ವಾಷಿಂಗ್ಟನ್ 27 (ಯುಎನ್ಐ): ಅಣು ಒಪ್ಪಂದ ವಿವಾದಕ್ಕೆ ಸಂಬಂಧಿಸಿದಂತೆ ಇರಾನ್ ದೇಶದ ಮೇಲೆ ನಿರಂತರ ಒತ್ತಡ ಹೇರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಸಕರ್ಾರ ಬದಲಿಸುವುದು ತಮ್ಮ ಉದ್ದೇಶವಲ್ಲ ಎಂದಿದ್ದಾರೆ.
ನಾಲ್ಕು ದಿನಗಳ ಜಪಾನ್ ಪ್ರವಾಸದಲ್ಲಿರುವ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗಿನ ದ್ವಿಪಕ್ಷೀಯ ಭೇಟಿಯ ನಂತರ ಹಮ್ಮಿಕೊಳ್ಳಲಾಗಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಸ್ಪಷ್ಟನೆ ನೀಡಿದ್ದಾರೆ.
ತಮಗೆ ಇರಾನ್ ನ ಹಲವು ಜನರ ಪರಿಚಯವಿದೆ. ಪ್ರಸಕ್ತ ನಾಯಕತ್ವದ ಅಡಿಯಲ್ಲಿ ಇರಾನ್ ಶ್ರೇಷ್ಠ ದೇಶವಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ತಾವು ಅಲ್ಲಿನ ಸಕರ್ಾರ ಬದಲಿಸಲು ಪ್ರಯತ್ನಿಸುತ್ತಿಲ್ಲ. ಇದು ಸ್ಪಷ್ಟ ಎಂದಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಶ್ವೇತಭವನದಲ್ಲಿ ಕೂಡ ಪ್ರಸಾರ ಮಾಡಲಾಯಿತು. 2015ರ ಇರಾನ್ ಅಣು ಒಪ್ಪಂದದಿಂದ 2018ರಲ್ಲಿ ಹೊರಬಂದಿರುವ ಅಮೆರಿಕ, ಇರಾನ್ ಮೇಲೆ ಆಥರ್ಿಕ ನಿರ್ಬಂಧ ಹೇರಿದೆ. ಮಾತ್ರವಲ್ಲ, ಇರಾನ್ ದೇಶದಿಂದ ತೈಲ ಮತ್ತಿತರರ ಕಚ್ಚಾ ವಸ್ತುಗಳನ್ನು ಖರೀದಿಸದಂತೆ ಇತರ ದೇಶಗಳ ಮೇಲೆ ಒತ್ತಡ ತಂದಿತ್ತು. ಇದಕ್ಕೆ ಇರಾನ್ ತಕ್ಕ ಪ್ರತ್ಯುತ್ತರ ನೀಡುವ ಎಚ್ಚರಿಕೆ ನೀಡಿತ್ತು. ತಾವು ಅಣುಶಕ್ತಿಯಲ್ಲಿ ಸಬಲರಾಗಬಾರದು ಎಂಬ ಕಾರಣಕ್ಕೆ ಅಮೆರಿಕ ಈ ಸಂಚು ರೂಪಿಸುತ್ತಿದೆ ಎಂದು ಇರಾನ್ ಆದೇಶಿಸಿತ್ತು.
ಈ ಬಿಕ್ಕಟ್ಟು ಹೆಚ್ಚಾದ ಹಿನ್ನೆಲೆಯಲ್ಲಿ ಉಭಯ ರಾಷ್ಟ್ರಗಳು ತಮ್ಮ ಗಡಿ ಭಾಗದಲ್ಲಿ ಸೇನೆಯನ್ನು ಸಜ್ಜಾಗಿಸಿದ್ದು, ಕ್ಷಿಪಣಿಗಳನ್ನು ವಿರೋಧಿ ದೇಶಗಳತ್ತ ಗುರಿಯಾಗಿಸಿದೆ ಎಂಬ ವದಂತಿಯಿದೆ.