ಪ್ರವಾದಿ ಪೈಗಂಬರ್(ಸ) ರವರು ಸಾಮಾಜಿಕ ನ್ಯಾಯದ ಹರಿಕಾರರು- ಧರ್ಮ ಗುರು ಹಾಫೀಸ್ ಅಲಿ ಹಸನ್
The Prophet Muhammad (PBUH) was the pioneer of social justice - Religious scholar Hafiz Ali Hassan
ಪ್ರವಾದಿ ಪೈಗಂಬರ್(ಸ) ರವರು ಸಾಮಾಜಿಕ ನ್ಯಾಯದ ಹರಿಕಾರರು- ಧರ್ಮ ಗುರು ಹಾಫೀಸ್ ಅಲಿ ಹಸನ್
ಕೊಪ್ಪಳ 19: ಪ್ರವಾದಿ ಮೊಹಮ್ಮದ್ (ಸ) ಪೈಗಂಬರ್ ರವರು ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಅವರು ತಮ್ಮ ಕಾಲಾವಧಿಯಲ್ಲಿ ಹಲವಾರು ಸಂದೇಶಗಳನ್ನು ಸಾರಿದರು ಎಂದು ಗುಲ್ಬರ್ಗ ಹಜರತ್ ಖಾಜಾ ಬಂದ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಸಲಹಾ ಮಂಡಳಿಯ ಅಧ್ಯಕ್ಷರಾಗಿರುವ ಧರ್ಮ ಗುರು ಹಜರತ್ ಹಾಫೀಸ್ ಸೈಯದ್ ಶಾಹ್ ಅಲಿ ಹಸನ್ ಅಲ್ ಹುಸೇನಿ ರವರು ಹೇಳಿದರು.ಅವರು ಶನಿವಾರ ರಾತ್ರಿ ವೇಳೆಯಲ್ಲಿ ನಗರದ ತಾಲೂಕ ಕ್ರೀಡಾಂಗಣ ದಲ್ಲಿ ಕೊಪ್ಪಳದ ಸಮಸ್ತ ಮುಸ್ಲಿಂ ಸಮಾಜ ಬಾಂಧವರು ಏರಿ್ಡಸಿದ ಮಹಮ್ಮದ್ ಪೈಗಂಬರ್(ಸ) ರವರ 1500 ಜನ್ಮ ದಿನೋತ್ಸವದ ಪ್ರಯುಕ್ತ ವಿಶ್ವ ಶಾಂತಿಯ ದಿನಾಚರಣೆ ಅಂಗವಾಗಿ ಏರಿ್ಡಸಿದ ವಿಶ್ವ ಶಾಂತಿಯ ಸಂದೇಶ ಸಾರುವ ಬೃಹತ್ ಕಾರ್ಯಕ್ರಮದಲ್ಲಿ ವಿಶೇಷ ಸನ್ಮಾನಿತರಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿದ ಬಳಿಕ ಕಿಕ್ಕಿರಿದ ಜನಸ್ತೋಮವನ್ನು ಉದ್ದೇಶಿಸಿ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ತಮ್ಮ ಆಶೀರ್ವಚನದಲ್ಲಿ ನುಡಿದರು. ಪ್ರವಾದಿ ಮೊಹಮ್ಮದ್ (ಸ) ಪೈಗಂಬರ್ ರವರು ತಮ್ಮ ಕಾಲಾವಧಿಯಲ್ಲಿ ಹಲವಾರು ಸಂದೇಶಗಳನ್ನು ಸಾರಿದರು. ಯುದ್ಧದ ಸಮಯದಲ್ಲೂ ಅನೇಕ ಮಾದರಿ ಸಂದೇಶಗಳನ್ನು ನೀಡಿದರು ಅನ್ಯಾಯದ ವಿರುದ್ಧ ನ್ಯಾಯವನ್ನು ಎತ್ತಿ ಹಿಡಿಯುವಂತಹ ಕೆಲಸ ಮಾಡಿದರು. ದ್ವೇಷವನ್ನು ಹೋಗಲಾಡಿಸಲು ಪ್ರೀತಿಯ ಹಾದಿಯನ್ನು ಹಿಡಿದರು. ಸರ್ವರನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಜೀವನ ಸಾಗಿಸಲು ಸಂದೇಶ ನೀಡಿದ್ದರು. ವಿಶೇಷವಾಗಿ ಮಹಿಳೆಯರ ಸ್ಥಾನಮಾನದ ಬಗ್ಗೆ ಅರಿವು ಮೂಡಿಸಿದರು. ಹಿರಿಯರನ್ನು ಗೌರವಿಸಬೇಕು, ಕಿರಿಯರನ್ನು ಪ್ರೀತಿಸಬೇಕು ಎಂಬ ಮಾರ್ಗ ತೋರಿಸಿದರು.
