ಮಹಿಳೆಯರ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ಕೊಡುಗೆ ಅಪಾರ

ಮಹಿಳೆಯರ ಸಬಲೀಕರಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ಕೊಡುಗೆ ಅಪಾರ The contribution of Shree Kshetra Dharmasthala Sangha to women's empowerment is immense

ಬ್ಯಾಡಗಿ 02 : ರಾಜ್ಯದ ಎಲ್ಲಾ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗಡೆ ಹಾಗೂ ಅವರ ಕೊಡುಗೆ ಅಪಾರವಾಗಿದೆ ಎಂದು ಮುಖ್ಯೋಪಾಧ್ಯಾಯ ಸಿ ಎಸ್ ಹೊಸಗೌಡ್ರ ಹೇಳಿದರು.ಬ್ಯಾಡಗಿ ತಾಲೂಕಿನ ಕದರಮಂಡಲಗಿ ವಲಯದ ಹೊಸಹಳ್ಳಿ ಕಾರ್ಯಕ್ಷೇತ್ರದ ಪೌರ್ಣಮಿ ಜ್ಞಾನ ವಿಕಾಸ ಕೇಂದ್ರದಲ್ಲಿ ಹಾಗೂ. ಪ್ರಮೀಳಾ ಕೌಶಲ್ಯ ಅಭಿವೃದ್ಧಿ ತರಬೇತಿ ಸಂಸ್ಥೆ ಧಾರವಾಡ್ ಇವರ ಸಹಯೋಗದೊಂದಿಗೆ ನಡೆದ ಸ್ವಉದ್ಯೋಗ ಪ್ರೇರಣ ಶಿಬಿರದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದವರು.

ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢವಾಗಿ ಮಾಡುವ ಕೆಲಸವನ್ನು ಸಂಸ್ಥೆ ಮಾಡಿಕೊಂಡು ಬರುತ್ತಿದೆ ಮಹಿಳೆಯರು ಕೇವಲ ಮನೆಗಳಲ್ಲಿ ಅಡುಗೆಗೆ ಸಿಮಿತ ಆಗದೆ ಸಂಸ್ಥೆಯು ನಡೆಸುವ ಸ್ವ ಉದ್ಯೋಗ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಯೋಜನೆಯ ಲಾಭಗಳನ್ನು ಪಡೆದುಕೊಂಡು ಮುಂದೆ ಬರಬೇಕು ಎಂದು ಹೇಳಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಮಲ್ಲಮ್ಮ ಅರಹುಣಸಿ ಮಾತನಾಡಿ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳುವುದಕ್ಕೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯಗಳನ್ನು ನೀಡುತ್ತಿದೆ.

ಮತ್ತು ಸ್ವಯಂ ಉದ್ಯೋಗ ಮಾಡುವುದಕ್ಕೆ ಹೈನುಗಾರಿಕೆ ಮಾಡಲು ಕೃಷಿ ಸಂಬಂಧಿಸಿ ದಂತೆ ಇನ್ನೂ ಹತ್ತು ಹಲವಾರು ಯೋಜನೆಗಳ ನೀಡುತ್ತಾ ಬಂದಿದೆ ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಆರೋಗ್ಯ ವಿದ್ಯಾಭ್ಯಾಸ ಬಹುಮುಖ್ಯ  ಪಾತ್ರ ವಹಿಸುತ್ತದೆ ಬದುಕಿನಲ್ಲಿ ಯುವ ಪೀಳಿಗೆ ಮೊಬೈಲ್ ಗಿಳಿನಿಂದ ಹೊರಬರಬೇಕು ಮಹಿಳೆಯರ ಕೌಟಂಬಿಕ ಹಿಂಸೆಯಿಂದ ಹೊರ ಉಳಿದು ಬದುಕು ಕಟ್ಟಿಕೊಳ್ಳುವುದು ಇಂತಹ ಸ್ವಯಂ ಉದ್ಯೋಗ ತರಬೇತಿ ಶಿಬಿರಗಳು ಮಹಿಳೆಯರಿಗೆ ಸಬಲೀಕರಣ ಹೊಂದಲು ಅನುಕೂಲವಾಗುತ್ತದೆ ಎಂದು ಹೇಳಿದರು.