ಪಿಎಂಶ್ರೀ ಸೋರಗಾಂವ ಶಾಲೆಯಲ್ಲಿ ಶಿಕ್ಷಕರ-ಪಾಲಕರ ಮಹಾಸಭೆ
Teacher-Parent General Assembly at PM Shri Soragaon School
ರನ್ನ ಬೆಳಗಲಿ 03: ಸರ್ಕಾರದ ಮಹತ್ವಕಾಂಕ್ಷೆಯ ಸಭೆಯೇ ಈ ಶಿಕ್ಷಕರ-ಪಾಲಕರ ಸಭೆಯಾಗಿದೆ. ಒಂದು ಮಗುವಿನ ಸರ್ವಾಂಗಿನ ಪ್ರಗತಿಗೆ ಯಾವ ಯಾವ ಕೌಶಲ್ಯಗಳ ಬೇಕು, ಆ ಎಲ್ಲಾ ಕೌಶಲ್ಯಗಳನ್ನು ಪಿಎಂ ಶ್ರೀ ಯೋಜನೆ ಅಡಿಯಲ್ಲಿ ನಮ್ಮ ಶಾಲೆಗೆ ಸರ್ಕಾರ ಒದಗಿಸುತ್ತಿದೆ. ಮನೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಯ ವಾತಾವರಣವನ್ನು ಪಾಲಕರು ರೂಪಿಸಬೇಕಾಗಿದೆ ಎಂದು ಮುಖ್ಯೋಪಾಧ್ಯಾಯ ಬಿ ಆರ್ ಶಿರೂರ ತಿಳಿಸಿದರು.
ಮುಧೋಳ ತಾಲೂಕಿನ ಸೋರಗಾಂವ ಗ್ರಾಮದಲ್ಲಿ ಪಿಎಂ ಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಆಶ್ರಯದಲ್ಲಿ. ಶನಿವಾರದಂದು ಶಿಕ್ಷಕರ-ಪಾಲಕರ 2ನೇ ಮಹಾಸಭೆ ಮತ್ತು ಒಂದು ದಿನದ ಪುನಃಚೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಶಿಕ್ಷಕರಾದ ರಾಘವೇಂದ್ರ ನೀಲಣ್ಣವರ ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಯೋಗವೇ ವರದಾನವಾಗಿದೆ. ಮುಂಜಾವಿನಲ್ಲಿ ಮಕ್ಕಳು ನಿತ್ಯ ಪ್ರಾಣಾಯಾಮ ಮತ್ತು ಸರಳ ಯೋಗಭ್ಯಾಸವನ್ನು ಮಾಡಲಿ, ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಿ. ಅವರ ಮುಂದೆ ಒಳ್ಳೆತನವನ್ನೇ ಬಿಂಬಿಸಿ, ಶಿಕ್ಷಕರು ನೀಡುವ ಸಲಹೆ ಸೂಚನೆಗಳನ್ನು ಚಾಚು ತಪ್ಪದೇ ಪಾಲಿಸಿದರೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪೂರಕವಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕರಾದ ಎಂ ಕೆ ಅಮ್ಮಣಗಿ, ವಿಜಯ ಮಲಕನ್ನವರ, ಎಸ್ ಎಸ್ ಜೀರಗಾಳ, ವಿ ಎಚ್ ಗೌಡರ, ಆರ್ ಎಮ್ ಡೊಂಬರಿ್ಡ ಎಸ್ ಪೂಜಾರಿ, ಪರಮಾನಂದ ಮುಗಳಖೋಡ ಶಿಕ್ಷಕರು ತರಗತಿವಾರು ವಿದ್ಯಾರ್ಥಿಗಳ ವಯಕ್ತಿಕ ಮಾಹಿತಿ ಜೊತೆಗೆ, ಮಕ್ಕಳ ಪ್ರಗತಿಯ ಮಟ್ಟವನ್ನು ಪಾಲಕರ ಮುಂದೆ ತಿಳಿಸಿ.ಪಾಲಕರಿಂದ ಸಲಹೆ ಸೂಚನೆ ಸ್ವೀಕರಿಸಿ, 10ನೇ ತರಗತಿಯ ಮಹತ್ವ ಮತ್ತು ಮುಂದೆ ದೊರೆಯಬಹುದಾದಂತ ವಿವಿಧ ಕ್ಷೇತ್ರಗಳ ಪ್ರವೇಶ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು.
ಎಸ್.ಡಿ. ಎಮ್.ಸಿ ಅಧ್ಯಕ್ಷ ಗೈಬುಸಾಬ ನದಾಫ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರುಕ್ಮವ್ವ ಕುಟ್ರಟ್ಟಿ, ಪುಷ್ಪಾ ಹೊಸವಾಲಿಕಾರ, ಶಾಂತವ್ವ ಪರೀಟ, ವಿಠ್ಠಲ ದಡ್ಡಿಮನಿ, ಲಕ್ಷ್ಮೀಬಾಯಿ ಮ್ಯಾಗೇರಿ, ಭೀಮಶಿ ಹಗಳಗಾರ, ಬಲಭೀಮ ಪೂಜಾರಿ, ಬಸಪ್ಪ ಲೋಕಾಪೂರ, ವೆಂಕಪ್ಪ ಮಳಲಿ, ರಮೇಶ ಪೂಜಾರಿ ಹಾಗೂ ಪಾಲಕ ಪೋಷಕರು, ಎಸ್.ಡಿ.ಎಮ್.ಸಿ ಸರ್ವ ಸದಸ್ಯರು ಮತ್ತು ಊರಿನ ಪ್ರಮುಖರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 