ದಾಂಡೇಲಿ: ಶತಮಾನೋತ್ಸವ ಸಂಭ್ರಮ ಮರೆಯಾಗಲಿದೆಯೇ ದಾಂಡೇಲಿಯ ಸ್ವಾಮಿಲ್

ಲೋಕದರ್ಶನ ವರದಿ

ದಾಂಡೇಲಿ 02 : ದಟ್ಟಾರಣ್ಯದ ಮಧ್ಯೆ ಆಧುನಿಕವಾಗಿ ತಲೆ ಎತ್ತಿದ ಔದ್ಯೋಗಿಕ ನಗರಿ ದಾಂಡೇಲಿ ನಿರುದ್ಯೋಗದ ತಾಣವಾಗುತ್ತಿದೆ. ಮುಂಚೆ ಇದ್ದ ಕೈಗಾರಿಕೆಗಳಿಂದ ದುಡಿಯುವ ಕೈಗಳಿಗೆ ಸಾಕಷ್ಟು ಕೆಲಸ ಸಿಕ್ಕುತಿತ್ತು. ಅದರಿಂದ ಬರುವ ಸಂಬಳದಲ್ಲಿ ಗಂಜಿ ಕುಡಿದಾದರೂ ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ವೈಭವಯುತವಾದ ವಾತಾವರಣ ದಾಂಡೇಲಿಯಲ್ಲಿ ನಿಮರ್ಾಣವಾಗಿದ್ದನ್ನು ಕಂಡ ಎಷ್ಟೋ ಹಳೆಯ ಜೀವಗಳು ಇನ್ನೂ ಬದುಕಿವೆ. ಕಾಮರ್ಿಕ ದಿನಾಚರಣೆಯ ಸಂದರ್ಭದಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ದಾಂಡೇಲಿಯ ಸ್ವಾಮಿಲ್ಲಿನ ಇತಿಹಾಸವನ್ನು ಮೆಲುಕು ಹಾಕುವುದು ಅನಿವಾರ್ಯವಾಗಿದೆ. 

ಸ್ವಾ ಮಿಲ್ನ ಚರಿತ್ರೆ :  

ಬ್ರಿಟಿಷರ ಕಾಲದಲ್ಲಿ ಅಪರಾಧಿಗಳಿಗೆ ಘೋರ ಶಿಕ್ಷೆ ನೀಡುವ ಸಲುವಾಗಿ 1919 ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಡಿದಾದ ನಿತ್ಯ ಹರಿದ್ವರ್ಣ ಕಾಡಿನ ನಡುವೆ ಸದಾ ಹರಿಯುವ ಕಾಳಿ ನದಿ ದಂಡೆಯ ಮೇಲೆ ಹಳೆ ದಾಂಡೇಲಿಯಲ್ಲಿ ಸ್ವಾಮಿಲ್ನ್ನು ಆರಂಭಿಸಲಾಗುತ್ತದೆ. "ಕಾಳಾ ಪಾನಿ ಸಜಾ" ಎಂದು ಕರೆಯಲಾಗುವ ಪನಿಶ್ಮೆಂಟ್ ನೀಡುತ್ತಿದ್ದ ದೇಶದ ಎರಡೆ ಕೇಂದ್ರಗಳ ಪೈಕಿ ದಾಂಡೇಲಿ ಒಂದಾಗಿತ್ತು. ಬ್ರಿಟಿಷರ ನೀತಿಗಳ ವಿರುದ್ಧ ನಡೆದುಕೊಂಡವರನ್ನು ಇಲ್ಲಿಗೆ ತಂದು ಕಟ್ಟಿಗೆ ಕಡೆಯುವ, ಕೊರೆಯುವ, ಸಾಗಿಸುವ ಕೆಲಸಗಳಿಗೆ ಒತ್ತಾಯಪೂರ್ವಕವಾಗಿ ಹಚ್ಚುತ್ತಿದ್ದರು. 

ಕೆ.ಎಸ್.ಎಫ್.ಐ.ಸಿ. ಅಂಡರ್ : 

1956ರ ಕಂಪನಿಗಳ ಕಾಯ್ದೆಯಡಿಯಲ್ಲಿ 1973ರ ಮಾರ್ಚ ತಿಂಗಳಲ್ಲಿ ನೊಂದಾಯಿತವಾಗಿ ಸ್ಥಾಪಿಸಲ್ಪಟ್ಟ ಕನರ್ಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಡಿಯಲ್ಲಿ ದಾಂಡೇಲಿ ಸ್ವಾ ಮಿಲ್ ಸೇರಿದಂತೆ ಅರಣ್ಯೋತ್ಪಾದನೆ ಮತ್ತು ಸರಬರಾಜಿನ ರಾಜ್ಯದ ಎಲ್ಲ ಕೈಗಾರಿಕೆಗಳನ್ನು ಈ ನಿಗಮದ ನಿಯಂತ್ರಣದಲ್ಲಿಯೇ ನಡೆಸಲಾಗುತ್ತಿದೆ. ಕನರ್ಾಟಕ ಸರಕಾರಿ ಸ್ವಾಮ್ಯದ ಉದ್ಯಮವಿದಾಗಿದ್ದು ಕನರ್ಾಟಕ ಅರಣ್ಯ ಇಲಾಖೆಯ ಸೋದರ ಸಂಸ್ಥೆಯಾಗಿದೆ.

ಅರಣ್ಯ ಉತ್ಪನ್ನಗಳನ್ನು ಮಿತವ್ಯಯವಾದ ವೈಜ್ಞಾನಿಕ ವಿಧಾನಗಳ ಮೂಲಕ ಕಟಾವು ಮಾಡಿ ವಿವಿಧ ಕೈಗಾರಿಕೆಗಳಿಗೆ ಸರಬರಾಜು ಮಾಡುವುದು, ಮರ ಸಂಸ್ಕರಣೆ ಪಿಠೋಪಕರಣ ತಯಾರಿಕೆ ಹಾಗೂ ಕಟ್ಟಡ ನಿಮರ್ಾಣಕ್ಕೆ ಬೇಕಾಗುವ ಮರಾಧಾರಿತ ವಸ್ತುಗಳ ತಯಾರಿಕೆ ಮಾಡುವ ಮೂಲಕ ಪರಸ್ಪರ ಉದ್ಯೋಗ ಸಂಭಾವ್ಯತೆಯನ್ನುಂಟು ಮಾಡುವುದು ಕ.ರಾ.ಅ.ಕೈ.ನಿ.ನಿಯಮಿತದ ಪ್ರಮುಖ ಉದ್ದೇಶವಾಗಿದೆ. 

ದಾಂಡೇಲಿಯ ಸ್ವಾ ಮಿಲ್ನ್ನು ಸರಕಾರಿ ಸ್ವಾಮ್ಯದ ಸಂಸ್ಥೆಗೆ ವಹಿಸಿದ ಮೇಲೆ ಉತ್ತಮವಾದ ಬೆಳವಣಿಗೆಗಳು ನಡೆದವು. ಕಟ್ಟಿಗೆ ಕೊರೆಯವಂತಹ ಕಾಡಿಗೆ ಸಂಬಂದಿಸಿದ ಉದ್ಯಮ ದಾಂಡೇಲಿಯಲ್ಲಿದ್ದುದು ಪೂರಕವಾಗಿ ಅಪಾರ ಪ್ರಮಾಣದ ಬೇಡಿಕೆ ಉಂಟಾಯಿತು. ಅಷ್ಟೆ ಅಲ್ಲದೇ ಮೊದಲಿನಿಂದಲೂ ದಾಂಡೇಲಿ ಟೀಕ್ ಉಡ್ಗೆ ದೇಶ ವಿದೇಶಗಳಲ್ಲಿ ಬೇಡಿಕೆ ಇದ್ದೇ ಇತ್ತು. ಹೀಗಾಗಿ ಸುಮಾರು 350ಕ್ಕೂ ಹೆಚ್ಚು ಖಾಯಂ ನೌಕರರು ಸೇರಿದಂತೆ ಸಾವಿರಕ್ಕೆ ಸಮೀಪದಷ್ಟು ಜನ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. 

ಇಲ್ಲಿ ದುಡಿಯುವ ಕಾಮರ್ಿಕರಿಗಾಗಿಯೇ ಕ್ವಾಟರ್ಸಗಳನ್ನು ಕಟ್ಟಿ ಕೊಡಲಾಗಿತ್ತು. ಸತತ ನೀರಿನ ಪೂರೈಕೆ, ವಿದ್ಯುತ್ ಸಂಪರ್ಕವಿತ್ತು. ಹಾಗಾಗಿ ಅಂದು ಜನತೆ ಸುಖಕರ ಜೀವನದ ಸೌಲಭ್ಯವನ್ನು ಪಡೆದಿದ್ದರು. 

ನಂತರದ ದಿನಗಳಲ್ಲಿ ರಾಜ್ಯಾದ್ಯಂತ ಹೆಚ್ಚಿದ ಸ್ವಾಮಿಲ್ಗಳು, ಖಾಯಂ ನೌಕರನ ರಿಟೈರ್ಡ ನಂತರ ಹೊಸಬರ ನೇಮಕವಾಗದಿರುವುದು, ಲಾಭ ಕಡಿಮೆಯಾಗುತ್ತಾ ಸಾಗಿದಂತೆ ಅಧಿಕಾರಿಗಳು ಮತ್ತು ರಾಜಕಾರಣಿಗಳ ಉದ್ದೇಶ ಪೂರಿತ ನಿರ್ಲಕ್ಷ್ಯಗಳಿಂದಾಗಿ ಬರಬರುತ್ತಾ ಕಾಮರ್ಿಕರ ಸಂಖ್ಯೆ ಕ್ಷೀಣಿಸಲಾರಂಭಿಸಿತು. ಬಂಡವಾಳದ ಕೊರತೆ ನೀಡಿ ರೋಗಗ್ರಸ್ತ ಕಾಖರ್ಾನೆಗಳ ಸಾಲಿಗೆ ಸೇರಿಸುವ ನಿಧರ್ಾರವನ್ನು ನಿಗಮ ಕೈಗೊಂಡಿದೆ. ಉದ್ಯಮಿಗಳು ಇಲ್ಲಿಂದ ಉತ್ತಮವಾದ ಮರದ ನಾಟಾಗಳನ್ನು ಸಮೀಪದ ಅಳ್ನಾವರ, ಖಾನಾಪುರ ಮುಂತಾದೆಡೆ ಒಯ್ದು ಕಟಾವು ಮಾಡಲು ಅಧಿಕಾರಿಗಳೇ ಸಹಕರಿಸುತ್ತಿದ್ದಾರೆ. 

ಕಾಲ ಕ್ರಮೇಣ ಸಿಬ್ಬಂದಿ ಕಡಿಮೆಯಾಗುತ್ತಾ ಇಂದು ಇರುವ ಕೇವಲ ಐದು ಸಿಬ್ಬಂದಿಗಳ ಪೈಕಿ ಒಬ್ಬರು ನಿವೃತ್ತರು ಹೆಚ್ಚುವರಿಯಾಗಿ ದುಡಿಯುತ್ತಿದ್ದಾರೆ. ಇಬ್ಬರು ನಿವೃತ್ತಿಗೆ ಸಮೀಪ ಬಂದ ಖಾಯಂ ನೌಕರರು ಮತ್ತಿಬ್ಬರೂ ದಿನಗೂಲಿ ಕಾಮರ್ಿಕರಿದ್ದಾರೆ! ಯಂತ್ರೋಪಕರಣಗಳೆಲ್ಲವೂ ಸರಿಯಾಗಿಯೇ ಇವೆ. ಆದರೆ ಅವುಗಳನ್ನು ಚಾಲನೆಗೊಳಪಡಿಸಬೇಕಾದ ಸಿಬ್ಬಂದಿಗಳೇ ಇಲ್ಲದೇ ಅವುಗಳು ತುಕ್ಕು ಹಿಡಿಯುತ್ತಿವೆ.

ಬೇಡವಾದ ಕೆಲಸಗಳಿಗೆ ಕೋಟಿಗಟ್ಟಲೆ ಹಣ ಖಚರ್ು ಮಾಡುವ ಸರಕಾರ ಸಂಪೂರ್ಣ ಸ್ಥಗಿತಕ್ಕೆ ಕ್ಷಣಗಣನೆ ಆರಂಭವಾಗಿರುವ ದಾಂಡೇಲಿ ನಗರ ನಿಮರ್ಾಣದ ಮೂಲ ಆಥರ್ಿಕ ಆಕರವಾಗಿದ್ದ ಸ್ವಾ ಮಿಲ್ಲಿನ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಬೇಕು. ಹೊಸದಾಗಿ ಕೌಶಲ್ಯ ಹೊಂದಿದ ನೌಕರರನ್ನು ನೇಮಿಸಿಕೊಂಡು ಉದ್ಯೋಗ ಸೃಷ್ಟಿಸಬೇಕು. ಆ ಮೂಲಕ ಇತಿಹಾಸ ಸೇರುವ ಸಾಲಿನಲ್ಲಿರುವ ಸ್ವಾಮಿಲ್ಲಿಗೆ ಮರುಜೀವ ನೀಡಿ ದಾಂಡೇಲಿ ನಗರದ ಅಭಿವೃದ್ಧಿಗೆ ಕಾರಣವಾಗಬೇಕು ಎಂದು ಸರಕಾರಕ್ಕೆ ಸಾರ್ವಜನಿಕರೆಲ್ಲರು ಶತಮಾನೋತ್ಸವ ಸಂದರ್ಭದಲ್ಲಿ ಕಾಮರ್ಿಕ ದಿನಾಚರಣೆಯ ದಿನದಂದು ಆಗ್ರಹಿಸಿದ್ದಾರೆ.