ಶಿಕ್ಷಕರು ಹೊಸತನೊಂದಿಗೆ ಪರಿಣಾಮಕಾರಿ ಬೋಧನೆಗೆ ಪ್ರಯತ್ನಿಸಿ: ರಂಗೋಪಂಥ ರಾಯರು

ಶಿಕ್ಷಕರು ಹೊಸತನೊಂದಿಗೆ ಪರಿಣಾಮಕಾರಿ ಬೋಧನೆಗೆ ಪ್ರಯತ್ನಿಸಿ: ರಂಗೋಪಂಥ ರಾಯರು Teachers should try new things for effective teaching: Rangopantha Roy


ವಿಜಯನಗರ  07: ಶಿಕ್ಷಕರು, ಸೈನಿಕ ಹಾಗೂ ರೈತ ದೇಶದ ಆಧಾತ ಸ್ತಂಭಗಳು. ಅವರನ್ನು ಗೌರವಿಸುವ ದೇಶ ಯಾವತ್ತೂ ಹಿಂದುಳಿಯಲು ಸಾಧ್ಯವಿಲ್ಲ. ಹೀಗಾಗಿ ಶಿಕ್ಷಕರ ತಮ್ಮ ಬೋಧನಾ ಕ್ರಮದಲ್ಲಿ ಹೊಸತನವನ್ನು ಅಳವಡಿಸಿಕೊಂಡು, ಪರಿಣಾಮಕಾರಿಯಾಗಿ ಬೋಧನೆಗೆ ಪ್ರಯತ್ನಿಸಬೇಕು ಎಂದು ಕೃಷ್ಣಕವಿ ರಂಗೋಪಂಥ ನಾಗರಾಜರಾಯರು ಅಭಿಪ್ರಾಯ ಪಟ್ಟರು. 

ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಶ್ರಯದಲ್ಲಿ ಶನಿವಾರ ಹೊಸಪೇಟೆಯ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ಭಾಷಾ ಬೋಧನೆಯಲ್ಲಿ ಕಾವ್ಯ ಮತ್ತು ಕನ್ನಡ ಗೀತೆಗಳ ಪರಿಣಾಮ ಕಾರಿ ಅನುಷಾನ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಮಾಧ್ಯಮಗಳ ಪ್ರಭಾವವೋ, ಪೋಷಕರ ಅತಿಯಾದ ಪ್ರೀತಿಯೋ ಗೊತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳು ಹೆಚ್ಚು ಸೂಕ್ಷ??ರಾಗುತ್ತಿದ್ದಾರೆ. ಮಕ್ಕಳು ತಪ್ಪು ಮಾಡಿದಾಗ ಶಿಕ್ಷಕರು ಅಥವಾ ಪೋಷಕರು ಹೇಳುವ ಕಿವಿಮಾತನ್ನೂ ಧನಾತ್ಮಕವಾಗಿ ಸ್ವೀಕರಿಸದೇ, ಆತ್ಮಹತ್ಯೆಯಂತ ತಪ್ಪು ಹಾದಿ ತುಳಿಯುತ್ತಿರುವುದು ಆತಂಕಕಾರಿ ಬೆಳವಣಿಗೆ. ಟಿವಿ, ಮೊಬೈಲ್ ಗೀಳಿನಿಂದ ತಪ್ಪಿಸಿ ಅವರನ್ನು ಸಹಿತ್ಯದ ಅಧ್ಯಯನದತ್ತ ಪ್ರೇರೇಪಿಸಬೇಕು. ಶಿಕ್ಷಕರೂ ನಿರಂತರ ಅಧ್ಯಯನಶೀಲರಾದಾಗ ಮಾತ್ರ ಬೋಧನೆ ಪರಿಣಾಮಕಾರಿಯಾಗಲಿದೆ ಎಂದು ಸಲಹೆ ನೀಡಿದರು.  

ಸಾಹಿತಿ ಬಿ.ಎಂ.ರಾಜಶೇಖರ್ ಮಾತನಾಡಿ, ಪಠ್ಯದಲ್ಲಿ ಬರುವ ಕಾವ್ಯಗಳನ್ನು ಗೀತೆ ರೂಪದಲ್ಲಿ ವಿವರಣೆ ನೀಡುವ ಮೂಲಕ ವಿಷಯವನ್ನು ಮಕ್ಕಳಿಗೆ ಮನಮುಟ್ಟುವಂತೆ ಮಾಡಲು ಸಾಧ್ಯ ಎಂದರು. 

ಖ್ಯಾತ ನಾಟಕಕಾರ ಮಾಬ ಸೋಮಣ್ಣ ಮಾತನಾಡಿ, ನಾನು 1500 ರಂಗ ಗೀತೆ(ನಾಟಕ)ಗಳನ್ನು ರಚಿಸಿದ್ದು, ಅವುಗಳಲ್ಲಿ ಬಹುತೇಕ ಜನಪ್ರಿಯವಾಗಿವೆ. ಜನರಿಗೆ ಹತ್ತಿರವಾದ ವಿಷಯ ಮತ್ತು ನಿರೂಪಣಾ ಶೈಲಿಯೇ ಅದಕ್ಕೆ ಕಾರಣ. ಅದರಂತೆ ಪಠ್ಯದಲ್ಲಿರುವ ಕಾವ್ಯಗಳನ್ನು ಅಭಿನಯ ಗೀತೆಗಳಾಗಿ ರೂಪಾಂತರಿಸಿ ಹಾಡಿದಲ್ಲಿ ಮಕ್ಕಳನ್ನು ಆಕರ್ಷಿಸಲಿದೆ ಎಂದು ತಿಳಿಸಿದರು. 

ವಿಷಯ ಪರೀವೀಕ್ಷಕ ಬಸವರಾಜ್ ಸಂಗಪ್ಪನವರ್ ಮಾತನಾಡಿ, ಹೆಚ್ಚುತ್ತಿರುವ ವಿದ್ಯುನ್ಮಾನ ಮಾಧ್ಯಮಗಳ ಪ್ರಭಾವದಿಂದ ಸಾಹಿತ್ಯ ಹಾಗೂ ಸಾತ್ವಿಕ ಕಾರ್ಯಕ್ರಮಗಳಿಗೆ ಜನರ ಆಸಕ್ತಿ ಕಡಿಮೆಯಾಗುತ್ತಿದೆ. ಮೊಬೈಲ್ ರೀಲ್ಸ್‌ ಗಳು ಜನರ ಜೀವನದಲ್ಲಿ ಒಳಿತಿಗಿಂತ ಹೆಚ್ಚು ಕೆಡಕಿಗೆ ಕಾರಣವಾಗುತ್ತಿದೆ. ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ಎಚ್ಚರಿಸಿದರು. 

ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಲೋಕಪ್ಪ ಎಚ್‌., ಸಹ ಕಾರ್ಯದರ್ಶಿ ಸಿದ್ದಮ್ಮ, ರಮೀಜಾ ಬೀ, ಉಮೇಶ ಟಿ, ಲೋಕಣ್ಣ, ಬಸವರಾಜ ಕೆ. ಬಸವಂತಪ್ಪ, ವಿ.ಬಿ.ಜಗದೀಶ್, ಸಿದ್ದಮ್ಮ, ಮಲ್ಲಯ್ಯ, ಕೊಟ್ರೇಶ್ ಉಪಸ್ಥಿತಿರಿದ್ದರು.  ಶೇಖರಯ್ಯ ಟಿಎಚ್‌ಎಂ ನಿರೂಪಿಸಿದರು. ಗುರುಬಸವರಾಜ್ ವಂದಿಸಿದರು.