ರಾಜಪ್ರಭುತ್ವದ ಅಭಿವೃದ್ಧಿಯಲ್ಲಿ ಕೆಳ ಸ್ತರದ ಜನರ ಕೊಡುಗೆ ಅಪಾರ
The contribution of the lower classes to the development of the monarchy is immense
ವಿಜಯನಗರ ಫೆ.14: ವಿಜಯನಗರ ಸಾಮ್ರಾಜ್ಯವನ್ನು ಹೊಸ ದಿಕ್ಕಿನಲ್ಲಿ ಅಧ್ಯಯನ ಮಾಡುವುದರಿಂದ ಸಾಮ್ರಾಜ್ಯ ನಿರ್ಮಾಣದಲ್ಲಿ ಜನಸಾಮಾನ್ಯರ ಜೀವನಶೈಲಿ, ಆರ್ಥಿಕ ಪರಿಸ್ಥಿತಿ ಮತ್ತು ಅವರ ಪರಿಶ್ರಮದ ಜೊತೆಗೆ ರಾಜಪ್ರಭುತ್ವಕ್ಕೆ ನೀಡಿದ ಅಪಾರ ಕೊಡುಗೆಯನ್ನ ತಿಳಿಯಬಹುದು ಎಂದು ಸಂಶೋಧಕ ಡಾ.ಸಮದ್ ಕೊಟ್ಟೂರು ಹೇಳಿದರು. ಹಂಪಿ ಉತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತ ಸಹಯೋಗದಲ್ಲಿ ಶನಿವಾರ ವಿರೂಪಾಕ್ಷೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಆಯೋಜಿಸಲಾದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸುಮಾರು 20ರಿಂದ 30 ಸಾವಿರ ವರ್ಷಗಳ ಹಿಂದಿನ ಆದಿಮಾನವ ನೆಲೆಗಳನ್ನು ಹೊಂದಿರುವ ಈ ವಿಜಯನಗರ ಸಾಮ್ರಾಜ್ಯವು ಭಾರತದಲ್ಲಿ ಮಾನವ ನೆಲೆಸಿದ ಮೊದಲ ಸ್ಥಳ ಎಂದು ಗುರುತಿಸಲಾಗಿದೆ. ವಿಜಯನಗರ ಸಾಮ್ರಾಜ್ಯದಲ್ಲಿ ಬೆಳೆಯುವ ಸುಗಂಧಿ ಬಾಳೆ, ನೀರಾವರಿ ಯೋಜನೆ, ಕೃಷಿ, ಆಹಾರ ಪದ್ಧತಿ, ಜನರ ಜೀವನ ಶೈಲಿ ಸಹ ವಿಜಯನಗರ ಸಾಮ್ರಾಜ್ಯದ ಬೆಳವಣಿಗೆಗೆ ಸಾಕ್ಷಿಯಾಗಿದೆ. ಅಲ್ಲದೆ ಕ್ಷಮಿಕರು, ಕೂಲಿಕಾರ್ಮಿಕರು, ಶೋಷಿತರು ಹಾಗೂ ಕೆಳ ಸಮುದಾಯದವರ ಶ್ರಮ, ತಪಸ್ಸು ಅಷ್ಟೇ ಮುಖ್ಯವಾದದ್ದು ಎಂದು ಸಂಶೋಧಕ ಡಾ.ಸಮದ್ ಕೊಟ್ಟವರು ಅವರು ಅಭಿಪ್ರಾಯಪಟ್ಟರು.
ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿ, ಮಾತನಾಡಿದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಎಫ್.ಟಿ ಹಳ್ಳಿಕೇರಿ, ಹಂಪಿಯ ಇತಿಹಾಸ, ಕಲೆ, ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ ವಿಷಯಗಳ ಜೊತೆಗೆ ಇದಕ್ಕಿಂತ ಭಿನ್ನವಾಗಿ ನೈಸರ್ಗಿಕ ಚರಿತ್ರೆ, ಮಹಿಳೆಯರ ಕೊಡುಗೆ, ದೇವದಾಸಿ ಪದ್ಧತಿ, ವಿಧವಾ ಪದ್ಧತಿ, ಕೆಳವರ್ಗದವರ ಪರಿಶ್ರಮದ ಕುರಿತು ವಿಷಯವನ್ನು ಮಂಡಿಸುವುದು ಬಹಳ ಮುಖ್ಯ ಹಾಗೂ ಇಂತಹ ವಿಚಾರಗೋಷ್ಠಿಗಳ ವಿಷಗಯಳನ್ನು ಆಧಾರವಾಗಿಟ್ಟುಕೊಂಡು ಕೃತಿಗಳನ್ನ ಪ್ರಕಟಗೊಳಿಸುವುದು ಬಹಳ ಮುಖ್ಯವಾಗಿದೆ. ಜಿಲ್ಲಾಡಳಿತ ಮತ್ತು ಸರ್ಕಾರ ಇಂತಹ ವಿಚಾರಗೋಷ್ಠಿಗಳಿಗೆ ಇನ್ನೂ ಹೆಚ್ಚಿನ ಮನ್ನಣೆ ನೀಡಬೇಕು ಎಂದರು.
