ಗಡಿಭಾಗದ ಕನ್ನಡ ಶಾಲೆಗೆ ಆಂಧ್ರ್ರದೇಶ ಸರ್ಕಾರದಿಂದ ನೇಮಕಗೊಂಡ ಶಿಕ್ಷಕರಿಗೆ ಸನ್ಮಾನ
Teachers appointed by Andhra Pradesh government to border Kannada school felicitated
ಕಂಪ್ಲಿ 31 : ಸಿರುಗುಪ್ಪ ತಾಲೂಕಿನ ಆಂಧ್ರ ಗಡಿಭಾಗದ ನದಿಚಾಗಿ ಗ್ರಾಮದಲ್ಲಿ ಕನ್ನಡ ಶಾಲೆ ಆರಂಭಿಸಲು ವಳಬಳ್ಳಾರಿ ಚನ್ನಬಸವ ಶಿವಯೋಗಿಗಳು 1972ರಲ್ಲಿ ಆಂಧ್ರ ಸರ್ಕಾರಕ್ಕೆ 7ಎಕರೆ ಭೂದಾನ ಮಾಡುವುದರ ಜತೆಗೆ 20,000ನೆರವು ನೀಡಿದ್ದರು' ಎಂದು ಗಡಿನಾಡ ಸಾಹಿತಿ ನಾ.ಮ. ಮರುಳಾರಾಧ್ಯ ಸ್ಮರಿಸಿದರು.ತಾಲ್ಲೂಕಿನ ಗಡಿ ಭಾಗದ ಸೀಮಾಂಧ್ರ ಪ್ರದೇಶದ ಆದೋನಿ ನಗರದ ಆಂಧ್ರ್ರದೇಶ ಕನ್ನಡ ಶಿಕ್ಷಕರ ಒಕ್ಕೂಟ ಹಾಗೂ ಆದೋನಿ ಎಲ್ಲಾ ಕನ್ನಡ ಸಂಘಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಡಿನಾಡ ಕನ್ನಡ ಶಾಲೆ ಉಳಿವಿಗಾಗಿ ಬದಿನೆಹಾಳು ರಂಗನಗೌಡ, ಹೊಳಗುಂದ ರಾಜ ಪಂಪನಗೌಡ, ದೊಡ್ಡ ಹರಿವಾಣ ಈಶ್ವರಯ್ಯ, ಗಾದಿಲಿಂಗಗೌಡ, ಡಿ. ಹಿರೇಹಾಳು ಇಬ್ರಾಹಿಂಸಾಬ್ ಸೇರಿದಂತೆ ಕನ್ನಡಪರ ಹೋರಾಟಗಾರರು ಶ್ರಮಿಸಿದ್ದರು ಎಂದರು.
‘ಆಂಧ್ರ ಗಡಿಭಾಗದ ಕನ್ನಡ ಸಮಸ್ಯೆಗಳು ಮತ್ತು ಪರಿಹಾರಗಳು' ಕುರಿತು ರಾಯಚೂರು ಜಿಲ್ಲೆ ತುರುವಿಹಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಕೆ. ಖಾದರ್ ಭಾಷ ಮತ್ತು ‘ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ' ಕುರಿತು ಶಿಕ್ಷಕ ಡಿ. ಪಾಂಡುರಂಗ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಎ. ಅಯ್ಯಾಳಪ್ಪ, ನಿವೃತ್ತ ಶಿಕ್ಷ ಎಂ. ಶಂಕರ್ಪ ಉಪಸ್ಥಿತರಿದ್ದರು.ಬಳಿಕ ನಡೆದ ಕವಿಗೋಷ್ಠಿಗೆ ಬಿ. ಲಕ್ಷಿ-್ಮದೇವಮ್ಮ ಚಾಲನೆ ನೀಡಿದರು. ಖ್ಯಾತ ರಂಗಭೂಮಿ ಕಲಾವಿದ ಬದನೆಹಾಳು ಭೀಮಣ್ಣ ಅಧ್ಯಕ್ಷತೆಯಲ್ಲಿ 20ಜನ ಕವಿಗಳು ಕಾವ್ಯವಾಚನ ಮಾಡಿದರು. ಆಂಧ್ರದ ಕನ್ನಡ ಶಾಲೆಗಳಿಗೆ ಭೂದಾನ ಮಾಡಿದ ನಾಗಲಿಕರ ವಿಜಯಕುಮಾರ್, ಶೋಭಾರಾಣಿ, ವಿ. ಹನುಮಪ್ಪ, ವಿ. ಮಲ್ಲಮ್ಮ, ಶಾಲಾ ಕೊಠಡಿ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ನೀಲಕಂಠರೆಡ್ಡಿ, ಲಕ್ಷಿ-್ಮನರಸಮ್ಮ ಮತ್ತು ಜಿಲ್ಲಾ ಪ್ರಶಸ್ತಿ ವಿಜೇತ ಹಿರಿಯ ಶಿಕ್ಷಕರನ್ನು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದವರೆಲ್ಲನ್ನು ಸನ್ಮಾನಿಸಲಾಯಿತು.ಎಸ್.ಎಂ. ಮರಿಸಿದ್ದಯ್ಯ ಅಧ್ಯಕ್ಷತೆಯಲ್ಲಿ ಗಡಿಭಾಗದ ಕನ್ನಡ ಶಾಲೆಗೆ ಆಂಧ್ರ್ರದೇಶ ಸರ್ಕಾರದಿಂದ ಹೊಸದಾಗಿ ನೇಮಕಗೊಂಡ 58ಜನ ಶಿಕ್ಷಕರನ್ನು ಸತ್ಕರಿಸಲಾಯಿತು.ಆಂಧ್ರ್ರದೇಶ ಕನ್ನಡ ಶಿಕ್ಷಕರ ಒಕ್ಕೂಟ ಹಾಗೂ ಆದೋನಿ ಎಲ್ಲಾ ಕನ್ನಡ ಸಂಘಗಳ ಪದಾಧಿಕಾರಿಗಳು, ಗಡಿನಾಡ ಕನ್ನಡ ಶಾಲೆ ಶಿಕ್ಷಕರು ಹಾಜರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 