ಅಧ್ಯಾಪನ ವೃತ್ತಿಯು ಮಾನವೀಯ ಸ್ಪರ್ಶದಿಂದ ಕೂಡಿರುತ್ತದೆ - ಡಾ.ವಿಜಯಕುಮಾರ ಕಟಗಿಹಳ್ಳಿಮಠ

ಅಧ್ಯಾಪನ ವೃತ್ತಿಯು ಮಾನವೀಯ ಸ್ಪರ್ಶದಿಂದ ಕೂಡಿರುತ್ತದೆ - ಡಾ.ವಿಜಯಕುಮಾರ ಕಟಗಿಹಳ್ಳಿಮಠ Teaching profession is full of human touch - Dr. Vijayakumar Katagihallimath

                ಮುಧೋಳ 17 : ಅಧ್ಯಾಪನ ವೃತ್ತಿಯು ಮಾನವೀಯ ಸ್ಪರ್ಶದಿಂದ ಕೂಡಿರುತ್ತದೆ, ಬೋಧನಾ ವೃತ್ತಿಯಲ್ಲಿ ವೈಶಿಷ್ಟ-್ಯ ಮತ್ತು ಅನನ್ಯತೆ ಇದ್ದೇ ಇರುತ್ತದೆ, ಅಧ್ಯಾಪಕರು ಪಾಠ ಬೋಧನೆ ಮಾಡುವ ಮುನ್ನ ಪೂರ್ವ ಸಿದ್ಧತೆ ಮಾಡಿಕೊಂಡು ತರಗತಿಗಳಿಗೆ ಹೋಗಬೇಕು, ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಮಾಡುವದರ ಜೊತೆ ಮಾನವೀಯ ಮೌಲ್ಯಗಳನ್ನು ಅವರ ಜೀವನದಲ್ಲಿ ರೂಡಿಸಿಕೊಳ್ಳುವಂತೆ ಮಾಡಬೇಕು ಜೊತೆಗೆ ತಾವು ಕೂಡಾ ನೈತಿಕವಂತರಾಗಿರಬೇಕೆಂದು ಬಾಗಲಕೋಟ ಬಿವ್ಹಿವ್ಹಿ ಸಂಘದ ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ ಹೇಳಿದರು. 

             ಸೋಮವಾರ ನಗರದ ಶ್ರೀ ಎಸ್‌.ಆರ್‌.ಕಂಠಿ ಮಹಾವಿದ್ಯಾಲಯದ ಐಕ್ಯೂಎಸಿ ಹಾಗೂ 6ನೇ ಕ್ರೈಟೆರಿಯಾದ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಬೋಧಕ ಸಿಬ್ಬಂದಿ ವರ್ಗದವರಿಗೆ ಬೋಧನೆಯಲ್ಲಿ ನೈತಿಕ ಆಚರಣೆ ಎಂಬ ಶೀರ್ಷಿಕೆಯಡಿ 5 ದಿನಗಳ ಪ್ರಧ್ಯಾಪಕ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿ ಬೋಧನಾ ವೃತ್ತಿಯಲ್ಲಿ ನೈತಿಕತೆ ಮತ್ತು ಅದರ ಆಚರಣೆ ಎಂಬ ವಿಷಯದ ಕುರಿತು ಮಾತನಾಡಿ ಪ್ರಾಧ್ಯಾಪಕರ ನೈತಿಕತೆ ತಮ್ಮ ವ್ಯಕ್ತಿತ್ವವನ್ನು ಗುರುತಿಸುತ್ತದೆ, ಕಲಿಕೆಗೆ ಅಂತ್ಯ ವೆಂಬುದೇ ಇಲ್ಲ ಅದು ನಿರಂತರವಾಗಿರುತ್ತದೆ,

