ಬೆಣ್ಣೆ ನಗರವನ್ನು ವಿದ್ಯಾಕಾಶಿಯನ್ನಾಗಿ ಮಾಡಿದ ಕೀರ್ತಿ ಶಾಮನೂರರಿಗೆ ಸಲ್ಲುತ್ತದೆ
The credit for making Benne Nagar a hub of education goes to Shamanur
ರಾಣೇಬೆನ್ನೂರು 19: ಸವಿರುಚಿಯಾದ ಬೆಣ್ಣೆದೋಸೆ, ಬೆಣ್ಣೆ ಮಾರುಕಟ್ಟೆಗೆ ಹೆಸರು ವಾಸಿಯಾಗಿದ್ದ ಮಧ್ಯಕರ್ನಾಟಕದ ದಾವಣಗೆರೆಯಲ್ಲಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ದೇಶವೇ ದಾವಣಗೆರೆಯತ್ತ ತಿರುಗಿನೋಡುವಂತೆ ಅಮೂಲಾಗ್ರ ಬದಲಾಣೆಮಾಡಿ ವಿದ್ಯಾಕಾಶಿಯನ್ನಾಗಿ ಮಾಡಿದ ಕೀರ್ತಿ ದೇಶದಲ್ಲಿಯೇ ಹಿರಿಯ ಶಾಸಕರಾಗಿದ್ದ ಸೋಲಿಲ್ಲದ ಸರದಾರ, ಮಾಜಿ ಸಂಸದ, ಮಾಜಿ ಸಚಿವ, ಹಾಲಿ ಶಾಸಕ, ವಾಣಿಜ್ಯೋದಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಾಽಽ ಶಾಮನೂರು ಶಿವಶಂಕರ್ಪನವರಿಗೆ ಸಲ್ಲುತ್ತದೆ ಎಂದು ರೈತ ಮುಖಂಡ, ಪ್ರಗತಿಪರ ಚಿಂತಕ ರವೀಂದ್ರಗೌಡ ಪಾಟೀಲ ಹೇಳಿದರು.
ಅವರು ಇಂದು ಮಾಕನೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಸಹಯೋಗದಲ್ಲಿ ಇಹಲೋಕ ತ್ಯಜಿಸಿದ ಶಾಮನೂರು ಶಿವಶಂಕರ್ಪನವರಿಗೆ ಏರಿ್ಡಸಿದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಶಾಮನೂರು ಶಿವಶಂಕರ್ಪನವರು ಎಲ್ಲಾ ಕ್ಷೇತ್ರದಲ್ಲೂ ಕ್ರಾಂತಿ ಮಾಡುವ ಮೂಲಕ ಲಕ್ಷಾಂತರ ಜನರಿಗೆ ಅನಕೂಲ ಮಾಡಿಕೊಟ್ಟಿದ್ದಾರೆ ಎಂದರು. ಇನ್ನೊಬ್ಬ ರೈತ ಮುಖಂಡ ಈರಣ್ಣ ಮಾಕನೂರು ಮಾತನಾಡಿ ಶಾಮನೂರು ಶಿವಶಂಕರ್ಪನವರು ಶುಗರ ಕಾರ್ಖಾನೆಗಳನ್ನು ಪ್ರಾರಂಭಿಸುವ ಮೂಲಕ ಈ ಭಾಗದ ಕಬ್ಬು ಬೆಳೆಗಾರ ರೈತರಿಗೆ ಮತ್ತು ಅನೇಕ ರೈಸ್ ಮಿಲ್ಲಗಳನ್ನು ತೆರೆಯುವ ಮೂಲಕ ಭತ್ತ ಬೆಳೆಗಾರ ರೈತರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ಮಾಕನೂರು ಗ್ರಾಮದ ಪ್ರಮುಖ ಸರ್ಕಲ್‌ನಲ್ಲಿ ಏರಿ್ಡಸಿದ ಈ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್‌ನ ಹುಬ್ಬಳ್ಳಿ ರಿಜಿನಲ್ ಕಛೇರಿಯ ನಾರಾಯಣ ಜೋಶಿ, ಸ್ಥಳೀಯ ಶಾಖೆಯ ವ್ಯವಸ್ಥಾಪಕರಾದ ಅನಿರುದ್ಧ ಬಿ. ಚವ್ಹಾಣ, ಸಿಬ್ಬಂದಿಗಳಾದ ಪೂಜಾ ಕಮ್ಮಾರ, ಬಿ. ಬಸವರಾಜ ಕು. ನಯನಾ, ಕೆ. ನಾಗರಾಜಪ್ಪ, ರೈತ ಮುಖಂಡರಾದ ಸಿದ್ದನಗೌಡ ಗೋವಿಂದಗೌಡ್ರ, ಷಣ್ಮುಖಪ್ಪ ಸಣ್ಣಹನುಮನಗೌಡ್ರ, ಹನುಮಂತಗೌಡ ಪಾಟೀಲ, ಸುರೇಶ ಮಾಲಾಪುರ, ಹರಿಹರಗೌಡ ಪಾಟೀಲ, ಹನುಮಂತಗೌಡ ಬಂಗಿಗೌಡ್ರ, ದಿಳ್ಳೆಪ್ಪ ಗಂದಣ್ಣನವರ, ಭೀಮಪ್ಪ ಓಲೇಕಾರ, ಕೃಷ್ಣಪ್ಪ ಬಾರ್ಕಿ, ಮಾದೇವಪ್ಪ ಹಾರೊಗೊಪ್ಪ, ವಿರುಪಾಕ್ಷಗೌಡ ಪಾಟೀಲ, ತಿಪ್ಪಣ್ಣ ಜೋಗಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 