ಅಗಡಿಯಲ್ಲಿ ತಾಲೂಕು ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆ ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಯಲ್ಲಿ ರಸಪ್ರಶ್ನೆ ಪಾತ್ರ ಪ್ರಮುಖ
Taluk level open quiz competition in Agadi. The role of quiz is important in the personality develo
ಹಾವೇರಿ 12 : ಕಲಿಕೆಯಲ್ಲಿ ಆಸಕ್ತಿ ಹಾಗೂ ಜ್ಞಾನ ಸಾಮರ್ಥ್ಯವನ್ನು ಹೆಚ್ಚಿಸುವ ರಸಪ್ರಶ್ನೆ ಸ್ಪರ್ಧೆ ಶೈಕ್ಷಣಿಕ ಪ್ರಗತಿಗಷ್ಟೇ ಅಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವ ಬೆಳವಣಿಗೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.ತಾಲೂಕಿನ ಅಗಡಿ ಗ್ರಾಮದಲ್ಲಿ ರೇಣುಕಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಏರಿ್ಡಸಿದ್ದ ‘ಭಾರತವನ್ನು ತಿಳಿಯಿರಿ’ ಹಾವೇರಿ ತಾಲೂಕು ಮಟ್ಟದ ಮುಕ್ತ ರಸಪ್ರಶ್ನೆ ಸ್ಪರ್ಧೆಯಲ್ಲಿ ಅವರು ಮಾತನಾಡಿದರು.ಸಾಮಾನ್ಯ ಜ್ಞಾನವೇ ಈ ಸ್ಪರ್ಧೆಯ ಕೇಂದ್ರಬಿಂದು. ನಮ್ಮಲ್ಲಿರುವ ತಾರ್ಕಿಕ ಆಲೋಚನಾ ಶಕ್ತಿಯನ್ನು ಒರೆಗೆ ಹಚ್ಚಲು ಈ ಕಾರ್ಯಕ್ರಮ ಸಹಕಾರಿಯಾಗುತ್ತದೆ.
ಇಲ್ಲಿ ನಮ್ಮ ನೆನಪಿನ ಶಕ್ತಿಗಿಂತ ಬುದ್ಧಿಮತ್ತೆಯ ಪರೀಕ್ಷೆ ನಡೆಯುತ್ತದೆ ಎಂದೂ ಹನುಮಂತಗೌಡ 6 ಸುತ್ತುಗಳಲ್ಲಿ ಕ್ವಿಜ್ ಮಾಸ್ಟರ್ ಆಗಿ ವೈವಿಧ್ಯಮಯ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿದರು.ಶಿಕ್ಷಣ ಚಿಂತಕ ನಿಜಲಿಂಗಪ್ಪ ಬಸೇಗಣ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗೆಲ್ಲುವುದಷ್ಟೇ ಗುರಿಯಲ್ಲ. ಅವರ ಭಾಗವಹಿಸುವಿಕೆಯೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳಲ್ಲಿನ ಅಪಾರ ಕುತೂಹಲವನ್ನು ತಣಿಸುವ ಅವರ ಜ್ಞಾನವನ್ನು ಒರೆಹಚ್ಚುವ ಈ ಸ್ಪರ್ಧೆ ವಾಚನಾಭಿರುಚಿ ಮೂಡಿಸುವುದಲ್ಲದೇ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸುವುದು. ಅಂಕಗಳಿಕೆಯಷ್ಟೇ ಅಲ್ಲ ಸಂವಹನ ಕಲೆಯೂ ಮುಖ್ಯ. ಪ್ರಶ್ನೆಗಳನ್ನು ತೆಗೆಯುವ, ಕೇಳುವ ನಿರೂಪಣಾ ಶೈಲಿಯ ಹಿಂದೆ ಕ್ವಿಜ್ ಮಾಸ್ಟರ್ ಅವರ ಶ್ರಮ ಬಹಳವಿದೆ ಎಂದರು.
ಸಾಹಿತಿ ಗೂಳಪ್ಪ ಅರಳಿಕಟ್ಟಿ ಅತಿಥಿಯಾಗಿ ಮಾತನಾಡಿ, ಈ ಸ್ಪರ್ಧೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿಗಳು ಹಿರಿಯರೊಡನೆ ಅಂತಿಮ ಹಂತದವರೆಗೂ ಬಂದದ್ದು ವಿಶೇಷ. ಕ್ವಿಜ್ನ ಕೌಶಲ್ಯಯುಕ್ತ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವವನ್ನು ಬೆಳೆಸುವುದು. ಗುಂಪಿನೊಂದಿಗೆ ಹೊಂದಾಣಿಕೆ, ಸ್ವಕಲಿಕಾ ಸಾಮರ್ಥ್ಯವನ್ನು ಹಾಗೂ ಸಮಸ್ಯೆಗಳನ್ನು ಬಗೆಹರಿಸುವ ಕೌಶಲ್ಯವನ್ನು ಕಲಿಯುತ್ತಾರೆ ಎಂದು ಹೇಳಿದರು. ಫಲಿತಾಂಶ: ಗಂಗಾತಂಡದ ಚೇತನ ಯಾದಗುಡೆ, ನಿವೇದಿತಾ ಯಾದಗುಡೆ ಪ್ರಥಮ, ಯಮುನಾ ತಂಡದ ರೂಪಾ ಹೊಸಮನಿ, ಸಾಗರ ಹೊಸಮನಿ ದ್ವಿತೀಯ, ತುಂಗಭದ್ರಾ ತಂಡದ ವಿ.ಎಫ್.ಜಾಡರ, ಚಂದ್ರಶೇಖರ ಕಾಕೋಳ ತೃತೀಯ ಹಾಗೂ ಶರಾವತಿ ತಂಡದ ಭವ್ಯ ಮಡಿವಾಳರ, ಮಂಜುನಾಥ ಕೋಡಿಹಳ್ಳಿ, ಕಾವೇರಿ ತಂಡದ ವೀರಭದ್ರ್ಪ ಬಳಲಕೊಪ್ಪ,
ಆಕಾಶ ನರೇಗಲ್ಲ ಸಮಾಧಾನಕರ ಸ್ಥಾನ ಪಡೆದರು.ದೇವಸ್ಥಾನದ ಎಲ್ಲಮ್ಮ ಪೂಜಾರ ವಿಜೇತರಿಗೆ ನಗದು ಹಾಗೂ ಪ್ರಶಸ್ತಿ ಪತ್ರ ವಿತರಿಸಿದರು. ಗಾಂಧಿಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಸಮಿತಿಯ ಮೀನಾಕ್ಷಿ, ಮಂಜುನಾಥ ಪೂಜಾರ, ದುಂಡಪ್ಪ, ಶ್ರೀನಿವಾಸ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಗನಬಸವ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ನೇತ್ರಾವತಿ ಕೊಪ್ಪಳದ ಹಾಗೂ ವಸಂತ ಕಮ್ಮಾರ ಶಿಕ್ಷಕರು ನಿರ್ಣಾಯಕರಾಗಿದ್ದರು.ಸ್ಪರ್ಧೆಯಲ್ಲಿ 12 ವರ್ಷಗಳ ವಯೋಮಾನದ ವಿದ್ಯಾರ್ಥಿಗಳು ಸೇರಿದಂತೆ 50 ವರ್ಷ ವಯಸ್ಸಿನವರು, ಶಿಕ್ಷಕರು ಹಾಗೂ ತಾಯಿ ಮತ್ತು ಮಗ ಭಾಗವಹಿಸಿದ್ದು ವಿಶೇಷವಾಗಿತ್ತು. ಸ್ಪರ್ಧಾಳುಗಳು ಉತ್ತರಿಸದಿದ್ದಾಗ ಪ್ರೇಕ್ಷಕರು ಉತ್ತರಿಸುತ್ತಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.ದೇವಸ್ಥಾನದ ಸಂಚಾಲಕ ರೇವಣಪ್ಪ ರಾಗಿಯವರ ಸ್ವಾಗತಿಸಿ, ನಿರೂಪಿಸಿದರು. ದುಂಡಪ್ಪ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 