ಮೊಬೈಲ್ ಕಳೆದುಕೊಂಡ ಗ್ರಾಹಕರಿಗೆ ದೂರು ಆಧಾರದಲ್ಲಿ ಮೊಬೈಲ್ ಪತ್ತೆ ಮಾಡಿ, ಹಿಂದುರುಗಿಸಿದ ಜಿಲ್ಲಾ ಪೊಲೀಸ್ ಇಲಾಖೆ

ಮೊಬೈಲ್ ಕಳೆದುಕೊಂಡ ಗ್ರಾಹಕರಿಗೆ ದೂರು ಆಧಾರದಲ್ಲಿ ಮೊಬೈಲ್ ಪತ್ತೆ ಮಾಡಿ, ಹಿಂದುರುಗಿಸಿದ ಜಿಲ್ಲಾ ಪೊಲೀಸ್ ಇಲಾಖೆ The District Police Department traced and returned the mobile phone of a customer who lost it based


ಧಾರವಾಡ ನ.06:  ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಸನ್‌-2023 ರಿಂದ ಇಲ್ಲಿಯವರೆಗೆ ಒಟ್ಟು 620 ಮೊಬೈಲ್ ಫೋನ್‌ಗಳನ್ನು ಸಾರ್ವಜನಿಕರು ಕಳೆದುಕೊಂಡಿದ್ದು, ಅವುಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡಿ ಇದೇ 2025 ನೇ ವಾರ್ಷಿಕ ಜುಲೈವರೆಗೂ ತಿಂಗಳವರೆಗೂ 175 ಫೋನ್ ಮೊಬೈಲ್‌ಗಳನ್ನು ಕಳೆದುಕೊಂಡವರಿಗೆ ಹಿಂದಿರುಗಿಸಲಾಗಿದೆ. 

ಅದರಂತೆ ಕಾರ್ಯಾಚರಣೆಯನ್ನು ಮುಂದುವರೆಸಿದ್ದು, ಆಗಸ್ಟ್‌ 01, 2025 ರಿಂದ ಇಲ್ಲಿಯವರೆಗೂ ಸಿ.ಇ.ಐ.ಆರ್‌. ಪೋರ್ಟಲ್ ಮೂಲಕ ಪತ್ತೆ ಮಾಡಿದ ಅಂದಾಜು ರೂ. 7,94,400 ಗಳ ಮೌಲ್ಯದ ಒಟ್ಟು 50 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು ಇಂದು (ನ.6) ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರ ನೇತೃತ್ವದಲ್ಲಿ, ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡವರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.  

ಸದರಿ ಮೊಬೈಲ್ ಫೋನ್‌ಗಳನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಾನಂದ ಕಟಗಿ ಅವರ ಮಾರ್ಗದರ್ಶನದಲ್ಲಿ ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಮಾಡುವಲ್ಲಿ ಸೈಬರ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್‌ಗಳಾದ ಶರಣೇಶ ಜಾಲಿಹಾಳ, ಅಭಿಜಿತ.ಎ.,  ಎಎಸ್‌ಐ ಉಲ್ಲಾಸ್ ದುದಾಳಕರ ಹಾಗೂ ಸಿಬ್ಬಂದಿಗಳಾದ ಎಸ್‌.ಐ.ಜವಳಿ, ಬಸವರಾಜ ಬನ್ನಟ್ಟಿ,  ಶಶೀಧರ ಕೊಚ್ಚರಗಿ, ಬಸವರಾಜ ಶಿರಕೋಳ, ಎನ್‌.ಬಿ. ಕಂಬೋಗಿ, ಎಮ್‌.ಜಿ.ಕರ್ಲವಾಡ, ಸಂಗೀತಾ.ಎಮ್‌.ಸೋಗಿ, ಎಂ.ಟಿ.ಗುಡ್ಡಪ್ಪನವರ, ಪರಮೇಶ್ವರ ಬಾಗಲಕೋಟಿ, ಯಲ್ಲಾನಾಯಕ ಪಾಟೀಲ, ಎನ್‌.ಬಿ.ಕರಜಗಿ, ರಮೇಶ ಕಟ್ಟಿ., ಕೃಷ್ಣಾ, ಸುಜಾತಾ ಕುರಿ ಅವರು ತನಿಖಾ ತಂಡದಲ್ಲಿದ್ದು ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ. 

