ಹಣ ಮರುಪಾವತಿಗೆ ಗಡುವು ನೀಡಿದ ಕೇಂದ್ರ ವಿಮಾನಯಾನ ಸಚಿವಾಲಯ

ಹಣ ಮರುಪಾವತಿಗೆ ಗಡುವು ನೀಡಿದ ಕೇಂದ್ರ ವಿಮಾನಯಾನ ಸಚಿವಾಲಯ  The Union Ministry of Civil Aviation has given a deadline for refunds.


ನವದೆಹಲಿ: ಕಳೆದ ಐದು ದಿನಗಳಿಂದ ಇಂಡಿಗೋ ವಿಮಾನಗಳ ರದ್ದತಿ ಮತ್ತು ಕಾರ್ಯಾಚರಣೆಯ ಅಸ್ತವ್ಯಸ್ತತೆಯಿಂದ ಸಾವಿರಾರು ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾದ ಹಿನ್ನೆಲೆಯಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು (ಅತಟ ಂತಚಿಣಠ ಒಟಿಣಡಿಥಿ) ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ (ಋಜಉಠ) ಗೆ ಪ್ರಯಾಣಿಕರ ಟಿಕೆಟ್ ಹಣ ಹಾಗೂ ಲಗೇಜ್ ಗಳಿಗೆ ಸಂಬಂಧಿಸಿದಂತೆ ಸ್ಪಷ್ಟ ನಿರ್ದೇಶನಗಳನ್ನು ನೀಡಿದೆ.  

ರದ್ದಾದ ಎಲ್ಲಾ ವಿಮಾನಗಳ ಟಿಕೆಟ್ ಹಣವನ್ನು ಭಾನುವಾರ ರಾತ್ರಿ 8 ಗಂಟೆಯೊಳಗೆ ಸಂಪೂರ್ಣವಾಗಿ ಪ್ರಯಾಣಿಕರಿಗೆ ಮರುಪಾವತಿ ಮಾಡಬೇಕು. ಒಂದು ವೇಳೆ ಹಣ ಮರುಪಾವತಿ ಮಾಡದೆ ವಿಳಂಬಗೊಳಿಸಿದರೆ ಕ್ರಮ ತೆಗೆದುಕೊಳ್ಳುವುದಾಗಿ ಸಂಸ್ಥೆಗೆ ಎಚ್ಚರಿಕೆ ನೀಡಿದೆ.  

ಮರು ನಿಗದಿ ಶುಲ್ಕ ರದ್ದು: ವಿಮಾನ ರದ್ದತಿಯಿಂದ ಪ್ರಯಾಣ ಯೋಜನೆಗಳ ಮೇಲೆ ಪರಿಣಾಮ ಬೀರಿದ ಪ್ರಯಾಣಿಕರಿಗೆ, ವಿಮಾನಯಾನ ಸಂಸ್ಥೆಗಳು ಯಾವುದೇ ಮರು ನಿಗದಿ (ಡಿಛಿಜಜಣಟಟಿರ) ಶುಲ್ಕವನ್ನು ವಿಧಿಸಬಾರದು ಎಂದು ಸೂಚಿಸಿದೆ.   

ವಿಶೇಷ ಕೇಂದ್ರಗಳ ಸ್ಥಾಪನೆ: ಪ್ರಯಾಣಿಕರ ನೆರವು ಮತ್ತು ಮರುಪಾವತಿಯನ್ನು ಸುಗಮಗೊಳಿಸಲು ಕೇಂದ್ರಗಳನ್ನು ಸ್ಥಾಪಿಸುವಂತೆ ಸ್ಥಾಪಿಸಬೇಕು ಇದರ ಜೊತೆಗೆ ತಂಡಗಳು ಪ್ರಯಾಣಿಕರನ್ನು ತಾವೇ ಸಂಪರ್ಕಿಸಿ, ಮರುಪಾವತಿ ಅಥವಾ ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡಬೇಕು ಎಂದು ಹೇಳಿದೆ.  