ಅವರು ತೋರಿಸಿದ ಮಾರ್ಗದಲ್ಲಿ ನಾವುಗಳು ನಮ್ಮ ಬದುಕನ್ನು ಕಟ್ಟಿಕೊಂಡರೆ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಅವರು ನುಡಿದರು.ಮುಂದುವರೆದು ಮಾತನಾಡಿ ಪರಸ್ಪರ ನಾವುಗಳು ಸೌಹಾರ್ದತೆಗಳನ್ನು ಬೆಳೆಸಿಕೊಂಡು ಪ್ರತಿಯೊಬ್ಬರೊಂದಿಗೆ ಉತ್ತಮ ಬಾಂಧವ್ಯ ಹೊಂದಿಕೊಂಡು ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವಂತಹ ಕೆಲಸ ಮಾಡಬೇಕು ಎಂದು ಗುಲ್ಬರ್ಗ ಹಜರತ್ ಖಾಜಾ ಬಂದಾ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಸಲಹಾ ಮಂಡಳಿಯ ರಾಜ್ಯ ಅಧ್ಯಕ್ಷರು ಆಗಿರುವ ಧರ್ಮಗುರು ಹಜರತ್ ಹಫೀಜ್ ಸೈಯದ್ ಶಾ ಅಲಿ ಹಸನ್ ಅಲ್ ಹುಸೇನಿ ಸಾಹೇಬ್ ರವರು ತಮ್ಮ ಆಶೀರ್ವಚನ ದಲ್ಲಿ ನುಡಿದರು.ಸಮಾರಂಭದಲ್ಲಿ ಕ್ರಿಕೆಟ್ ಹಾಗೂ ಮಾಜಿ ಸಂಸದ ಮೊಹಮ್ಮದ್ ಅಜರುದ್ದೀನ್, ಇನ್ನೋರ್ವ ಮಾಜಿ ಸಂಸದ ಮೌಲಾನ ಉಭೇದುಲ್ಲಾ ಹಾಶ್ಮಿ ,ಸಚಿವರಾದ ಎಚ್.ಕೆ ಪಾಟೀಲ್, ರಹೀಮ್ ಖಾನ್, ಶಿವರಾಜ ತಂಗಡಗಿ, ಕೊಪ್ಪಳ ಸಂಸದ ಕೆ.ರಾಜಶೇಖರ ಹಿಟ್ನಾಳ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ರೋಣ ಶಾಸಕ ಜಿಎಸ್ ಪಾಟೀಲ್, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪುರ, ಮಾಜಿ ಶಾಸಕ ಎಚ್.ಆರ್ ಶ್ರೀನಾಥ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ಸುರೇಶ್ ಭೂಮರೆಡ್ಡಿ, ಗಂಗಾವತಿ ನಗರಸಭೆಯ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ ಅನೇಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ನೀಲಂಗ ಶರೀಫ್ ದರ್ಗಾದ ಪೀಠಾಧಿಪತಿ ಮೌಲಾನಾ ಹೈದರ್ ವಲಿ ಖಾದ್ರಿ ಸಾಹೇಬ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿ ಅಧ್ಯಕ್ಷ ಭಾಷಣ ಮಾಡಿದರು. ಸಮಾರಂಭದ ದಿವ್ಯ ಸಾನಿಧ್ಯವನ್ನು ಕಲಬುರ್ಗಿ ಶ್ರೀ ಶರಣಬಸವೇಶ್ವರ ಮಠದ ಒಂಬತ್ತನೇ ಪೀಠಾಧಿಪತಿ ಶ್ರೀ ಅಪ್ಪಾಜಿ ಎಸ್. ಅಪ್ಪನವರು, ಶಿರಹಟ್ಟಿ ಶ್ರೀ ಫಕೀರೇಶ್ವರ ಮಠದ ಸಿದ್ದರಾಮೇಶ್ವರ ಸ್ವಾಮೀಜಿ, ಸವನೂರು ದೊಡ್ಡ ಹುಣಸೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಅಳವಂಡಿ ಮಠದ ಸಿದ್ದೇಶ್ವರ ಸ್ವಾಮೀಜಿ ಹಾಗೂ ಅನೇಕ ಶ್ರೀಗಳು ಪಾಲ್ಗೊಂಡು ಆಶೀರ್ವಚನ ನೀಡಿದರು.