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರಂಗನಾಥ್ ಆರನಕಟ್ಟೆ ಮಾತನಾಡಿ, ವಿಜಯನಗರ ಸಾಮ್ರಾಜ್ಯ ಕೇವಲ ಯುದ್ಧ ಮಾಡುವ ರಾಜಪ್ರಭುತ್ವ ಎಂದು ಭಾವಿಸದೆ ಜನಪ್ರಭುತ್ವಕ್ಕೆ ಬೇಕಾದ ಉಪಯೋಗಗಳು ಮತ್ತು ಪ್ರಯೋಜನಗಳನ್ನು ಗಮನಿಸಬೇಕು. ರಾಬರ್ಟ್ ಸಿವಿಲ್ ತಮ್ಮ ಕೃತಿ "ವಿಜಯನಗರ ಸಾಮ್ರಾಜ್ಯವನ್ನು ಮರೆತು ಹೋದ ಸಾಮ್ರಾಜ್ಯ" ಎಂದು ಕರೆದು. ವಿಜಯನಗರ ಹಿಂದೂ ಸಾಮ್ರಾಜ್ಯವನ್ನು ಹಿಂದು ಬಹುಮನಿ ರಾಜ್ಯ ಮುಸ್ಲಿಂ ರಾಜ್ಯ ಎಂದು ವಿಭಾಗಿಸಿದ ಕಾರಣವೇ ಹಿಂದು ಮತ್ತು ಮುಸ್ಲಿಂ ಎನ್ನುವ ಸಂಕುಚಿತವಾಗಿ ಅಧ್ಯಯನ ಮಾಡಲಾಗುತ್ತಿದೆ.
ರಾಜಪ್ರಭುತ್ವ ಎಂಬುದು ಕೇವಲ ಒಂದು ಮತ ಧರ್ಮ, ಭಾಷೆ, ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ ಬದಲಾಗಿ ಅಲ್ಲಿನ ಜನರ ಸಮಸ್ತ ಆರ್ಥಿಕ ಪರಿಸ್ಥಿತಿ, ಜಾತಿ ವ್ಯವಸ್ಥೆ, ಶೋಷಣೆ ದಬ್ಬಾಳಿಕೆ, ಮೊದಲಾದ ಸಮಸ್ಯೆಗಳನ್ನು ನಿವಾರಿಸುವುದು ನಿಜವಾದ ರಾಜಪ್ರಭುತ್ವವಾಗಿದೆ ಎಂದು ಆಶಯ ನುಡಿಗಳನ್ನಾಡಿದರು. ವಿಚಾರಗೋಷ್ಠಿಯಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದ ಸತಿ ಸಹಗಮನ ಪದ್ದತಿ ಮತ್ತು ದೇವದಾಸ ಪದ್ಧತಿ, ಕುಮಾರ ರಾಮನ ಜನಪದ ಕಾವ್ಯಗಳ ಸಾಂಸ್ಕೃತಿಕ ಅವಲೋಕನ, ಹಂಪಿಯ ಜಾನಪದ, ವಿಜಯನಗರ ಕಾಲದ ಪಾಳೇಗಾರರು ಎಂಬ ವಿಷಯಗಳ ಮೇಲೆ ವಿಚಾರಗೋಷ್ಠಿ ಜರುಗಿದವು.
ಕನ್ನಡ ಹಂಪಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ, ಹೊಸಪೇಟೆ ಕ.ಸಾ.ಪ ಬಂಡೆ ಶ್ರೀಕಾಂತ, ಗಂಗಾವತಿ ಕ.ಸಾ.ಪ ತಾಲ್ಲೂಕು ಅಧ್ಯಕ್ಷರಾದ ರುದ್ರೇಶ ಮಡಿವಾಳ, ವೇದಿಕೆ ಸಂಚಾಲಕರಾದ ನಾಗರಾಜ ಹವಲ್ದಾರ್, ಸಾಹಿತಿ ಅಜಮೀರ ನಂದಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೆಶಕಿ ಶ್ವೇತಾ ಎಸ್. ದಯಾನಂದ ಖಿನ್ನಾಳ, ಜಗದೀಶ್ ಸೇರಿದಂತೆ ಹಿರಿಯ ಪ್ರಾದ್ಯಾಪಕರು, ಸಾಹಿತಿಗಳು ಉಪಸ್ಥಿತಿಯಲ್ಲಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 