ಶಿಕ್ಷಕರ ದಿನಾಚರಣೆ: ಚಿತ್ರಕಲಾ ಸ್ಪರ್ಧೆ-ವಿಜೇತರಿಗೆ ಪ್ರಶಸ್ತಿ ಪತ್ರ

ಶಿಕ್ಷಕರ ದಿನಾಚರಣೆ: ಚಿತ್ರಕಲಾ ಸ್ಪರ್ಧೆ-ವಿಜೇತರಿಗೆ ಪ್ರಶಸ್ತಿ ಪತ್ರ Teachers' Day: Painting competition - Award certificates to winners

ಶಿಕ್ಷಕರ ದಿನಾಚರಣೆ: ಚಿತ್ರಕಲಾ ಸ್ಪರ್ಧೆ-ವಿಜೇತರಿಗೆ ಪ್ರಶಸ್ತಿ ಪತ್ರ 

ಗದಗ. 05 : ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸಾಮಾಜಿಕಾಭಿವೃದ್ಧಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಬರಹಗಾರರ ಸಂಘದ ವತಿಯಿಂದ ಇದೇ ಸೆ. 04ರಂದು ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ -10 ಶೀರ್ಷಿಕೆ ಅಡಿಯಲ್ಲಿ ಇದೇ ದಿನಾಂಕ ಸೆಪ್ಟೆಂಬರ್ 5 ರಂದು ಆಚರಿಸಲ್ಪಡುವ ಭಾರತದ ಎರಡನೇ ರಾಷ್ಟ್ರಪತಿಗಳು ಹಾಗೂ ಸರ್ವ ಶ್ರೇಷ್ಠ ಶಿಕ್ಷಕರು ಆದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಆಚರೀಸಲ್ಪಡುವ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರವರ ಚಿತ್ರ ರಚನೆ ವಿಷಯದಲ್ಲಿ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆ ಜರುಗಿತು. ವಿಶಿಷ್ಟ ನೈಪುಣ್ಯತೆಯನ್ನು ಹೊಂದಿರುವ ಕಲಾವಿದರನ್ನು ಗುರುತಿಸುವ ಸ್ಪರ್ಧೆಯಲ್ಲಿ ಸಮಸ್ತ ರಾಜ್ಯಾದ್ಯೇಂತ ಅಷ್ಟೇ ಅಲ್ಲದೇ ಅಂತರಾಜ್ಯ ಕಲಾವಿದರು ಭಾಗವಹಿಸಿದ್ದರು. 

ಇಂದು ಜರುಗಿದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿಸಹನ ಗುಂಡ್ಲುಪೇಟೆ. ಮಾನಸ ಬಿ ಎಂ ಹಾಸನ, ವರ್ಷ ಬಸವರಾಜ್ ಕೋತಾಬಳ ಗಜೇಂದ್ರಗಡ.ದ್ವಿತೀಯ ಸ್ಥಾನದಲ್ಲಿ ಸೌಮ್ಯ ಎಸ್ ಹಾಸನ.  ಕೆ ಎಂ ಮುಲ್ಲಾ ನರೇಗಲ್ ಗದಗ. ಅಮೂಲ್ಯ ಕೆ ಎಸ್ ಆಲೂರು ಹಾಸನ ಜಿಲ್ಲೆ. ತೃತೀಯ ಸ್ಥಾನದಲ್ಲಿ  ಶಾಲಿನಿ ಎನ್ ಎಸ್ ಆಲೂರು, ಹಾಸನ ಜಿಲ್ಲೆ ಸಾವಿತ್ರಮ್ಮ ಓಂಕಾರ್ ಅರಸೀಕೆರೆ. ಸುಶ್ಮಿತಾ.ಜಿ.ಆಲೂರು ಹಾಸನ ಜಿಲ್ಲೆ.ಕ್ರಮವಾಗಿ ವಿಜೇತರಾಗಿರುವರು. 

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ. ಇದರ ಸಂಸ್ಥಾಪಕ ಅಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ಪ್ರತಿವಾರವು ಗಾಯನ ಸ್ಪರ್ಧೆ, ಕಾವ್ಯ ಸ್ಪರ್ದೆ ನಮ್ಮ ಸಂಘದ ವತಿಯಿಂದ ನಡೆಯುತ್ತದೆ. ಎಂದು ತಿಳಿಸುತ್ತಾ  ವಿಶಿಷ್ಟ ಚಿತ್ರಕಲೆಯನ್ನು ರಚಿಸುವ ಮೂಲಕ ವಿಜೇತರಾಗಿ ಪ್ರಶಸ್ತಿ ಪ್ರದಾನ ಪ್ರಮಾಣ ಪತ್ರ ಪಡೆದ ಸಮಸ್ತ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸಿದರು.  ಗಿರಿಜಾ ನಿರ್ವಾಣಿ ಯವರು ಇಂದಿನ ಚಿತ್ರಕಲಾ ಸ್ಪರ್ಧೆಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು.