ತಂತ್ರಜ್ಞಾನದಿಂದ ಎಲ್ಲಾ ಕ್ಷೇತ್ರಗಳಲ್ಲಿ ದೊಡ್ಡ ಪರಿವರ್ತನೆಗೆ ಅವಕಾಶವಿದೆ - ಸರ್ವಾಧ್ಯಕ್ಷರಾದ ಸುನೀಲ

ತಂತ್ರಜ್ಞಾನದಿಂದ ಎಲ್ಲಾ ಕ್ಷೇತ್ರಗಳಲ್ಲಿ ದೊಡ್ಡ  ಪರಿವರ್ತನೆಗೆ ಅವಕಾಶವಿದೆ - ಸರ್ವಾಧ್ಯಕ್ಷರಾದ ಸುನೀಲ Technology has the potential to bring about major transformation in all sectors - Sunil, the Suprem

                         ಧಾರವಾಡ 09:  ಬಾಗೇವಾಡಿ ಯುವ ಚಿಂತನಾ ಸಮಾವೇಶವು ಯುವ ಮನಸ್ಸಿನಲ್ಲಿ ಹೊಸ ಪ್ರಶ್ನೆ, ಹೊಸ ಕಲ್ಪನೆ ಮತ್ತು ಹೊಸ ದಾರಿಯನ್ನು ತೆರೆಯುವ ಕೆಲಸ ಮಾಡಿದೆ. ಯುವಕರು ಭಾರತ ದೇಶದ ಭವಿಷ್ಯವಲ್ಲ ಮುಂದಿನ ನಿರ್ಮಾತೃಗಳು. ಕೌಶಲ್ಯವಿರುವವರು. ಸೃಜನಶೀಲರು, ನೈತಿಕತೆ ಉಳಿಸಿಕೊಂಡವರು, ಸಮಾಜದ ಸಮಸ್ಯೆಗಳಿಗೆ ಪರಿಹಾರ ಹುಡುಕುವವರು. ಎ ಐ ನಮ್ಮ ಉದ್ಯೋಗಗಳನ್ನು ಕಸಿದು ಕೊಳ್ಳುವುದಿಲ್ಲ ಎಐ ಯಿಂದ ಆರೋಗ್ಯ ಶಿಕ್ಷಣ ಕೃಷಿ ನಿರ್ಮಾಣ ಸಾರಿಗೆ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ದೊಡ್ಡ ದೊಡ್ಡ ಪರಿವರ್ತನೆಗೆ ಅವಕಾಶವಿದೆ ಎಂದು ಯುವ ಚಿಂತನಾ ಸಮಾವೇಶದ ಸರ್ವಾಧ್ಯಕ್ಷರಾದ ಸುನೀಲ ಬಾಗೇವಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

                         ಅವರು ಅವರು ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ಧಾರವಾಡ ವತಿಯಿಂದ ಸೃಜನಾ ರಂಗಮಂದಿರದಲ್ಲಿ ಏರಿ​‍್ಡಸಿದ್ದ 2ನೇ ಯುವ ಚಿಂತನಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಸರ್ವಾಧ್ಯಕ್ಷರ ಸಮಾರೋಪ ನುಡಿಗಳನ್ನಾಡುತ್ತಾ ಎಐ  ಆಗುವ ತಪ್ಪು ಮಾಹಿತಿ, ಉದ್ಯೋಗ ಕಳೆದುಕೊಳ್ಳುವ ಭೀತಿ, ಡಿಜಿಟಲ್ ವ್ಯಸನ, ಗೌಪ್ಯತೆಯ ಹಾನಿ ಇವುಗಳ ಬಗ್ಗೆ ಜವಾಬ್ದಾರಿಯುತ ಚಿಂತನೆ ಅಗತ್ಯವಾಗಿದೆ. ನಮ್ಮ ಜವಾಬ್ದಾರಿ ನೈತಿಕತೆ, ಮಾನವೀಯತೆ ಮತ್ತು ಸಾಮಾಜಿಕ ಬಾಂಧವ್ಯ ಸದಾ ಮೊದಲ ಸ್ಥಾನದಲ್ಲಿರಬೇಕು. ಈ ಒಂದು ತಿಂಗಳ ಪ್ರಯತ್ನದಲ್ಲಿ ಸಾವಿರಾರು ಯುವಕರು ಇದರ ಬಗ್ಗೆ ಪ್ರತಿಷ್ಠಾನ ಮಾಡಿದ್ದು ನಿಜಕ್ಕೂ ಶ್ಲಾಘನೀಯ ಎಂದರು.

                        ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಈ ವರ್ಷದ ಯುವ ಚಿಂತನಾ ಸಮಾವೇಶದಲ್ಲಿ ಕೈಗೊಂಡ  ನಿರ್ಣಯಗಳನ್ನು ಮಂಡಿಸಿದರು. 1. ಪರಿಸರ ಸಂರಕ್ಷಣೆ 2. ತಂತ್ರಜ್ಞಾನಕ್ಕೆ ಪೂರಕ ಉದ್ಯೋಗಗಳ ಸೃಷ್ಟಿಯನ್ನು ಉತ್ತೇಜಿಸುವುದು. 3. ಸಾರ್ವಜನಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುವುದು. ಪ್ರತಿಷ್ಠಾನದ ಅಧ್ಯಕ್ಷರಾದ ಎಮ್ ಎಸ್ ಫರಾಸ್ ವಿವಿಧ ಕಾಲೇಜುಗಳಲ್ಲಿ ಏರಿ​‍್ಡಸಿದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಸ್ವರ್ಣ ಗ್ರುಪ್ ಆಫ್ ಕಂಪನಿಯ ಡಾ ವಿ ಎಸ್ ವಿ ಪ್ರಸಾದ, ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ, ಕೆ.ಎ.ಎಸ್ ನಿವೃತ್ತ ಅಧಿಕಾರಿ ಭೀಮಸೇನರಾವ್ ಶಿಂಧೆ ಮಾಜಿ ಮಹಾಪೌರರು, ಪಾಲಿಕೆಯ ಸದಸ್ಯರಾದ ಈರೇಶ ಅಂಚಟಗೇರಿ, ಮುಖಂಡರಾದ ಶ್ರೀಮತಿ ಸವಿತಾ ಅಮರಶೆಟ್ಟಿ, ಅಂಜುಮನ್ ಸಂಸ್ಥೆಯ ಬಶೀರಾಹ್ಮದ ಜಹಗೀರಾದಾರ,

                       ನಿಕಟಪೂರ್ವ ಅಧ್ಯಕ್ಷರಾದ ಪಿ.ವ್ಹಿ.ಹಿರೇಮಠ, ಅಣ್ಣಿಗೇರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ನಾಗೇಶ ಅಣ್ಣಿಗೇರಿ, ನೌಕರರ ಸಂಘದ ಎಸ್‌.ಎಫ್‌.ಸಿದ್ದನಗೌಡರ, ಪ್ರೌಢಶಾಲಾ ಶಿಕ್ಷಕರ ಸಂಘದ ನಾರಾಯಣ ಭಜಂತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ ನಿರೂಪಿಸಿದರು. ಸಮಾವೇಶದ ಸಂಚಾಲಕರಾದ ಅರುಣಕುಮಾರ ಶೀಲವಂತ ಸ್ವಾಗತಿಸಿದರು. ಶ್ರೀಮತಿ ಪ್ರಮೀಳಾ ಜಕ್ಕಣ್ಣವರ ಪ್ರಾರ್ಥಿಸಿದರು,ಮಾರ್ತಾಂಡಪ್ಪ ಕತ್ತಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೃಷ್ಣಮೂರ್ತಿ ಗೊಲ್ಲರ ವಂದಿಸಿದರು. ಸುರೇಶ ಬೇಟಗೇರಿ, ಪ್ರೇಮಾನಂದ ಶಿಂಧೆ ಮತ್ತು ಶ್ರೀಶೈಲ ಚಿಕನಳ್ಳಿ ಪ್ರಶಸ್ತಿ ವಿಜೇತರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯ ಸಂಪಾದಕರಾದ ವಿಜಯೇಂದ್ರಗೌಡ ಪಾಟೀಲ,  ಅನಿತಾ ಕಡಪಟ್ಟಿ, ಸಂತೋಷ ಮೇಸ್ತ್ರಿ, ವಸುದೇವ ಪರ್ವತಿ,ಸುದೀರ ಪಿ ಎಸ್, ವಿಜಯಕುಮಾರ ಡಿ ಎಸ್, ರಾಜು ಬಿರ್ಜಣ್ಣವರ, ಪವನಕುಮಾರ ಬೆಟಗೇರಿ, ಸಂತೋಷ ಮೇಸ್ತ್ರಿ,ಸಂತೋಷ ಅಂಚಟಗೇರಿ, ರಮೇಶ ಲಿಂಗದಾಳ, ನೇಹಾ ಬುದ್ನಿ, ಕು. ಸಂಜನಾ ಎಮ್‌.ಎಸ್‌. ಸರ್ವಾಧ್ಯಕ್ಷರಾದ ಸುನೀಲ ಬಾಗೇವಾಡಿ ಅವರ ಸನ್ಮಾನ ಭಾವಚಿತ್ರ.