ, ಯಾರೋ ಬೊಗಳುತ್ತಿದ್ದರೆ ನಾನು ಆನೆಯಂತೆ ನಡೆಯುತ್ತಿರುತ್ತೇನೆ ಎಂದರು. ನಮ್ಮ ಕುಟುಂಬದ ಆಸ್ತಿ ಬಗ್ಗೆ ಬಿಜೆಪಿಯ ಕೆಲವರು ಮಾತನಾಡಿದ್ದಾರೆ. ನನ್ನ ತಂದೆಯ ಕಾಲಕ್ಕೆ ನಮ್ಮ ಮನೆಯಲ್ಲಿ ಅಂಬ್ಯಾಸಡರ್ ಕಾರ್ ಇತ್ತು. ಸಾಮಿಲ್ ವ್ಯಾಪಾರವೂ ಇತ್ತು. ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿ ದುಡಿದು ಮುಂದೆ ಬಂದಿದ್ದೇವೆ. ಬಿಜೆಪಿ ಟೀಕೆಗೆ ಬಗ್ಗುವುದಿಲ್ಲ ಎಂದರು. ಚುನಾವಣೆ ಸಮೀಪಿಸುತ್ತಿದ್ದಂತೆ ನನ್ನ ಸ್ನೇಹಿತರ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಇದರಿಂದ ಪ್ರಚಾರಕ್ಕೆ ಹೋಗದಂತೆ ಕಟ್ಟಿಹಾಕುವ ಪ್ರಯತ್ನ ಎದುರಾಳಿ ಪಕ್ಷದಿಂದ ನಡೆದಿದೆ. ಇದೆಲ್ಲಾ ರಾಜಕೀಯದಲ್ಲಿ ಸಹಜ. ಎದುರಾಳಿ ಅಭ್ಯಥರ್ಿಗೆ ಜೆಡಿಎಸ್ ಕಾಂಗ್ರೆಸ್ ಒಗ್ಗಟ್ಟು ಮತ್ತು ಪ್ರಚಾರ ನೋಡಿ ನಡುಕ ಹುಟ್ಟಿದೆ. ನಾನು ಹಿಂದುಳಿದ ವರ್ಗಗಳ ಅಭ್ಯಥರ್ಿ. ಹಾಗಾಗಿ ನನ್ನ ಗೆಲುವು ನಿಶ್ಚಿತ ಎಂದರು. ಕ್ಷೇತ್ರದ ತುಂಬಾ ಓಡಾಡಿದ್ದೇನೆ. ಜನರ ಬೆಂಬಲ ಸಿಕ್ಕಿದೆ. ಕೇಂದ್ರ ಬಿಜೆಪಿ ಸಚಿವ ಅನಂತಕುಮಾರ್ ಬೂಸಿ ಬಿಡುತ್ತಾ ಓಡಾಡಿದ್ದೇ ಹೆಚ್ಚು. ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಯುವಕರಿಗೆ ಉದ್ಯೋಗ ಕೊಟ್ಟಿಲ್ಲ. ಕ್ಷೇತ್ರದ ಜನ ಕುರಿಗಳಲ್ಲ. ಕಣ್ಮುಚ್ಚಿ ಓಟು ಹಾಕಲು. ಅವರು ಯೋಚಿಸಿ ಮತ ಚಲಾಯಿಸಲಿದ್ದಾರೆಂದು ಜೆಡಿಎಸ್ ಅಭ್ಯಥರ್ಿ ಆನಂದ ಅಸ್ನೋಟಿಕರ್ ಹೇಳಿದರು.

ಕರಾವಳಿ ಜನರು ಸಹ ಮೀನು ತಿನ್ನುವವರು. ಅವರ ತಲೆ ಶಾರ್ಪ ಇದೆ. ಚುರುಕಾಗಿದೆ. ಪರೇಶ್ ಮೇಸ್ತಾ ಕೊಲೆ ಪ್ರಕರಣದಲ್ಲಿ ಜನರನ್ನು ವಿಭಜಿಸಲಾಯಿತು. ಸಿಬಿಐಗೆ ಪ್ರಕರಣ ವಹಿಸಿದರೂ ಏನೂ ಪ್ರಗತಿಯಾಗಿಲ್ಲ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಮತದಾನದ ವೇಳೆ ಹಾಲಿ ಸಂಸದರ ವಿರುದ್ಧ ಮತಚಲಾಯಿಸಲು ಕಾಯುತ್ತಿದ್ದಾರೆ ಎಂದರು.

ಅನಂತಕುಮಾರ್ ಭಕ್ತೆಯಾಗಲಿ:

ಕಾರವಾರ ಶಾಸಕಿ ರೂಪಾಲಿ ನಾಯ್ಕ ನಾನು ಮೋದಿ ಭಕ್ತೆ ಎಂದು ಹೇಳಿಕೊಂಡಿದ್ದಾರೆ. ಮೋದಿ ಭಕ್ತೆಯಾಗಿದ್ದರೆ ವಾರಣಾಸಿಗೆ ಹೋಗಿ ಪ್ರಚಾರ ಮಾಡಲಿ. ಇಲ್ಲೇಕೆ ಪ್ರಚಾರ ಮಾಡುವುದು? ಅವರು ಬಿಜೆಪಿ ಅಭ್ಯಥರ್ಿ ಅನಂತಕುಮಾರ್ ಹೆಗಡೆ ಭಕ್ತೆ ಎಂದು ಹೇಳಿಕೊಳ್ಳಲಿ. ಅನಂತಕುಮಾರ್ ಹೆಸರಲ್ಲಿ ಮತ ಯಾಚಿಸಲಿ ನೋಡೋಣ ಎಂದು ಸವಾಲು ಹಾಕಿದರು. ಜನರ ಕಷ್ಟಕ್ಕೆ ಸ್ಪಂದಿಸಿದ ವ್ಯಕ್ತಿಯ ಹೆಸರಲ್ಲಿ ಮತ ಕೇಳಲು ಭಯವೇ ಎಂದು ಶಾಸಕಿ ರೂಪಾಲಿ ಅವರಿಗೆ ಪ್ರಶ್ನೆ ಎಸೆದರು. 

