ಮೂಲ ಉದ್ದೇಶವನ್ನು ಸಂಘ ಉಳಿಸಿಕೊಂಡು ಬಂದಿರುವುದೇ ದೊಡ್ಡ ಸಾಧನೆ : ಅನುರಾಧಾ ಸವದತ್ತಿ
The biggest achievement of the Sangh is that it has maintained its original purpose: Anuradha Savad
ದಾರವಾಢ 18 : ಕರ್ನಾಟಕ ವಿದ್ಯಾವರ್ಧಕ ಸಂಘವನ್ನುಕಟ್ಟಿ ಬೆಳೆಸಿದ ನಮ್ಮ ಹಿರಿಯರತ್ಯಾಗ ಸೇವೆ ಅವಿಸ್ಮರಣೀಯವಾದದು.ತನ್ನ ಮೂಲ ಉದ್ದೇಶವನ್ನು ಸಂಘ ಉಳಿಸಿಕೊಂಡು ಬಂದಿರುವುದೇ ದೊಡ್ಡ ಸಾಧನೆ ಎಂದು ಅನುರಾಧಾ ಸವದತ್ತಿ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ನಿಮಿತ್ತ ದಿನಾಂಕ 16-11-2025 ರಂದು ಆಯೋಜಿಸಿದ್ದ ಸಾಧಕರ ಸನ್ಮಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕವಿವ ಸಂಘವು ಎಲ್ಲಾ ಪ್ರಕಾರದ ವಿದ್ಯೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಿರಂತರವಾಗಿಆಯೋಜಿಸುತ್ತಾ ಬಂದಿದೆ. ಮೊದಲು ಕವಿವ ಸಂಘವು ನಿವೃತ್ತರಿಗಾಗಿ ಎಂಬ ಭಾವನೆ ಇತ್ತು.ಇಂದು ಮಕ್ಕಳಿಂದ ಹಿಡಿದು ಎಲ್ಲಾ ಯುವ ಕಲಾವಿದರಿಗೆ ತಮ್ಮ ಕಲಾ ಪ್ರದರ್ಶನಕ್ಕೆ ಅನುಕೂಲಿಸಿದೆ.
ಇಂದು ಜಾಗತಿಕ ಮಟ್ಟದಲ್ಲಿ ಸಾಕಷ್ಟು ಬದಲಾವಣೆ ಕಾಣುತ್ತಿದ್ದೇವೆ. ಇದಕ್ಕೆ ಭಾರತವು ಹೊರತಾಗಿಲ್ಲ. ಭಾರತದಲ್ಲಿ ಪತ್ರಿಕಾಕ್ಷೇತ್ರ, ರಾಜಕೀಯ ಕ್ಷೇತ್ರದಲ್ಲಿ ಬದಲಾವಣೆಯಾದರೆ, ಸೋವಿಯತಒಕ್ಕೂಟದಂತಹ ದೇಶದಲ್ಲಿ ಸೋವಿಯತ್‌ದೇಶ ವಿಭಜನೆಯಾಗಿ 11 ಸ್ವತಂತ್ರ ರಾಜ್ಯಗಳಾಗಿ ಉದಯವಾಗಿವೆ. ಜರ್ಮನಿಯು ವಿಭಜನೆಯಾಗಿದೆ. ಇಂತಹ ಬದಲಾವಣೆಗಳಾದರೂ ಕವಿವ ಸಂಘವು ತನ್ನ ವೈಭವ ಉಳಿಸಿಕೊಂಡು ಬಂದಿದೆ ಎಂದು ಹೇಳಿದರು.
ಇತ್ತೀಚೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಿತ್ರಕಲಾವಿರಾದ ಬಿ.ಮಾರುತಿ ಅವರು ಸಾಧಕರ ಸನ್ಮಾನ ಸ್ವೀಕರಿಸಿ ಮಾತನಾಡಿ, ಕವಿವಿ ಸಂಘ ಚಿತ್ರಕಲಾವಿದರ ಪ್ರದರ್ಶನಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿದೆ.ಕವಿವ ಸಂಘಕ್ಕೆ ನಾನು ಅಭಿನಂದಿಸುತ್ತಿದ್ದೇನೆ. ಈ ಸನ್ಮಾನವನ್ನು ನಾನು ಪ್ರೀತಿಯಿಂದ ಸ್ವೀಕರಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ರಾಜೀವ ಪುಟ್ಟಣ್ಣವರ, ಬಾಬು ಈಳಿಗೇರ, ಅಂಜಲಿ ಮೆಹಂದಳೆ, ಶಂಕರ ಕುಂಬಿ, ಲಲಿತಾ ಚಾಕಲಬ್ಬಿ ವೇದಿಕೆ ಮೇಲೆ ಇದ್ದರು. ಪ್ರಾರಂಭದಲ್ಲಿ ಮಕ್ಕಳ ಸಂಸ್ಕೃತಿಕ ಕಲಾ ತಂಡ, ಸಂಶಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.ಸಮುದಾಯ ಜಾನಪದ ಕಲಾತಂಡದವರಿಂದ ಸೊಗಸಾದ ಜಾನಪದ ಹಾಡುಗಳು ಪ್ರಸ್ತುತವಾದವು.ಅಂಜಲಿ ಮೆಹಂದಳೆ ಅವರ ಸಂಗೀತಕಾರ್ಯಕ್ರಮಕ್ಕೆ ಹೇಮಂತ್ ಲಮಾಣಿ ಹಾರ್ಮೋನಿಯಂ ಸಾಥ್ ಹಾಗೂ ಡಾ.ಅನೀಲ ಮೇತ್ರಿತಬಲಾ ಸಾಥ್ ನೀಡಿದರು.
ಶಿವಾನಂದ ಬಾವಿಕಟ್ಟಿ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಸತೀಶತುರಮರಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ದೇಸಾಯಿಗೌಡ ಪಾಟೀಲ, ಸಿ.ಎಸ್. ಪಾಟೀಲಕುಲಕರ್ಣಿ, ಅಜಿತದೇಸಾಯಿ, ಪ್ರೊ. ಸಾಣಿಕೊಪ್ಪ ಸೇರಿದಂತೆ ಮುಂತಾದವರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 