ಆಲಮಟ್ಟಿಯ ರಾವಬಹದ್ದೂರ ಡಾ, ಫ.ಗು.ಹಳಕಟ್ಟಿ ಪ್ರೌಢಶಾಲೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು 77 ನೇ ಗಣರಾಜ್ಯೋತ್ಸವ ದಿನಾಚರಣೆ
Teachers and students celebrate 77th Republic Day at Ravabahaddur Dr. F.G. Halakatti High School in
ಆಲಮಟ್ಟಿ 27: 77 ನೇ ಗಣರಾಜ್ಯೋತ್ಸವ ಕಲರವ ವಿಶೇಷವಾಗಿ ಇಲ್ಲಿ ಮೊಳಗಿತು. ಗಣಮನಗಳ ಮೊಗಭಾವದಲ್ಲಿ ಹರುಷದ ಹೊನಲು ತೇಲಿತ್ತು. ಸಂತಸ,ಸಂಭ್ರಮ ಹೃದಯಾಂಗಳದಲ್ಲಿ ಮನೆ ಮಾಡಿತ್ತು. ಶ್ವೇತಕಾಂತಿ ನಾವೀನ್ಯತೆ ಪರಿಮಳದಿಂದ ಗೋಚರಿಸಿತು.ಗಣತಂತ್ರೋತ್ಸವ ಉಲ್ಲಾಸ ಝೇಂಕರಿಸಿತ್ತು.ಕೃಷ್ಣೆ ತಟದ ಶಾಲಾಂಗಳದಲ್ಲಿ ದೇಶ ಪ್ರೇಮ ನಾದ ಸುಗಂಧವಾಗಿ ಅನವರಣಿಸಿತು...! ಇಂಥದೊಂದು ಶುಭ್ರತೆಯ ವರ್ಣಕಾವ್ಯ ಸೋಮವಾರ ಆಲಮಟ್ಟಿಯ ರಾವಬಹದ್ದೂರ ಡಾ, ಫ.ಗು.ಹಳಕಟ್ಟಿ (ಆರ್.ಬಿ.ಪಿ.ಜಿ) ಪ್ರೌಢಶಾಲೆ ಆವರಣದಲ್ಲಿ ಮೂಡಿತ್ತು. ಗಣತಂತ್ರ ಹಬ್ಬದ ಪ್ರಯುಕ್ತ ಶಾಲೆಯ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅವರ ಆಸ್ಥೆಯಿಂದ ಗುರುಭ್ಯೋ ಬಳಗ ಸಂಪೂರ್ಣ "ವ್ಹೈಟ್ ???ಂಡ್ ವ್ಹೈಟ್" ಅಗಿ ಏಕತಾ ಭಾವದಲ್ಲಿ ಮಿನುಗಿದರು.ಸಾಮೂಹಿಕವಾಗಿ ಬಿಳಿರಂಗದ ಜೂಬ್ಬಾ ಪೈಜ್‌ಂ ಉಡುಪು ಧರಿಸಿ ಪ್ರಜಾರಾಜ್ಯೋತ್ಸವ ದಿನಾಚರಣೆ ವಿಶೇಷತೆಯಿಂದ ಆಚರಿಸಿದರು. ಭ್ರಾತೃತ್ವದ ಮುಗಳ್ನಗೆ ಬೀರಿ ಸಾಮರಸ್ಯದ ಲೋಕಾನು ಸವಿಯಲ್ಲಿ ವಿಹರಿಸಿದರು.
ಶುಭ್ರತೆಯ ಭಾವಮನದಿಂದ ದೇಶಾಭಿಮಾನದ ಹೂ ನಗೆ ಚೆಲ್ಲಿದರು. ಶಿಸ್ತು ಬದ್ಧತೆಯ ಅಂಕುರದೊಂದಿಗೆ ಮಕ್ಕಳ ಜತೆಗೂಡಿ ಗಣರಾಜ್ಯೋತ್ಸವ ದಿನಯಾನದ ಹಬ್ಬದಲ್ಲಿ ಮಿಂದರು.ಶಾಲಾ ಮಕ್ಕಳು ಸಹ ಗಣತಂತ್ರದ ಸವಿ ಉಂಡು ಖುಷಿಪಟ್ಟರು. ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅವರ ಅಪೇಕ್ಷಿತ ದೇಶಾಭಿಮಾನ ಮೆರುಗು ತನದಿಂದ ಶಿಕ್ಷಕರಾದ ಎನ್.ಎಸ್.ಬಿರಾದಾರ, ಎಸ್.ಎಚ್.ನಾಗಣಿ, ಆರ್.ಎಂ.ರಾಠೋಡ, ಎಂ.ಬಿ.ದಶವಂತ, ಎಲ್.ಆರ್.ಸಿಂಧೆ, ಶ್ರೀಧರ ಚಿಮ್ಮಲಗಿ, ಜಿ.ಆರ್.ಜಾಧವ, ಸಚೀನ ಹೆಬ್ಬಾಳ, ಗೋಪಾಲ ಬಸಪ್ಪ ಬಂಡಿವಡ್ಡರ ಶ್ವೇತ ವರ್ಣದ ಉಡುಪಿನಲ್ಲಿ ಕಂಗೊಳಿಸಿದರು. ಪ್ರಜಾರಂಗದ ಶುಭ್ರ ಕಹಳೆ ಸಾಕ್ಷೀಕರಿಸಿದರು. ಪಥಸಂಚಲನದ ನಾಯಕ, ನಾಯಕಿರಾದ ನಾಗರಾಜ ಬೊಂಬಲೇಕರ,ಮುಸ್ಕಾನ ನದಾಫ, ಪೂಣಿ9ಮಾ ರಾಠೋಡ, ಸೌಜನ್ಯ ಸಾರವಾಡ, ಸಾನಿಕಾ ರಾಠೋಡ, ಕಾತಿ9ಕ ಲಮಾಣಿ ಬ್ಲೂ ಬ್ಲೇಜರ್, ವ್ಹೈಟ್ ಪ್ಯಾಂಟ್ ಒಂದೇ ರೀತಿಯ ಸಮವಸ್ತ್ರ ಧರಿಸಿ ವಿಶೇಷತೆಗೆ ಇನ್ನಷ್ಟು ಇಂಪು,ಕಂಪಿನ ಸ್ಪರ್ಶ ಲೇಪಿಸಿದರು.ಈ ಮಕ್ಕಳು ಸಕಲರ ಪ್ರೀತಿಗೆ ಪಾತ್ರರಾಗಿ ಗಮನ ಸೆಳೆದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 