             ನಮ್ಮನ್ನು ನಾವು ಅವಲೋಕನ ಮಾಡಿಕೊಳ್ಳುತ್ತಾ ಇರಬೇಕು ಇದರಿಂದ ಸಾಕಷ್ಟು ರೀತಿಯ ಅನುಕೂಲವಾಗಲಿದೆ, ವಿದ್ಯಾರ್ಥಿಗಳಲ್ಲಿ ಆಸಕ್ತಿ, ಅಭಿರುಚಿ, ಕೂತುಹಲ, ಆತ್ಮವಿಶ್ವಾಸವನ್ನು ಮೂಡಿಸಿ ಪಾಠ ಬೋಧನೆ ಮಾಡಬೇಕು, ಬೋಧಕರಲ್ಲಿ ಮುಂದಾ ಲೋಚನೆ ಮತ್ತು ಆಶಾಭಾವನೆ ಇರಬೇಕು, ಯಾರಲ್ಲೂ ಕೀಳರಮೆ ಇರಬಾರದು, ಬೋಧಕರು ತಮ್ಮದೆಯಾದ ಸಾಮಾಜಿಕ ಜವಾಬ್ದಾರಿ ಹೊಂದಿರಬೇಕು, ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ಬಂದಾಗ ಅದನ್ನು ಸರಿಯಾಗಿ ಮತ್ತು ಸಮರ​‍್ಕವಾಗಿ ಬಳಸಿ ಕೊಂಡರೆ ತಮ್ಮ ಇಡೀ ಜಿವನವೇ ಬದಲಾಗುತ್ತದೆ ಎಂದರು. ಶಿಕ್ಷಕರು ಪ್ರಾಮಾಣಿಕತೆ, ಪಾರದರ್ಶಕತೆ ಮತ್ತು ನ್ಯಾಯದಂತಹ ನೈತಿಕ ತತ್ವಗಳಿಗೆ ಬದ್ಧ ರಾಗಿರಬೇಕು, ಬೋಧನಾ ವಿಧಾನಗಳು ಮತ್ತು ತಂತ್ರಗಳನ್ನು ನಿರಂತರವಾಗಿ ನವೀಕರಿಸಿ ಕೊಳ್ಳಬೇಕು ಮತ್ತು ಕೃತಕ ಬುದ್ಧಿಮತ್ತೆಯಂತಹ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು, 

             ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮ0ತ್ತು ಉದ್ಯಮಶೀಲತೆಯ ಮನೋಭಾವವನ್ನು ಪ್ರೋತ್ಸಾಹಿಸು ವುದು ಮುಖ್ಯವಾಗಿದೆ, ಸಂವಿಧಾನದ ಮೌಲ್ಯಗಳಾದ ಸಾರ್ವಭೌಮತ್ವ, ಸಮಾಜವಾದ, ಜಾತ್ಯತೀತ ತೆ, ಪ್ರಜಾಸತ್ತಾತ್ಮಕತೆ ಮತ್ತು ಗಣರಾಜ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಅವಶ್ಯಕ ವಾಗಿದೆ, ಪಾಠಗಳನ್ನು ಆಕರ್ಷಕ ಮತ್ತು ಪರಿಣಾಮಕಾರಿಯಾಗಿ ಮಾಡಲು ಪರಿಣಾಮಕಾರಿ ಬೋಧನಾ ಸಾಧನಗಳನ್ನು ಬಳಸಬೇಕು, ಅಧ್ಯಾಪಕರ ನಡುವೆ ಸಹಯೋಗದ ಸಂಸ್ಕೃತಿಯನ್ನು ಬೆಳೆಸುವುದು ಶ್ರೇಷ್ಠತೆಗೆ ಕಾರಣವಾಗುತ್ತದೆ ಎಂದು ಹೇಳಿದರು. 

           ಕಾಲೇಜಿನ ಪ್ರಾಚಾರ್ಯ ಡಾ.ಎಮ್‌.ಆರ್‌.ಜರಕುಂಟಿ ಅಧ್ಯಕ್ಷತೆವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು, ಐಕ್ಯೂಎಸಿ ಸಂಯೋಜಕ ಪ್ರೊ.ಅಜ್ಜಪ್ಪ ಕಡೂರ ವೇದಿಕೆ ಮೇಲಿದ್ದರು, 6ನೇ ಕ್ರೈಟೇರಿಯಾ ಮುಖ್ಯಸ್ಥ, ಸಂಘಟನಾ ಕಾರ್ಯದರ್ಶಿ ಪ್ರೊ.ಎಮ್‌.ಎಮ್‌.ಬಾಳನಾಯ್ಕ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು, ಉಪನ್ಯಾಸಕಿ ಜ್ಯೋತಿ ಕಲಾಲ ನಿರೂಪಿಸಿದರು, ಉಪನ್ಯಾಸಕ ಶಿವಕುಮಾರ ಶಂಕಿನಮಠ ವಂದಿಸಿದರು, ಬೋಧಕ ಸಿಬ್ಬಂದಿ ಉಪಸ್ಥಿತರಿರುವರು.