ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ 6ನೇ ಮಹಾ ಸಮಾರಾಧನಾ ಮಹೋತ್ಸವ
The 6th Great Celebration of Sri Vishwesha Tirtha Sripadam
ಬೆಳಗಾವಿ, 18 : ನಗರದ ಟಿಳಕವಾಡಿ ಆರ್‌ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ಡಿ. 20ರಿಂದ 23ರ ವರೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ 6ನೇ ಮಹಾ ಸಮಾರಾಧನಾ ಮಹೋತ್ಸವ ಆಯೋಜಿಸಲಾಗಿದೆ.
ಡಿ. 20ರಂದು ಸಂಜೆ 4ರಿಂದ 5:30ರ ವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ, 5:45ರಿಂದ 7ರವರೆಗೆ ಸ್ವರ ನಿರಂತರ ತಂಡದವರಿಂದ ದಾಸವಾಣಿ, 7ರಿಂದ 8 ರವರೆಗೆ ಮಂತ್ರಾಲಯ ಪಂಡಿತ್ ವೇಣುಗೋಪಾಲಾಚಾರ್ ಪುರೋಹಿತ ಅವರಿಂದ ಶ್ರೀಮದ್ ಭಾಗವತ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ವಿಶಾಲ ಮನೋಭಾವ ವಿಷಯವಾಗಿ ವಿಶೇಷ ಪ್ರವಚನ ನಡೆಯಲಿದೆ.
ಡಿ. 21ರಂದು ಸಂಜೆ 4ರಿಂದ 5:30ರವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ, 6 ಗಂಟೆಗೆ ಹರಿ ಭಜನೋಪಾಸಕ ತಂಡದಿಂದ ದಾಸವಾಣಿ, 7ರಿಂದ 8 ಗಂಟೆವರೆಗೆ ಹುಬ್ಬಳ್ಳಿಯ ವಿದ್ವಾಂಸ ಸತ್ಯಮೂರ್ತಿ ಆಚಾರ್ಯ ಅವರಿಂದ ಶ್ರೀ ವಿಶ್ವೇಶ ತೀರ್ಥರ ದೃಷ್ಟಿಯಲ್ಲಿ ರಾಮಾಯಣ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ಬಹುಮುಖ ವ್ಯಕ್ತಿತ್ವ ವಿಷಯವಾಗಿ ವಿಶೇಷ ಪ್ರವಚನ ನಡೆಯಲಿದೆ.
ಡಿ. 22ರಂದು ಸಂಜೆ 4ರಿಂದ 5: 30ರವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ, 6-7 ಗಂಟೆವರೆಗೆ ರಾಗ ರಾಗಿಣಿ ತಂಡದಿಂದ ದಾಸವಾಣಿ, 7-8 ಗಂಟೆವರೆಗೆ ಶ್ರೀ ಭಾರತಿ ರಮಣಾಚಾರ್ಯ ಗಣಾಚಾರಿ ಅವರಿಂದ ಮಹಾಭಾರತ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ಪಂಚ ಪರ್ಯಾಯಗಳು ವಿಷಯವಾಗಿ ಪ್ರವಚನ ನಡೆಯಲಿದೆ.
ಡಿ. 23ರಂದು ಬೆಳಗ್ಗೆ 6ಕ್ಕೆ ಧನುರ್ಮಾಸ ಪೂಜೆ, 7:30ಕ್ಕೆ ವಾಯುಸ್ತುತಿ ಪುನಶ್ಚರಣ ಹೋಮ, 10:30ಕ್ಕೆ ವಿದ್ವಾಂಸರಿಂದ ಶಾಸ್ತ್ರಾನುವಾದ ಹಾಗೂ ಪ್ರವಚನ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ರಥೋತ್ಸವ, ನೈವೇದ್ಯ, ಮಹಾ ಮಂಗಳಾರತಿ, 1 ಗಂಟೆಗೆ ತೀರ್ಥ ಪ್ರಸಾದ, ಸೇವಾ ಕರ್ತೃಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9886457735 ಮತ್ತು 9986779878 ಇಲ್ಲಿಗೆ ಸಂಪರ್ಕಿಸಬಹುದು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 