ಸಂಕ್ರಾಂತಿ ಸಂಭ್ರಮಕ್ಕೆ ಕಳೆ ತಂದ ವಾದ್ಯ ವೃಂದ ದೇಶಿ ಉಡುಗೆ, ತೊಡುಗೆ, ಬಗೆ ಬಗೆಯ ಆಹಾರ ಪದಾರ್ಥಗಳು
The band brought the spirit of Sankranti celebrations with traditional attire, costumes, and variou
ವರದಿ: ಹನಮಂತ ನಾವಿ
ಮಹಾಲಿಂಗಪುರ 16: ಸಮೀಪದ ರನ್ನ ಬೆಳಗಲಿ ಪಟ್ಟಣದಲ್ಲಿ ಜನವರಿ 15 ರಂದು ಗುರುವಾರ ಏಳನೇ ವರ್ಷದ ಸಂಕ್ರಾಂತಿ ಸಂಭ್ರಮ ಬಹಳ ಅದ್ದೂರಿಯಾಗಿ ನಡೆಯಿತು. ಮುಂಜಾನೆ 11 ಗಂಟೆಗೆ ಬಿವಿವಿ ಸಂಘದ ಎಸ್. ಜಿ. ಎಂ. ಕಾಲೇಜಿನ ಆವರಣದಿಂದ ಚಕ್ಕಡಿಯಲ್ಲಿ ವಿರಾಜಮಾನ ಶ್ರೀಗುರು ಮಹಾಲಿಂಗೇಶ್ವರ ಭಾವ ಚಿತ್ರದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಿಂದ ರಾಣಿ ಚೆನ್ನಮ್ಮಾಜಿ, ಅಂಬಿಗರ ಚೌಡಯ್ಯ, ಭಗೀರಥ ವೃತ್ತಗಳಿಂದ ಸಾಗಿ ಕಂಬಾರ ಗಲ್ಲಿ, ಸಾಂಗ್ಲಿಕರ ಗಲ್ಲಿ,, ರನ್ನ ವೃತ್ತ ಮೂಲಕ ಬಂದಲಕ್ಷ್ಮಿ, ಸಾಂಸ್ಕೃತಿಕ ಭವನಕ್ಕೆ ಆಗಮಿಸಿತು.
ಮೆರಗು ಹೆಚ್ಚಿಸಿದ ವಾದ್ಯಗಳು :ಝಾಂಜ್ ಪಥಕ, ಲೇಜೀಮ್, ಡೊಳ್ಳು, ಹಲಗೆ, ಕೋಲಾಟ, ಹೆಜ್ಜೆಯ ಕುಣಿತ ಮತ್ತು ಇತರ ಮಂಗಳವಾದ್ಯಗಳು ಮೆರವಣಿಗೆಗೆ ಮೆರುಗು ನೀಡಿದರೆ, ಬೃಹತ್ ಆಕಾರದ ಮಾನವ ಗೊಂಬೆಗಳು ಮಕ್ಕಳಾದಿಯಾಗಿ ಎಲ್ಲರ ಮುಖದ ಮೇಲೆ ನಗು ಉಕ್ಕುವಂತೆ ಮಾಡಿದವು.
