ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರ

ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರ   The contribution of poets and writers in building a better society is immense

ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರ   

ಕೊಪ್ಪಳ 26:  ಕವಿಗಳು ಬರೆದಿರುವ ಕವನ ಸಾಹಿತಿಗಳು ಬರೆದಿರುವ ಬರಹಗಳಲ್ಲಿ ಉತ್ತಮ ಸಮಾಜ ನಿರ್ಮಾಣಗೊಳ್ಳುವ ಶಕ್ತಿ ಇರುತ್ತದೆ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಕವಿ ಮತ್ತು ಸಾಹಿತಿಗಳ ಕೊಡುಗೆ ಅಪಾರವಾಗಿದೆ ಎಂದು ಹಿರಿಯ ಸಾಹಿತಿ ಹೋರಾಟಗಾರ ಪ್ರೊಫೆಸರ್ ಅಲ್ಲಮಪ್ರಭು ಬೆಟ್ಟದೂರು ಹೇಳಿದರು, ಅವರು ನಗರದ ಸಾಹಿತ್ಯ ಭವನದಲ್ಲಿ ಶನಿವಾರ ರಾತ್ರಿ ವೇಳೆಯಲ್ಲಿ   ಫಿರ್ ದೋಸ್ ಸಾಂಸ್ಕೃತಿಕ ಕ್ರೀಡಾ ಹಾಗೂ ತರಬೇತಿ ಸಂಸ್ಥೆ ಮತ್ತು ಕರ್ನಾಟಕ ಉರ್ದು ಅಕಾಡೆಮಿ ಅವರ ಸಂಯುಕ್ತ ಆಶ್ರಯ ದಲ್ಲಿ ಏರಿ​‍್ಡಸಿದ್ದ ಅಖಿಲ ಭಾರತ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯರಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಭಾರಿ  ಜನಸ್ತೋಮ ಉದ್ದೇಶಿಸಿ ಮಾತನಾಡಿದರು ,ಮುಂದುವರೆದು ಮಾತನಾಡಿದ ಅವರು ಉರ್ದು ಭಾಷೆ ಕೂಡ ನಮ್ಮ ದೇಶದಲ್ಲಿಯೇ ಹುಟ್ಟಿ ಬೆಳೆದ ಭಾಷೆಯಾಗಿದ್ದು ಇದು ನಮ್ಮ ಕನ್ನಡ ಹಿಂದಿ ಮತ್ತು ದೇಶದ ಇತರ ಭಾಷೆಯಂತೆ ಅತ್ಯಂತ ಸೊಗಸಾದ ಭಾಷೆ ಯಾಗಿದೆ ಎಂದರು, ಉರ್ದು ಕವಿಗಳು ಹಿಂದಿ ಮತ್ತು ಕನ್ನಡ ಕವಿಗಳನ್ನು ಒಳಗೊಂಡಂತೆ ಉತ್ತಮ ಕವಿ ಸಮ್ಮೇಳನ ಮಾಡುತ್ತಾ ಬಂದಿದ್ದಾರೆ ಇದರಿಂದ ಸಮಾಜಕ್ಕೆ ಒಂದು ಉತ್ತಮ ಸಂದೇಶ ರವಾನೆ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ. 