ಹಣಕೋಣ ಉಷ್ಣಸ್ಥಾವರ:

ಹಣಕೋಣ ಉಷ್ಣಸ್ಥಾವರ ಸ್ಥಾಪನೆಗೆ ಕೇಂದ್ರ ಸಕರ್ಾರದಿಂದ ಅನುಮತಿ ಸಿಕ್ಕಿತ್ತು. ಇದರಲ್ಲಿ ನನ್ನ ಪಾತ್ರವೇನಿಲ್ಲ. ಸಂಸದ ಅನಂತಕುಮಾರ್ ಪಾತ್ರ ಇತ್ತು. ಅವರು ಆ ಉದ್ಯಮದಲ್ಲಿ ಪಾಲುದಾರರಿದ್ದರೋ ಏನೋ ಎಂಬುದು ನನಗೆ ಗೊತ್ತಿಲ್ಲ. ಇದ್ದರೂ ಇರಬಹುದು. ಅವರಿಗೆ ನನ್ನನ್ನು ಆ ವಿವಾದದಲ್ಲಿ ಮುಂದೆ ಬಿಟ್ಟು, ಉದ್ಯಮ ಸ್ಥಾಪನೆಯ ನಂತರ ಲಾಭ ಮಾಡಿಕೊಳ್ಳುವ ವಿಚಾರ ಇದ್ದರೂ ಇತ್ತು. ಆದರೆ ಜನರು ಆ ಉದ್ಯಮಕ್ಕೆ ವಿರೋಧ ಇದೆ ಎಂದು ಗೊತ್ತಾದಾಗ ನಾನು ಆ ಪ್ರಕರಣದಿಂದ ದೂರ ಸರಿದೆ. ವಾಸ್ತವದಲ್ಲಿ ಆ ಉದ್ಯಮ ಸ್ಥಾಪನೆಗೆ ರಾಜ್ಯದ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರ ಆಸಕ್ತಿ ಹೆಚ್ಚಿತ್ತು. ಜನಾರ್ಧನ ರೆಡ್ಡಿ ಅವರು ಸಹ ಆ ಉದ್ಯಮದ ಜೊತೆ ಇದ್ದರು ಎಂದು ವಿವರಿಸಿದರು. ಬಿಜೆಪಿಯಲ್ಲಿದ್ದಾಗ ಆದ ಆವಾಂತರಗಳಿಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರೇ ಕಾರಣ. ಇದು ನಮ್ಮ  ಅಂದಿನ ನಾಯಕರಾಗಿದ್ದ ಜನಾರ್ಧನರೆಡ್ಡಿ ಅವರಿಗೂ ಗೊತ್ತಿದೆ. ಬಿಜೆಪಿಯಲ್ಲಿನ ಪಲ್ಲಟ ಮತ್ತು ಅವಾಂತರಗಳಿಗೆ ನಾನು ಹೊಣೆಯಲ್ಲ. ವಾಸ್ತವಾಗಿ ಇಲ್ಲಿನ ಬಿಜೆಪಿಯವರು ನನಗೆ ಮಾತನಾಡಲೇ ಅವಕಾಶ ನೀಡುತ್ತಿರಲಿಲ್ಲ. ಬಿಜೆಪಿಯಲ್ಲಿ ಉಸಿರುಕಟ್ಟುವ ವಾತಾವರಣ, ಅಸಮಾನತೆ ನೋಡಿ ಹೊರ ಬಂದೆ ಎಂದರು. 

ಪ್ರಚಾರಕ್ಕೆ ಮುಖ್ಯಮಂತ್ರಿ :

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪ್ರಚಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಎ.18 ಮತ್ತು 19 ರಂದು ಕುಮಟಾಕ್ಕೆ ಬರಲಿದ್ದಾರೆ. ನಂತರ ಸಿದ್ದಾಪುರ, ಯಲ್ಲಾಪುರ, ಹಳಿಯಾಳ, ಮುಂಡಗೋಡ, ಕಿತ್ತೂರು, ಖಾನಾಪುರಗಳಲ್ಲಿ  ಜೆಡಿಎಸ್ ಮೈತ್ರಿ ಪಕ್ಷದ ಅಭ್ಯಥರ್ಿ ಪರವಾಗಿ ಮತಯಾಚಿಸಲಿದ್ದಾರೆಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ವಿವರಿಸಿದರು. ಪತ್ರಿಕಾಗೊಷ್ಠಿಯಲ್ಲಿ ಆರ್.ಜಿ,ನಾಯ್ಕ, ರಾಘು ನಾಯ್ಕ, ಮೋಹಿನಿ ನಾಯ್ಕ, ಸಹದೇವ ನಾಯ್ಕ, ಮೋಹನ್ ನಾಯ್ಕ,ಮಾರುತಿ ನಾಯ್ಕ ಮುಂತಾದವರು ಇದ್ದರು. ಇದೇ ವೇಳೆ ನಗರಸಭೆಯ ಮಾಜಿ ಸದಸ್ಯ ದೇವಿದಾಸ ನಾಯ್ಕ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು.