ಶಿಕ್ಷಕರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಸಂಘ ಶ್ರಮಿಸಲಿ-ಪಟೇಲ್

ಶಿಕ್ಷಕರ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಸಂಘ ಶ್ರಮಿಸಲಿ-ಪಟೇಲ್   The Sangh should work hard to fulfill the demands of teachers - Patel

             ಕೊಪ್ಪಳ 28: ಶಿಕ್ಷಕರ ನ್ಯಾಯ ಸಮ್ಮತ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಎಲ್ಲಾ ಶಿಕ್ಷಕರು ಸಂಘಟಿತರಾಗಿ ಹೋರಾಡಲು ಹಾಗೂಶಿಕ್ಷಕರಿಗೆ ಆರ್ಥಿಕ ಸಮಸ್ಯೆಗಳು ಎದುರಾದಾಗ ಶಿಕ್ಷಕರ ಪತ್ತಿನ ಸಹಕಾರಿ ಸಂಘದ ಮೂಲಕ ಆರ್ಥಿಕ ನೆರವು ಸಾಲದ ಮೂಲಕ ನೀಡಿ ಶಿಕ್ಷಕರ ಅಗತ್ಯ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಹಾಗೂ ಪತ್ತಿನ ಸಹಕಾರಿ ಸಂಘ ಶ್ರಮಿಸಲಿ ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು,

            ಅವರು ನಗರದ ಸರ್ಕಾರಿ ನೌಕರರ ಸಾಂಸ್ಕೃತಿಕ ಭವನದ ಸಭಾಂಗಣದಲ್ಲಿ ಏರಿ​‍್ಡಸಿದ ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ  ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸಭೆ ಹಾಗೂ ಇತ್ತೀಚಿಗೆ ಸಂಘಕ್ಕೆ ನಾಮಕರಣಗೊಂಡ ಪದಾಧಿಕಾರಿಗಳಿಗೆ ಸನ್ಮಾನ ಮತ್ತು ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ಶಿಕ್ಷಕರು ಸಮಾಜದ ನಿರ್ಮಾಪಕರು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. 

              ಆದರೆ ಅವರಿಗೆ ಏನಾದರೂ ಸಮಸ್ಯೆ ಎದುರು ಬಂದಾಗ ಅದಕ್ಕೆ ನೇರ ಸ್ಪಂದನೆ ನೀಡಿ ಸಮಸ್ಯಗಳ ಇತ್ಯರ್ಥಕ್ಕಾಗಿ ಸಂಘಟನೆ ರಚನೆ ಮಾಡಿಕೊಳ್ಳುವುದು ಅನಿವಾರ್ಯ ಅದರ ಜೊತೆಗೆ ಆರ್ಥಿಕ ಸಮಸ್ಯೆಗಳು ಎದುರಾದಾಗ ನಮ್ಮದೇ ಆದಂತಹ ಪತ್ತಿನ ಸಹಕಾರಿ ಸಂಘ ದಿಂದ ಅದನ್ನು ಕೂಡ ಸರಿಪಡಿಸಿ ಕೊಳ್ಳಬಹುದು ಅದಕ್ಕೆ ಸಂಘಟನೆ ಬಹಳ ಮುಖ್ಯ ಈ ದಿಶೆಯಲ್ಲಿ ಇಲ್ಲಿನ ಪ್ರೌಢಶಾಲಾ ಸಹ ಶಿಕ್ಷಕರ ಪತ್ತಿನ ಸಹಕಾರಿ ಸಂಘ ಉತ್ತಮ ಹೆಜ್ಜೆಯನ್ನು ಇಟ್ಟು ಶ್ರಮಿಸುತ್ತ ಬಂದಿದೆ ಒಳ್ಳೆಯ ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಂಘಟನೆ ಮೂಲಕ ಉತ್ತಮ ಕೆಲಸ ಮಾಡುತ್ತಾ ಬಂದಿದೆ

            ಇದು ಒಳ್ಳೆಯ ಬೆಳವಣಿಗೆ ಕೂಡ ಹೌದು ಇಂತಹ ಸಂಘಟನೆಗಳಿಗೆ ಪ್ರತಿಯೊಬ್ಬರ ಸಹಕಾರ ಇದ್ದೇ ಇರುತ್ತದೆ ಎಂದು ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು, ಸಭೆಯ ಅಧ್ಯಕ್ಷತೆಯನ್ನು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಾಕೀರ್ ಹುಸೇನ್ ಕುಕುನೂರ್ ವಹಿಸಿದ್ದರು ಉಪ ನಿರ್ದೇಶಕ ಎಲ್ ಡಿ ಜೋಷಿ ಸಂಘದ ನೂತನ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು, ಜ್ಞಾನ ಬಂದು ಶಾಲೆಯ ಶರತ್ ಕುಮಾರ್ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಾರ್ತಂಡ ರಾವ್ ದೇಸಾಯಿ ಶಿಕ್ಷಕರಾದ ಈರಣ್ಣ ಕುಂಬಾರ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಿನ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಇತರ ಪದಾಧಿಕಾರಿಗಳು ಸದಸ್ಯ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು,