ಭವಿಷ್ಯತ್ತಿನ ನಾಯಕರಾದ ವಿದ್ಯಾರ್ಥಿಗಳ ಬಾಳು ಬೆಳಕನ್ನು ಕಾಣಬೇಕಾದರೆ ಶಿಕ್ಷಕರ ಮಾರ್ಗದರ್ಶನ ಅತ್ಯಂತ ಅವಶ್ಯಕ
Teacher guidance is essential for students who are future leaders to see the light of day.
ಭವಿಷ್ಯತ್ತಿನ ನಾಯಕರಾದ ವಿದ್ಯಾರ್ಥಿಗಳ ಬಾಳು ಬೆಳಕನ್ನು ಕಾಣಬೇಕಾದರೆ ಶಿಕ್ಷಕರ ಮಾರ್ಗದರ್ಶನ ಅತ್ಯಂತ ಅವಶ್ಯಕ
ಹಾವೇರಿ 20: ವಿದ್ಯಾರ್ಥಿಗಳಿಗೆ ಕಣ್ಣಿಗೆ ಕಾಣದ ಅನೇಕ ದೇವರುಗಳಿದ್ದರೂ ಸಹ ಕಣ್ಣಿಗೆ ಕಾಣುವ ಭೂಮಿಯ ಮೇಲಿನ ದೇವರು ಎಂದರೆ ಶಿಕ್ಷಕ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸುರೇಶ್ ಜಂಗಮಶೆಟ್ಟಿ ಅವರು ನುಡಿದರು. ಅವರು ಹಾವೇರಿ ನಗರದ ನವಚೇತನ ಫೌಂಡೇಶನ್ ರವರ ವಿದ್ಯಾಶಿಲ್ಪ ಶಾಲೆಯ ಆವರಣದಲ್ಲಿ ಏರಿ್ಡಸಲಾಗಿದ್ದ ದಿವಂಗತ ಮಹಮ್ಮದ್ ಕಾಸಿಂ ಹುಸೇನ್ ಸಾಬ್ ವಾಲಿಕಾರ್ ಮತ್ತು ಅಬ್ದುಲ್ ರೆಹಮಾನ್ ಹುಸೇನ್ ಸಾಬ್ ವಾಲಿಕಾರ್ ಗುರುಗಳ ಗುರು ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕ ನುಡಿಗಳನ್ನು ನುಡಿದ ಹಾವೇರಿ ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ್ ದಾನಮ್ಮನವರ ರವರು 1972 ರಿಂದ 2003 ನೇ ಇಸ್ವಿವರೆಗೆ ಹಾವೇರಿ ನಗರದಲ್ಲಿ ವಾಲಿಕಾರ್ ಸಹೋದರ ಶಿಕ್ಷಕರು ಸೈನಿಕ್ ಶಾಲೆ, ಬಿಜಾಪುರ್ ಕಿತ್ತೂರ್ ಚೆನ್ನಮ್ಮ ಸೈನಿಕ್ ಶಾಲೆ ಹಾಗೂ ಜವಾಹರ್ ನವೋದಯ ವಿದ್ಯಾಲಯದ ಶಾಲೆಗಳ ಪ್ರವೇಶ ಪರೀಕ್ಷೆ ಯ ತರಬೇತಿಯನ್ನು ಅತ್ಯಂತ ಯಶಸ್ವಿಯಾಗಿ ನೀಡುತ್ತಿದ್ದರು. ರಾಜ್ಯದ ನಾನಾ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸಿ ಅವರಲ್ಲಿ ತರಬೇತಿ ಪಡೆದು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಸಾಗಿ ಸೈನಿಕ್ ಶಾಲೆ ಹಾಗೂ ನವೋದಯ ಶಾಲೆಗಳಿಗೆ ಪ್ರವೇಶ ಪಡೆದಿರುತ್ತಾರೆ. ವಿಶೇಷವಾಗಿ ಹಲವಾರು ಬಾರಿ ಅವರ ವಿದ್ಯಾರ್ಥಿಗಳು ರಾಜ್ಯಕ್ಕೆ ಈ ಪರೀಕ್ಷೆಗಳಲ್ಲಿ ಒಂದನೇ ಸ್ಥಾನವನ್ನು ಸಹ ಪಡೆದಿರುತ್ತಾರೆ. ಮತ್ತು ಅವರಲ್ಲಿ ಅನೇಕರು ಭಾರತೀಯ ಸೇನಾ ಪಡೆಯ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಾಲಿಕಾರ್ ಗುರುಗಳಿಂದ ತರಬೇತಿ ಪಡೆದ ಮೊದಲ ಬ್ಯಾಚಿನ ಶಿಷ್ಯರಾದ ಭಾರತೀಯ ವಾಯು ಸೇನೆಯ ನಿವೃತ್ತ ವಿಂಗ್ ಕಮಾಂಡರ್ ಕುಮಾರ್ ಹಿರೇಗೌಡ್ರ. ಅವರ ಶಿಷ್ಯರಾದ ಕಮೋಡೋರ ವೀರೇಶ್ ಬಳ್ಳಾರಿ ವಿಎಸ್‌ಎಮ್, ನೇವಲ್ ಆಫೀಸರ್, ಸ್ಪೆಷಲ್ ಕಮಾಂಡರ್ ಆಗಿ ಬೆಂಗಳೂರುನಲ್ಲಿ ಮತ್ತು ಏರ್ ಕಮಾಡೋರ್ ಅರುಣ್ ಬೇವಿನಮರದ ಅವರು ಕರ್ನಾಟಕ ಮತ್ತು ಗೋವಾ ವಿಭಾಗದ ಎನ್‌ಸಿಸಿಯ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕರು ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆ ಯಾಗಿ ಉನ್ನತ ಹುದ್ದೆಯಲ್ಲಿದ್ದು ಅದರಲ್ಲಿ ನಾನು ಸಹ ಒಬ್ಬ ಎಂದು ಅತ್ಯಂತ ಹೆಮ್ಮೆಯಿಂದ ನುಡಿದರು. ವಿವಿಧ ಸಾಮಾಜಿಕ ಸಾಂಸ್ಕೃತಿಕ ಆರ್ಥಿಕ ಮತ್ತು ಧಾರ್ಮಿಕ ಹಿನ್ನೆಲೆಗಳಿಂದ ಬಂದಿದ್ದ ನಮ್ಮೆಲ್ಲರಿಗೂ ಪ್ರೀತಿ ವಿಶ್ವಾಸ ಕಾಳಜಿ ಮತ್ತು ಸಹಕಾರ ಮನೋಭಾವನೆ ಯಂತಹ ಒಳ್ಳೆಯ ವಾತಾವರಣ ಕಲ್ಪಿಸಿ ನಾವೆಲ್ಲರೂ ಒಂದೇ ಬಳ್ಳಿಯ ಸುವಾಸನೆ ಭರಿತ ಕುಸುಮಗಳಾಗಿ ಅರಳುವಂತೆ ಮಾಡಿದವರು. ಈ ರೀತಿ ದೇಶದ ಅಭಿವೃದ್ಧಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಿರ್ಣಾಯಕ ಕೊಡುಗೆಗಳನ್ನು ನೀಡಲು ಸದಾ ಕಂಕಣಬದ್ಧರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆಗೈಯುತ್ತಿರುವ ಸಮಾಜದ ವಿಶಿಷ್ಟ ವ್ಯಕ್ತಿಗಳ ಸಮೂಹವನ್ನು ರೂಪಿಸಿದಂತಹ ವಾಲಿಕಾರ್ ಸರ್, ಗುರುಗಳು ಇಂದಿಗೂ ಎಂದೆಂದಿಗೂ ಪ್ರಾತಸ್ಮರಣೀಯರು ಪೂಜ್ಯನೀಯರು ಹಾಗೂ ಅಭಿನಂದನಾರ್ಹರು ಎಂದು ಹೇಳಿದರು ಅಧ್ಯಕ್ಷೀಯ ನುಡಿಗಳನ್ನು ನುಡಿದ ಹಿರಿಯ ವಿದ್ಯಾರ್ಥಿ ನಾಗೇಂದ್ರ ಮಾಳಿ ಅವರು ವಾಲಿಕಾರ್ ಗುರುಗಳ ಶಿಷ್ಯರ ಬಳಗ ಇವತ್ತು ಕೇವಲ ಸರಕಾರಿ ನೌಕರಿಯಲ್ಲಿ ಮಾತ್ರ ಇರದೆ ನನ್ನಂತೆ ಅನೇಕ ಸಾಧನೆ ಮಾಡಿದ ಉದ್ಯಮಿಗಳಾಗಿದ್ದಾರೆ, ವೈದ್ಯರುಗಳಾಗಿದ್ದಾರೆ, ಇಂಜಿನಿಯರು ಆಗಿದ್ದಾರೆ,, ವ್ಯಾಪಾರಸ್ಥರಾಗಿದ್ದಾರೆ ಎಂದರು. ಅವರಿಂದ ತರಬೇತಿ ಪಡೆದ ಎಲ್ಲ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಗುರು ನಮನ ಮಾಡುವ ಸೌಭಾಗ್ಯ ನಮ್ಮ ನವಚೇತನ ಸಂಸ್ಥೆಯ ವಿದ್ಯಾಶಿಲ್ಪ ಶಾಲೆಗೆ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ ಎಂದು ನುಡಿದರು. ಗುರು ನಮನದ ಅಂಗವಾಗಿ ವಾಲಿಕಾರ್ ಗುರುಗಳಿಗೆ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಅವರ ಪರಿವಾರದ ಯಾಸಿನ್, ಸಾಧಿಕ್ ,ಜಮೀರ್, ಜಾಕಿರ್, ಯೂನಿಸ್ , ಸುಬಾನ್,ಅಖಿಲಾ, ಯಾಸ್ಮಿನ್, ನಾಸಿಮಾ ಶಬಾನ ಅಜ್ಮಿತ್, ಫರ್ಜಾನ ಮತ್ತು ಮತ್ತು ಹಸಿನಾರ್ ಅವರಿಗೆ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಹಿರಿಯ ವಿದ್ಯಾರ್ಥಿಗಳಾದ ಸಂತೋಷ್ ಪಾಟೀಲ್ ಎಂಎಸ್ ಪಾಟೀಲ್ ಕಿತ್ತೂರ್ ಸೈನಿಕ್ ಶಾಲೆಯ ಪ್ರತಿನಿಧಿಯಾಗಿ ಮಂಜುಳಾ ಮತ್ತು ನವೋದಯ ಶಾಲೆಯ ಪ್ರತಿನಿಧಿಯಾಗಿ ಶಿವಯೋಗಿ ದಸಮನಿ ಉಪಸ್ಥಿತರಿದ್ದರು. ಡಾಕ್ಟರ್ ರವಿ ಮಲ್ಲಾಡದ ಸ್ವಾಗತಿಸಿದರು ಎಂಎಸ್ ಪಾಟೀಲ್ ವಂದಿಸಿದರು. ನಾಗರಾಜ್ ನಡುವಿನಮಠ ನಿರೂಪಿಸಿದರು ವಾಲಿಕಾರ್ ಪರಿವಾರದ ಪರವಾಗಿ ಯಾಸಿನ್ ಮತ್ತು ನಾಜಿನ್ ಅವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 