ಗ್ರಾಮೀಣ ವಾತಾವರಣ ಸೃಷ್ಟಿ: ಈ ಮೆರವಣಿಗೆಯಲ್ಲಿ ಎಲ್ಲ ವಿಧ್ಯಾರ್ಥಿಗಳ ಉಡುಗೆ ತೊಡುಗೆಗಳು, ಚಿನ್ನದ ಒಡವೆಗಳು, ಮುಡಿಗೆ ಮಲ್ಲಿಗೆ ನಮ್ಮ ಪೂರ್ವಿಕರ ನೆನಪು ಸ್ಮರಣ ಪಟಲದ ಮೇಲೆ ಹಾಯ್ದು ಹೋಗುವಂತೆ ಮಾಡಿ,ಅವರು ತೊಟ್ಟ ಪೇಟಾ, ಕಡ್ಡಿ,ತೆನೆ ತಿರುವಿದ, ನವಿಲು ದಡಿ ಇತ್ಯಾದಿ ಬಣ್ಣ ಬಣ್ಣದ ಮಾಟದ ಸೀರೆಗಳು ಸ್ಥಳೀಯ ನೇಕಾರರ ನೆನಪನ್ನು ಮತ್ತೆ ಮರು ಕಳಿಸಿದಂತೆ ಭಾಸವಾಯಿತು.ಈ ಸಮಯ ಊರಿನ ಜನ ಪೇಟ ಧರಿಸಿ ಮೆರವಣಿಗೆ ಉದ್ದಕ್ಕೂ ಹೆಜ್ಜೆ ಹಾಕಿ ಗ್ರಾಮೀಣ ವಾತಾವರಣ ಸೃಷ್ಟಿ ಮಾಡಿದರು.
ಬಗೆ ಬಗೆಯ ಆಹಾರ: ರನ್ನ ಬೆಳಗಲಿ ಪಟ್ಟಣದ ಎಲ್ಲ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಗಳಿಂದ ಸುಚಿ ರುಚಿಕರವಾದ ದೇಶಿ ಆಹಾರ ಪದಾರ್ಥಗಳನ್ನು ಸಾಲಾಗಿ ಇಟ್ಟು ಬೆಳಗಲಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಜನತೆಗೆ ಬಡಿಸಿ ಶಹಬ್ಬಾಸ್ ಗಿರಿ ಪಡೆದರು.ಇದರಲ್ಲಿ ರೊಟ್ಟಿ, ಚಪಾತಿ ಜೊತೆ ಸಾಕಷ್ಟು ಹಸಿ ಮತ್ತು ಖಾರ ಪಲ್ಯಗಳು, ವಿವಿಧ ಚಟ್ನಿಗಳು, ನಾನಾ ತರಹದ ಸೇಂಗಾ ಮತ್ತು ಹೂರನದ ಹೋಳಿಗೆಗಳು, ಬೆಣ್ಣೆ, ತುಪ್ಪ ಸಿರಾ, ಬುಂದೆ, ಅನ್ನ, ಸಾರು ಇತ್ಯಾದಿ ಸುಮಾರು 150 ಬಗೆ ಬಗೆಯ ಆಹಾರ ಪದಾರ್ಥಗಳು ನೋಡಗರ ಹಸಿವನ್ನು ಇಮ್ಮಡಿಗೊಳಿಸಿ ಬಾಯಿ ಚಪ್ಪರಿಸುವಂತೆ ಮಾಡಿದವು.
ರೊಟ್ಟಿ ಸ್ಪರ್ಧೆ : ಇಂದಿನ ಮಕ್ಕಳು ದೇಶಿ ಆಹಾರ ತಯಾರಿಸುವಲ್ಲಿ ಒಲವು ತೋರಿಸಲು ಸ್ಪರ್ಧೆ ಏರಿ್ಡಸಲಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಲಕ್ಷ್ಮೀ ತೇರದಾಳ, ಸೃಷ್ಠಿ ಪಾಟೀಲ, ದ್ವಿತೀಯ ಸ್ಥಾನ ಅಕ್ಷತಾ ಕುಂಬಾರ, ವಿದ್ಯಾ ದೊಡ್ಡಮನಿ, ಐಶ್ವರ್ಯ ಕ್ವಾನ್ಯಾಗೋಳ, ಸರಸ್ವತಿ ಹಿರೇಕುಡಿ, ತೃತೀಯ ಸೃಷ್ಟಿ ಚಾಂಬರ, ಕಾವೇರಿ ದಡ್ಡಿನವರ ಇವರು ನಗದು, ಮೆಡಲ್ ಮತ್ತು ಸರ್ಟಿಫಿಕೇಟ್ ಗಳನ್ನು ಪಡೆದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 