ಮುಂಜಾಗೃತಾ ಕ್ರಮಗಳು: ಕಳುವಾದ ಮೊಬೈಲ್‌ಗಳನ್ನು ಬಳಸದಂತೆ ಎಚ್ಚರ ವಹಿಸುವುದು. ಮೊಬೈಲ್‌ಗಳನ್ನು ಕಳೆದುಕೊಂಡಾಗ ಹತ್ತಿರದ ಪೊಲೀಸ್ ಠಾಣೆಗಳನ್ನು ಸಂಪರ್ಕಿಸಬೇಕು. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಕೆಎಸ್‌ಪಿ ಆ್ಯಪ್‌ನ್ನು ಡೌನಲೋಡ ಮಾಡಿಕೊಳ್ಳಬೇಕು. ನಂತರ ಅದರಲ್ಲಿ ಲಾಗಿನ್ ಆಗಿ ಕಳೆದುಕೊಂಡವರ ಹೆಸರು ವಿಳಾಸ ಮತ್ತು ಕಳೆದು ಹೋದ ಪೋನ್‌ಗೆ ಸಂಭಂದಿಸಿದಂತಹ ಮಾಹಿತಿ ಭರ್ತಿ ಮಾಡಿ ದೂರು ಸಲ್ಲಿಸಬೇಕು. ತಕ್ಷಣ ಕಳೆದು ಹೋದ ಪೋನ್‌ನಲ್ಲಿದ್ದಂತಹ ಸಿಮ್‌ನ್ನು ಬ್ಲಾಕ್ ಮಾಡಿಸಿ ಹೊಸ ಸಿಮ್ ಕಾರ್ಡನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.  

ನಂತರ ಗೂಗಲ್‌ನಲ್ಲಿ ಛಿಜಡಿ.ರಠ.ಟಿ ವೆಬ್‌ಸೈಟ್ ಗೆ ಭೇಟಿ ನೀಡಿ ಅದರಲ್ಲಿ ಇರುವಂತಹ ಃಐಓಅಏ ಖಖಿಓಐಇಓ/ಐಓಖಖಿ ಒಓಃಋಇ ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ನಂಬರ್, ಐಎಮ್‌ಇಐ ನಂಬರ್, ಕಳೆದು ಹೋದ ದಿನಾಂಕ, ಸಮಯ, ಸ್ಥಳದ ಬಗೆಗಿನ ಸಂಪೂರ್ಣ ಮಾಹಿತಿ ಭರ್ತಿ ಮಾಡಿದಾಗ ನಿಮ್ಮ ಸಿಮ್ ನಂಬರಗೆ ಬ್ಲಾಕ್ ಮಾಡಲು ಒಂದು ಓಖಿಕ  ಬರುತ್ತದೆ, ಆಗ ನೀವು ಸದರಿ ಓಟಿಪಿ ಹಾಕಿ ವೆರಿಫೈ ಮಾಡಿ ಸಬ್ಮಿಟ್ ಮಾಡಿದಾಗ ನಿಮ್ಮ ದೂರು ದಾಖಲಾಗಿ ನಿಮಗೆ 18 ಅಂಕಿಗಳ ಬ್ಲಾಕಿಂಗ್ ರಿಕ್ವೆಷ್ಟ್‌ ಐಡಿ ದೊರೆಯುತ್ತದೆ. ಆಗ ಮಾತ್ರ ನಿಮ್ಮ ದೂರು ಅದಿಕೃತವಾಗಿ ದಾಖಲಾಗಿರುವುದು ಖಚಿತವಾಗುತ್ತದೆ. ಒಂದು ವೇಳೆ ನೀವು ಮೊಬೈಲ್ ಕಳೆದುಕೊಂಡು ನಿಮ್ಮ ಹತ್ತಿರ ಕಳೆದು ಹೋದ ಮೊಬೈಲದ ಐಎಮ್‌ಇಐ ನಂಬರ್ ಇಲ್ಲದೆ ಇದ್ದಾಗ ನೀವು ನಿಮ್ಮ ಸಮೀಪದ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸಬೇಕು. ಮತ್ತು  ಫೋನ್‌ಗಳನ್ನು ಖರೀದಿಸುವ ಮೊದಲು ಐ.ಎಂ.ಇ.ಐ ಗಳನ್ನು ಪರೀಶೀಲಿಸಿ ಖರೀದಿಸುವುದು ಉತ್ತಮ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ತಿಳಿಸಿದ್ದಾರೆ.