ಹೊಸ ವಂಟಮೂರಿಯಲ್ಲಿ ತಾಲೂಕು ಮಟ್ಟದ ಹ್ಯಾಂಡ್ಬಾಲ್, ನೆಟ್ಬಾಲ್ ಸ್ಪರ್ಧೆಗೆ ಚಾಲನೆ

ಹೊಸ ವಂಟಮೂರಿಯಲ್ಲಿ ತಾಲೂಕು ಮಟ್ಟದ ಹ್ಯಾಂಡ್ಬಾಲ್, ನೆಟ್ಬಾಲ್ ಸ್ಪರ್ಧೆಗೆ ಚಾಲನೆ  Taluk-level handball and netball competitions kick off in Hosa Vantamuri


ಯಮಕನಮರಡಿ 04: ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಅಣ್ಣಾ ಜಾರಕಿಹೊಳಿ, ಚಿಕ್ಕೋಡಿ ಲೋಕಸಭಾ ಸದಸ್ಯರಾದ ಪ್ರಿಯಾಂಕಾ ಅಕ್ಕಾ ಜಾರಕಿಹೊಳಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿ, ಅಪೆಕ್ಸ್‌ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ರಾಹುಲ್ ಅಣ್ಣಾ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಯಮಕನಮರಡಿ ಮತಕ್ಷೇತ್ರದ ಹೊಸ ವಂಟಮೂರಿ ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 2026ಹಿ27್ಫೂ ಸಾಲಿನ ತಾಲೂಕು ಮಟ್ಟದ 14 ಹಾಗೂ 17 ವರ್ಷದೊಳಗಿನ ಹ್ಯಾಂಡ್ಬಾಲ್ ಮತ್ತು ನೆಟ್ಬಾಲ್ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಕ್ರೀಡಾಕೂಟದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುವುದು, ದೈಹಿಕ ಕ್ಷಮತೆ ಹೆಚ್ಚಿಸುವುದು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆಗೆ ಪ್ರೋತ್ಸಾಹ ನೀಡುವುದು ಕ್ರೀಡಾಕೂಟದ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಪ್ಪ ಹೊಳಿಕಾರ, ಸಚಿವರ ಆಪ್ತ ಸಹಾಯಕ ಜಂಗಲಿಸಾಬ್ ನಾಯಿಕ, ಪ್ರಧಾನ ಗುರುಗಳಾದ ಎಂ.ಎ. ಮಾಹುತ, ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಮಸ್ತಿ, ಹನುಮಂತ ಮುದಗ್ಗನ್ನವರ, ಪಂಚ ಗ್ಯಾರಂಟಿ ತಾಲೂಕು ಅಧ್ಯಕ್ಷ ಈರ​‍್ಪ ಪಾಟೀಲ್, ಮುಖಂಡರಾದ ಆರಿಫ್ ಮುಲ್ಲಾ, ಮಲಿಕ್ ಮುಲ್ಲಾ, ಸುರೇಶ್ ಜೀಂಡ್ರಾಳಿ, ಬನೇಪ್ಪಾ ಪಾಟೀಲ್, ನಿಂಗಪ್ಪ ಪಾಟೀಲ್, ನಿಂಗಪ್ಪ ಹೊಳಿಕಾರ, ಯಲ್ಲಪ್ಪ ಬಸರಗಿ, ಸೌರಭ ದಾದಾಗೋಳ ಸೇರಿದಂತೆ ಶಿಕ್ಷಕರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.