ಕೊಪ್ಪಳದ ಧರ್ಮ ಗುರುಗಳಾದ ಮೌಲಾನ ಮುಫ್ತಿ ಮಹಮ್ಮದ್ ನಜೀರ್ ಅಹ್ಮದ್ ಖಾದ್ರಿ ವ ತಸ್ಕಿನಿ, ಮೌಲಾನ ಮೊಹಮ್ಮದ್ ತಹಸೀನ್ ಖಾದ್ರಿ ವ ತಸ್ಕಿನಿ ಮೌಲಾನ ಮೊಹಮ್ಮದ್ ಮುಹಿಯುದ್ದೀನ್ ಖಾದ್ರಿ ವ ತಸ್ಕಿನಿ, ಕವಿತಾಳಂ ಖಾದರ್ ಲಿಂಗ ದರ್ಗಾದ ಪೀಠಾಧಿಪತಿ ಜಗದ್ಗುರು ಸಾಹೇಬ್ ರವರು ಸೇರಿದಂತೆ ಮತ್ತಿತರರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮ ಸಂಘಟಕರಲ್ಲಿ ಒಬ್ಬರಾದ ಸಮಾಜದ ಮುಖಂಡ ಕೆಎಂ ಸೈಯದ್ ರವರು ಆರಂಭದಲ್ಲಿ ಸ್ವಾಗತಿಸಿದರು. ಹಿರಿಯ ನ್ಯಾಯವಾದಿ ಹಾಗೂ ವಕ್ಫ್ ಮಂಡಳಿ ರಾಜ್ಯ ಸದಸ್ಯ ಆಸಿಫ ಅಲಿ, ಕಾಡಾ ಅಧ್ಯಕ್ಷ ಹಾಸನ್ ಸಾಬ್ ಡ್ಯೂಟಿಹಾಳ, ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ, ನಗರಾವೃದ್ಧಿ ಪ್ರಾಧಿಕಾರದ ಸದಸ್ಯ ಭಾಷು ಸಾಬ್ ಖತೀಬ್, ಎಂ ಪಾಷಾ ಕಾಟನ್, ಸೈಯದ್ ಎಜದಾನಿ ಭಾಷಾ ಖಾದ್ರಿ ,ಹಿರಿಯ ನ್ಯಾಯವಾದಿ ಪಿರಾ ಹುಸೇನ್ ಹೊಸಳ್ಳಿ, ದರ್ಗಾ ಕಮಿಟಿ ಅಧ್ಯಕ್ಷರಾದ ಮೌಲಾ ಹುಸೇನ್ ಜಮೆದಾರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದು ಕೊಪ್ಪಳದಲ್ಲಿ ಅದರಲ್ಲೂ ವಿಶೇಷವಾಗಿ ಮುಸ್ಲಿಂ ಸಮುದಾಯದವರಲ್ಲಿ ಇದೆ ಪ್ರಥಮ ಅತಿ ದೊಡ್ಡ ಬೃಹತ್ತಾದ ಕಾರ್ಯಕ್ರಮ ಇದಾಗಿದ್ದು, ಇದು ಇಲ್ಲಿಯ ಐತಿಹಾಸಿಕ ದಾಖಲೆಯ ಕಾರ್ಯಕ್ರಮ ಎಂದು ಹೇಳಲಾಗುತ್ತಿದೆ. ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಸೇರಿಕೊಂಡಿದ್ದು, ಕಾರ್ಯಕ್ರಮ ಸಂಘಟಕರೆಲ್ಲರನ್ನು ಅಭಿನಂದಿಸಿದರು. ಎಲ್ಲಾ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಯಾಗದಂತೆ ಸೂಕ್ತವಾದ ರೀತಿಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮಧ್ಯರಾತ್ರಿ ಎರಡು ಗಂಟೆ ವರೆಗೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಇದಕ್ಕೂ ಮುನ್ನ ನಗರದ ಗಡಿಯಾರ ಕಂಬದಿಂದ ಅಶೋಕ್ ಸರ್ಕಲ್ ವರೆಗೆ ಭವ್ಯ ಮೆರವಣಿಗೆ ಜರುಗಿತು. ಧರ್ಮ ಗುರುಗಳಿಗೆ ಮತ್ತು ಸ್ವಾಮೀಜಿಗಳಿಗೆ ಹೂವು ಹಾಕುವುದರ ಮೂಲಕ ಅವರನ್ನು ಗೌರವದಿಂದ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಮೆರೆವಣಿಗೆಯಲ್ಲಿಯೂ ಸಹ ಸಹಸ್ರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಸಾರ್ವಜನಿಕರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 