48 ಗಂಟೆಯೊಳಗೆ ಲಗೇಜ್ ವಿತರಣೆ: ವಿಮಾನ ರದ್ದತಿ ಅಥವಾ ವಿಳಂಬದಿಂದ ಪ್ರಯಾಣಿಕರಿಂದ ಪ್ರತ್ಯೇಕವಾದ ಯಾವುದೇ ಲಗೇಜ್ ಅನ್ನು 48 ಗಂಟೆಗಳ ಒಳಗೆ ಪತ್ತೆ ಹಚ್ಚಿ ವಿತರಿಸಬೇಕು ಎಂದು ನಿರ್ದೇಶನ ನೀಡಿದೆ.  

ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ, ಶುಕ್ರವಾರ 1,000 ಕ್ಕೂ ಹೆಚ್ಚು ವಿಮಾನಗಳನ್ನು ಮತ್ತು ಶನಿವಾರ 400 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿತ್ತು. ಈ ನಡುವೆ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರು ಶುಕ್ರವಾರ ಮಾತನಾಡಿ, "ಮುಂದಿನ ಮೂರು ದಿನಗಳಲ್ಲಿ ಸೇವೆಗಳು ಸಂಪೂರ್ಣವಾಗಿ ಪುನಃಸ್ಥಾಪನೆಯಾಗುವ ನೀರೀಕ್ಷೆಯಿದೆ. ವಿವಿಧ ಕಾರ್ಯಾಚರಣೆಯ ಕ್ರಮಗಳನ್ನು ಪ್ರಾರಂಭಿಸುವುದರಿಂದ, ವಿಮಾನ ವೇಳಾಪಟ್ಟಿಗಳು ಶನಿವಾರದೊಳಗೆ ಸಾಮಾನ್ಯ ಸ್ಥಿತಿಗೆ ಮರಳುವ ನೀರೀಕ್ಷೆಯಿದೆ" ಎಂದು ಹೇಳಿದ್ದರು.  

ಟಿಕೆಟ್ ದರಕ್ಕೆ ಕೇಂದ್ರ ಸರ್ಕಾರದಿಂದ ಮಿತಿ  

ವಿಮಾನ ಪ್ರಯಾಣ ದರಕ್ಕೆ ಕೇಂದ್ರ ಸರ್ಕಾರ ಶನಿವಾರ ಮಿತಿ ಹೇರಿದೆ. ಇಂಡಿಗೊ ವಿಮಾನ ಸೇವೆ ವ್ಯತ್ಯಯದಿಂದ ಇತರ ವಿಮಾನ ಸಂಸ್ಥೆಗಳು ಟಿಕೆದ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.  

ದೇಶದ ಅತಿ ದೊಡ್ಡ ವಿಮಾನಯಾನ ಸಂಸ್ಥೆ ‘ಇಂಡಿಗೊ’ದ ಕಾರ್ಯಾಚರಣೆ ಸತತ ಐದು ದಿನಗಳಿಂದ ವ್ಯತ್ಯಯವಾಗಿದೆ. ಸಾವಿರಾರು ವಿಮಾನ ಸೇವೆ ರದ್ದುಗೊಂಡಿದೆ.  

ಹಲವು ಮಾರ್ಗಗಳಲ್ಲಿ ವಿಮಾನ ಸಂಖ್ಯೆ ಕಡಿಮೆ ಇದ್ದಿದ್ದರಿಂದ. ಇತರೆ ಸಂಸ್ಥೆಗಳು ಟಿಕೆಟ್ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದವು.  

ಇದನ್ನು ಗಂಭೀರವಾಗಿ ಪರಿಗಣಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ತನ್ನ ನಿಯಂತ್ರಕ ಅಧಿಕಾರಗಳನ್ನು ಬಳಸಿ ನ್ಯಾಯಯುತ ಮತ್ತು ಸಮಂಜಸವಾದ ದರ ವಿಧಿಸುವಂತೆ ನಿರ್ದೇಶಿಸಿದೆ.  

ಸದ್ಯದ ಪರಿಸ್ಥಿತಿ ತಿಳಿಗೊಳ್ಳುವವರೆಗೂ ಈ ನಿಯಂತ್ರಕ ಕ್ರಮ ಜಾರಿಯಲ್ಲಿರಲಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.  

ವಿಮಾನ ಟಿಕೆಟ್ ದರಕ್ಕೆ ಹೇರಿರುವ ಮಿತಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ.