ರಾಷ್ಟ್ರದ ಏಕತೆ ಸಮಗ್ರತೆ ವ್ಯಕ್ತಿ ಗೌರವ ಸಂವಿಧಾನ ಕಾಪಾಡುತ್ತಿದೆ: ಡಾ.ಸೌಧಾಗರ
The Constitution protects the unity, integrity and dignity of the nation: Dr. Soudhagar
ಬ್ಯಾಡಗಿ 28: ವೈವಿಧ್ಯಮಯವಾದ ದೇಶದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ, ಭ್ರಾತೃತ್ವ, ಘನತೆಯಿಂದ ಬದುಕಲು ಅನುವು ಮಾಡಿಕೊಟ್ಟಿರುವ ಸಂವಿಧಾನವನ್ನು ಅಂಬೇಡ್ಕರ್ರವರು ನಮಗೆ ನೀಡಿದ್ದಾರೆ. ನಾವೆಲ್ಲರೂ ಒಂದೇ ಎಂದು ಸಾರಿದ್ದಾರೆ. ಎಲ್ಲರಿಗೂ ಒಂದೇ ಕಾನೂನು ನೀಡಿ ಪ್ರಪಂಚದ ಅತ್ಯಂತ ದೊಡ್ಡ ಮತ್ತು ಸಂಪೂರ್ಣವಾದ ಸಂವಿಧಾನ ನೀಡಿದ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡಿದ ದಿನ ಇದಾಗಿದೆ ಎಂದು ಡಾ.ಸೌಧಾಗರ ಹೇಳಿದರು.
ಪಟ್ಟಣದ ಸುಭಾಷ್ ಸರ್ಕಲನ ವರ್ತಕರಿಗೆ ಹಾಗೂ ಆಟೋ ಚಾಲಕರಿಗೆ ಸಂವಿಧಾನ ಪೀಠಿಕೆ ಭೋಧನೆ ಮಾಡಿಸುವ ಮೂಲಕ ಸಂವಿಧಾನ ದಿನಾಚರಣೆ ಆಚರಿಸಿ ಮಾತನಾಡಿದರು. ರಾಷ್ಟ್ರದ ಏಕತೆ ಸಮಗ್ರತೆ ವ್ಯಕ್ತಿ ಗೌರವ ಹಾಗೂ ಸಾಮಾಜಿಕ ಶಾಂತಿಯನ್ನು ಸಂವಿಧಾನ ಕಾಪಾಡುತ್ತಿದೆ ಆರ್ಥಿಕ ರಾಜಕೀಯ ಸಾಮಾಜಿಕ ಸಮಾನತೆಯನ್ನು ಪ್ರತಿಯೊಬ್ಬರಿಗೂ ಕಲ್ಪಿಸಿದೆ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ವರ್ತಕರಾದ ರಿಯಾಜ್ ನದಾಫ, ಆಟೋ ಚಾಲಕ ಅಸ್ಲಂ ಬಾಗಲಕೋಟ, ಸುರೇಶ ಬಿರಾದಾರ, ಮೊಹಮ್ಮದ್ ಮೆಡ್ಲೇರಿ, ಕೃಷ್ಣ ದುಳಿಕೊಪ್ಪ, ರಾಜೇಸಾಬ, ಹುಸೇನ ಬೆಂಚಳ್ಳಿ, ಈರ್ಪ, ಮಹೇಶ್ ಮಾಸೂರು ಏ. ಓ ರ ಸ್ವಾಮಿ ಉಪಸ್ಥಿತರಿದ್ದರು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 