ದೇಶಕ್ಕೆ ದೇಶಭಕ್ತ, ಶಿಸ್ತುಬದ್ಧ, ಕರ್ತವ್ಯನಿಷ್ಠ ಯುವಕರ ಅಗತ್ಯವಿದೆ: ಸುಭಾಷ ಭಟ್ಟ
The country needs patriotic, disciplined, and dutiful youth: Subhash Bhatt
ಕಾಗವಾಡ, 10 : ದೇಶದ ಗಡಿ ಕಾಯುವ, ದೇಶದ ರಕ್ಷಣೆಗೆ ಪ್ರಾಣವನ್ನೇ ತ್ಯಾಗ ಮಾಡುವ ವೀರ ಯೋಧರನ್ನು ನೆನಪು ಮಾಡಿಕೊಂಡು ಅವರಿಗೊಂದು ಕೃತಜ್ಞತೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತೀಯ ಸೇನೆಗೆ ಆಯ್ಕೆಯಾಗಿರುವ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಸನ್ಮಾನಿಸುವುದು ಮತ್ತು ದೇಶ ಸೇವೆಗೆ ಆ ಯುವಕರನ್ನು ಸಿದ್ಧ ಗೊಳಿಸುವ ಈ ಕಾರ್ಯವು ಎಲ್ಲರೂ ಮೆಚ್ಚುವಂಥದ್ದೆಂದು ನಾಯಬ ಸುಬೇದಾರ ಸುಭಾಷ ಭಟ ಹೇಳಿದರು.
ಅವರು ಶನಿವಾರ ದಿ. 06 ರಂದು ಶಿವಾನಂದ ಮಹಾವಿದ್ಯಾಲಯದ ಎನ್‌ಸಿಸಿ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಸೇನೆಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡುತ್ತಿದ್ದರು. ಎನ್‌ಸಿಸಿ ಎಂಬುದು ಭಾರತೀಯ ಸೇನೆಗೆ ಸೈನಿಕರನ್ನು ಸಿದ್ಧಗೊಳಿಸುವ ಒಂದು ಪವಿತ್ರ ಪ್ರಕ್ರಿಯೆಯಾಗಿದೆ. ದೇಶ ಸೇವೆಗೆ ಅತ್ಯುನ್ನತ ಅವಕಾಶವಾಗಿದೆ. ಇಂದು ದೇಶಕ್ಕೆ ರಾಷ್ಟ್ರಭಕ್ತ, ಶಿಸ್ತುಬದ್ಧ ಮತ್ತು ಕರ್ತವ್ಯನಿಷ್ಠ ಯುವಕರ ಅಗತ್ಯವಿದೆ ಎಂದರು.
ಬೆಳಗಾವಿಯ 26 ನೇ ಕರ್ನಾಟಕ ಬೆಟಾಲಿಯನ್ ಹವಾಲ್ದಾರ ರಂಜಿತ ಬಡೇಕರ ಮಾತನಾಡಿ, ಅಗ್ನಿವೀರ ಆಯ್ಕೆ ಪ್ರಕ್ರಿಯೆಯಲ್ಲಿ ಶಿವಾನಂದ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡುತ್ತಿದ್ದು, ಎನ್‌ಸಿಸಿ ಯಲ್ಲಿ ಪಡೆದ ತರಬೇತಿ ಅವರಿಗೆ ಸೇನೆಯಲ್ಲಿ ಬಹಳ ಉಪಯುಕ್ತವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಪಪೂ ಶ್ರೀ ಯತೀಶ್ವರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂಗಸೂಳಿಯ ಲಕ್ಷ್ಯ ಕರಿಯರ್ಸ ಅಕಾಡೆಮಿಯ ಸ್ಥಾಪಕ ನಿವೃತ್ತ ಸುಬೇದಾರ ಚಿದಾನಂದ ಕುಂಬಾರ ತಮ್ಮ ಅನಿಸಿಕೆ ಹಂಚಿಕೊಂಡರು.
ಲೆಫ್ಟಿನೆಂಟ್ ಅಶೋಕ ಅಲಗೊಂಡಿ ಮಾರ್ಗದರ್ಶನದಲ್ಲಿ ಒಂದೇ ಬಾರಿಗೆ 30 ವಿದ್ಯಾರ್ಥಿಗಳು ಅಗ್ನಿವೀರಗೆ ಆಯ್ಕೆಯಾದ್ದು, ತರಬೇತಿ ಪೂರ್ಣಗೊಳಿಸಿದ ಹಾಗೂ ಇತ್ತೀಚಿಗೆ ಆಯ್ಕೆಯಾದ ವಿದ್ಯಾರ್ಥಿಳನ್ನು ಸತ್ಕರಿಸಲಾಯಿತು.
ಈ ವೇಳೆ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರೊ. ಬಿ.ಎ. ಪಾಟೀಲ, ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಪಿ. ತಳವಾರ, ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಪಿ.ಬಿ. ನಂದಾಳೆ, ಸಮಸ್ತ ಬೋಧಕ-ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ. ಜೆ.ಕೆ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೋ. ಎಸ್. ಎಸ್. ಫಡತರೆ ನಿರೂಪಿಸಿದರು. ಪ್ರೊ. ವಿ.ಬಿ. ಬುರ್ಲೆ ವಂದಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 