 ಇದು ಒಳ್ಳೆಯ ಬೆಳವಣಿಗೆ ಎಂದು ಅಲ್ಲಮಪ್ರಭು ಬೆಟ್ಟದೂರು ಹೇಳಿದರು, ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್  ಪಟೇಲ್ ಮಾತನಾಡಿ  ಪರಸ್ಪರ ಅನುಭವ ಗಳನ್ನು ಹಂಚಿ ಕೊಳ್ಳಲು ಭಾಷೆ ಅತ್ಯಂತ ಮಹತ್ವ ವಾಗಿದೆ ಉರ್ದು ಭಾಷೆ ನಮ್ಮ ದೇಶದ ಭಾಷೆ ಇದು ಎಲ್ಲರೂ ಮಾತಾಡುವಂತಹ ಸಿಹಿ ಭಾಷೆ ಎಲ್ಲರಿಗೂ ಪ್ರಿಯವಾದ ಭಾಷೆ ಕೂಡ ಹೌದು ಎಂದು ಹೇಳಿದರು,ಕೊಪ್ಪಳದ ಹಿರಿಯ ಮುಖಂಡ ಸೈಯದ್ ಫೌಂಡೇಶನ್ ಅಧ್ಯಕ್ಷ ಡಾ, ಕೆ ಎಮ್ ಸೈಯದ್ ರವರು ಮಾತನಾಡಿ ಕೊಪ್ಪಳದಲ್ಲಿ ಕನ್ನಡ ಉರ್ದು ಹಿಂದಿ ಎಲ್ಲಾ ಭಾಷೆಗಳಿಗೆ ಜನ ಪ್ರೀತಿಸುತ್ತಾರೆ ಜನರ ಅಭಿರುಚಿಗೆ ತಕ್ಕಂತೆ ಪ್ರತಿ ವರ್ಷ ಇಲ್ಲಿ ಬೃಹತ್ ಕವಿ ಸಮ್ಮೇಳನ ನಡೆಯುತ್ತಿರುವುದು ನಮ್ಮೆಲ್ಲರಿಗೆ ಸಂತಸ ಉಂಟು ಮಾಡಿದೆ ಎಂದರು,ಧರ್ಮ ಗುರು ಗಂಗಾವತಿಯ ಮೌಲಾನ ಮೊಹಮ್ಮದ್ ಮುಸ್ತಫಾ ಕಮಾಲ್ ಪಾಷಾ ಖಾದ್ರಿ ತಸ್ಕಿನಿ ರವರು ಮಾತನಾಡಿ ಇಂತಹ ಕವನ ವಾಚನ ಕಾರ್ಯಕ್ರಮ ಗಳಿಂದ ಪರಸ್ಪರ ರಾಷ್ಟ್ರೀಯ ಭಾವೈಕ್ಯತೆ ಬೆಳೆಯುತ್ತದೆ, ಸಮಾಜಕ್ಕೆ ಉತ್ತಮ ಸಂದೇಶ ಇಂತಹ ಕಾರ್ಯಕ್ರಮದಿಂದ ಬರುತ್ತದೆ ಇಂಥ ಕಾರ್ಯಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ ಎಂದರು, ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಎಂ ಪಾಷಾ ಕಾಟನ್ ಅಂಜುಮನ್ ಕಮಿಟಿ ಅಧ್ಯಕ್ಷ ಆಸಿಫ್ ಕರ್ಕಿಹಳ್ಳಿ ಸಮಾಜಸೇವಕರಾದ ಮೈಸೂರಿನ ಎಂ ತಾಹಿರ ಅಲಿ ಜಾಫರ್ ಖಾನ್ ರಫೀ ಕೋತ್ವಾಲ್ ಶಫೀಕ್ ದಾಗ್ದಾರ್ ಮೊಹಮ್ಮದ್ ಜಿಲಾನ್ ಕೀ ಲ್ಲೇದಾರ್, ಚಾಂದ್ ಪಾಷಾ ಕೀ ಲ್ಲೇದಾರ್, ಸಾವಿತ್ರಿ ಮುಜುಮ್ದಾರ್, ಕಲಬುರ್ಗಿಯ ಜೇಬಾ ತಬಸ್ಸುಮ್, ಮಾನ್ವಿ ಪಾಷಾ, ಹುಸೇನ್ ಪೀರಾ ಮುಜಾವರ್ ,ಶಮಿಮುನ್ನಿಸ ಬೇಗಂ ಹುನಗುಂದ್, ಹಬೀಬ್ ಖಾನ್, ಸೈಯದ್ ಇಮಾಮ್ ಹುಸೇನ್ ಸಿಂದೋಗಿ ದಾವುದ ಹುನಗುಂದ್ ಸಿರಾಜ್ ಲಾಟಿ ರಿಯಾಜ್ ಅಹಮದ್ ಸಿದ್ದೀಕ್ ಹುಸೇನ್ ಕರ್ಕಿಹಳ್ಳಿ ಅಬ್ದುಲ್ ಅಜೀಜ್ ಮಾನ್ವಿ ಕರ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ನಂತರ ಜರುಗಿದ ರಾಷ್ಟ್ರೀಯ ಮಟ್ಟದ ಕವಿ ಸಮ್ಮೇಳನ ಹಾಗೂ ಉರ್ದು ಮುಷಾಯರಾ ಕಾರ್ಯಕ್ರಮದಲ್ಲಿ ಉರ್ದು ಮತ್ತು ಹಿಂದಿ ರಾಷ್ಟ್ರ ಮಟ್ಟದ ಕವಿಗಳಾದ ಶಕೀಲ್ ಆಜ್ಮಿ ಮುಂಬೈ, ನದೀಮ್ ಶಾದ್ ದೇವಬಂಧ ,ಸುರೇಂದರ್ ಸಿಂಗ್ ಶಜರ್, ಅಬರಾರ ಕಾಶಿಫ್ ಅಮರಾವತಿ, ಅನಾ ದೆಹಲ್ವಿ ದೆಹಲಿ, ಹಾಮಿದ ಭೂಸಾವಲ್ಲಿ, ಚಾಚಾ ಪಾಲಠುರಿ ತೆಲಂಗಾಣ, ಚಾಂದನಿ ಪಾಂಡೆ ಕಾನ್ಪುರ್, ಸಿರಾಜ್ ಸೋಲಾಪುರಿ ಮುಂಬೈ, ಸುಹಾನಾ ನಾಜ್ ಮುಂಬೈ, ವೀನೀತ್ ಶಂಕರ್ ಪುಣೆ, ರಾಧಿಕಾ ಮಿತ್ತಲ್ ದೆಹಲಿ, ಮಡ್ಡಿ ಕ್ರಸ್ಟಿ ಪುಣೆ, ಹಾಗೂ ರಾಯಚೂರಿನ ಡಾ, ಇಫ್ತೆ ಕಾರ್ ಶಕೀಲ್, ಮತ್ತು ಸ್ಥಳೀಯ ಕೊಪ್ಪಳದ ಹಿರಿಯ ಸಾಹಿತಿ ಮತ್ತು ಕವಿಗಳಾದ ಅನ್ವರ್ ಹುಸೇನ್,   ಹಾಗೂ ವಿಜಾರತ್ ಅಲಿ ತಾಯರ್ ರವರು ತಮ್ಮ ಕವನ ವಾಚನ ಮಾಡಿ ಜನಮನ ರಂಜಿಸಿದರು. 

