ಹಿಂದೂ ಜಾಗೃತಿಯಾದಾಗಲೇ ದೇಶ ಜಾಗೃತಿಯಾಗುತ್ತದೆ: ಕೃಷ್ಣಾ ಜೋಶಿ
The country will awaken only when Hindus awaken: Krishna Joshi
ಬೀಳಗಿ: ಹಿಂದೂಗಳು ಜಾಗೃತಗೊಂಡಾಗ ಮಾತ್ರ ದೇಶ ಸಶಕ್ತವಾಗಿ ಬೆಳೆಯಲು ಸಾಧ್ಯ. ಭಾರತ ಇಂದು ಅನೇಕ ಕ್ಷೇತ್ರಗಳಲ್ಲಿ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದ್ದು, ಜಗತ್ತಿಗೆ ಮಾರ್ಗದರ್ಶನ ನೀಡುವ ಗುರು ಸ್ಥಾನದಲ್ಲಿ ನಿಂತಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ ಕೃಷ್ಣಾ ಜೋಶಿ ಹೇಳಿದರು.
ಪಟ್ಟಣದ ಸಿದ್ದೇಶ್ವರ ಶಾಲಾ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಹಿಂದೂ ಸಮ್ಮೇಳನದಲ್ಲಿ ಮುಖ್ಯವಕ್ತಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲರೂ ಹಿಂದೂ ಎಂಬ ಭಾವನೆಯೊಂದಿಗೆ ಒಂದಾದಾಗ ಮಾತ್ರ ಸಾಮಾಜಿಕ ಸಾಮರಸ್ಯ ಸಾಧ್ಯ ಎಂದರು.
ಭಾರತದ ಚಿಂತನೆ ಯಾವಾಗಲೂ ವಿಶ್ವದ ಕಲ್ಯಾಣವನ್ನೇ ಬಯಸುತ್ತದೆ. ಇಂದು ಜಗತ್ತಿನಾದ್ಯಂತ ಸಂಶೋಧನೆ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ. ಜಗತ್ತಿಗೆ ಸಂಸ್ಕೃತಿ ಮತ್ತು ವಸ್ತೊಧಾರಣೆಯನ್ನು ಕಲಿಸಿಕೊಟ್ಟ ಹಿರಿಮೆ ನಮ್ಮ ದೇಶದ್ದು ಎಂದು ಬಣ್ಣಿಸಿದರು.
ಕೆಸರಟ್ಟಿ ಘೋರ ತಪಸ್ವಿ ಶಂಕರಲಿಂಗ ಸ್ವಾಮೀಜಿ ಗುರುಪೀಠದ ಬಾಲಶಿವಯೋಗಿ ಸೋಮಲಿಂಗ ಸ್ವಾಮೀಜಿ ದಿವ್ಯ ಸಾನ್ನಿದ್ಯ ವಹಿಸಿ ಮಾತನಾಡಿ, ಹಿಂದುಗಳು ಸಂಘಟಿತರಾಗಿ ಒಂದಾಗಬೇಕು. ಸನಾತನ ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿಕೊಂಡಿರುವ ಏಕೈಕ ದೇಶ ಭಾರತ. ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಗಳು ಉಳಿಯಬೇಕಾದರೆ ಪ್ರತಿಯೊಬ್ಬ ಹಿಂದು ಜಾಗೃತನಾಗಬೇಕು. ಗೋವುಗಳ ಸಂರಕ್ಷಣೆ ಅಗತ್ಯವಿದೆ ಎಂದು ಕರೆ ನೀಡಿದರು.
ಸೋಮಪ್ಪಯ್ಯನ ಮಠದ ಚನ್ನಬಸವ ಸ್ವಾಮೀಜಿ, ಅನ್ನಪೂರ್ಣೇಶ್ವರಿ ಬೃಹನ್ಮಠದ ಶಿವಾನಂದ ದೇವರು, ಹುಚ್ಚೇಶ್ವರ ಮಠದ ಫಕೀರಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿಂದು ಸಮ್ಮೇಳನದ ಸಮಿತಿ ಅಧ್ಯಕ್ಷ ಚಂದ್ರಶೇಖರ ಕಟಗೇರಿ ಅಧ್ಯಕ್ಷತೆ ವಹಿಸಿದ್ದರು.
ಗಮನಸೆಳೆದ ಶೋಭಾಯಾತ್ರೆ:
ಸಮ್ಮೇಳನದ ಅಂಗವಾಗಿ ಜಿ.ಎಲ್.ಬಿ.ಸಿ. ಹನುಮಾನ ಮಂದಿರದಿಂದ ಬೃಹತ್ ಶೋಭಾಯಾತ್ರೆ ಆರಂಭಗೊಂಡು ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ಮಾರ್ಗವಾಗಿ ಸಿದ್ದೇಶ್ವರ ಶಾಲಾ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ಸಾವಿರಾರು ಹಿಂದುಗಳು ಪಾಲ್ಗೊಂಡಿದ್ದರು.
ಮಾಜಿ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಎಚ್ ಬಿ ಬಾಳಶೆಟ್ಟರ, ಮಲ್ಲಪ್ಪ ಶಂಭೋಜಿ, ಹಿಂದು ಸಮ್ಮೇಳನ ಸಮಿತಿಯ ಉಪಾಧ್ಯಕ್ಷ ಶಿವಾನಂದ ಯಾಳವಾರಮಠ, ಖಜಾಂಚಿ ಅಮಿತ್ ಗಜರಗಾಂವಕರ, ವೀರಣ್ಣ ತೋಟದ ಬಸವಂತಪ್ಪ ಸಂಕಾನಟ್ಟಿ, ಆನಂದ ಮಂಟೂರು, ಶಿವಪ್ಪ ಅವಟಿ, ನಾಗರಾಜ ಟಂಕಸಾಲಿ, ಸುರೇಶ ಅಂಗಡಿ ಹಾಗೂ ವೀರಭದ್ರೇಶ್ವರ, ಅಕ್ಕಮಹಾದೇವಿ, ಅಂಬಾಭವಾನಿ, ಪ್ರಿಯದರ್ಶಿನಿ ಮಹಿಳಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 