 ಇದರಲ್ಲಿ ಇಬ್ಬರು ಹಾಸ್ಯ ಕವಿಗಳು ಸಹ  ಭಾರಿ ಪ್ರಮಾಣದ ಹಾಸ್ಯಮಯ ಕವನ ವಾಚನ ಮಾಡಿ ಜನರನ್ನು ರಂಜಿಸಿದರು, ಹಿರಿಯ ಕವಿ ಸುರೇಂದರ್ ಸಿಂಗ್ ಶಜರ್ ರವರು ಕವಿ ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಇದರ ನಿರೂಪಣೆಯನ್ನು ಕೊಪ್ಪಳದ ಉರ್ದು ಸಾಹಿತಿ  ವಾಗ್ಮಿ ಮೊಹಮ್ಮದ್ ಬದಿಯುದ್ದೀನ್ ಅಹಮದ್ ನವೀದ ಉತ್ತಮ ರೀತಿಯಲ್ಲಿ ನೆರವೇರಿಸಿದರು, ಸಂಸ್ಥೆಯ ಅಧ್ಯಕ್ಷ ರಫೀಕ್ ಅಹ್ಮದ್ ಉಪಸ್ಥಿತರಿದ್ದುಇದೆ ವೇಳೆ ಕಾರ್ಯಕ್ರಮ ಸಂಘಟಕ ಮೊಹಮ್ಮದ್ ಬದಿಯುದ್ದಿನ್ ಅಹಮದ್ ನವೀದ ರವರ ಉತ್ತಮ ಪರಿಶ್ರಮ ಮತ್ತು ಕಾರ್ಯಕ್ಕೆ ಹಲವರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿ ಅವರನ್ನು ಸನ್ಮಾನಿಸಿ ಅಭಿನಂದಿಸಿದರು, ಇದೆ ವೇಳೆ ಇತ್ತೀಚಿಗಷ್ಟೇ ಡಾಕ್ಟರೇಟ್ ಪದವಿ ಪಡೆದ ಕೊಪ್ಪಳದ ಸೈಯದ್ ಫೌಂಡೇಶನ್ ನ ಅಧ್ಯಕ್ಷ ಡಾ, ಕೆಎಂ ಸೈಯದ್ ರವರಿಗೆ ಸನ್ಮಾನಿಸಲಾಯಿತು ಅಲ್ಲದೆ ಇತರ ಅತಿಥಿಗಳಿಗೆ ಮತ್ತು ರಾಷ್ಟ್ರೀಯ ಮತ್ತು ಸ್ಥಳೀಯ ಕವಿಗಳಿಗೆ ಹಾಗೂ ಸಂಘಟಕರಿಗೆ ಸನ್ಮಾನಿಸಲಾಯಿತು, ಬೆಳಗಿನ ಜಾವ ನಾಲ್ಕು ಮೂವತ್ತು ಗಂಟೆವರೆಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು,