ತಾಲೂಕು ಆಡಳಿತದಿಂದ ದಾಸಶ್ರೇಷ್ಠ ಕನಕದಾಸ ಜಯಂತಿ ಆಚರಣೆ

ತಾಲೂಕು ಆಡಳಿತದಿಂದ ದಾಸಶ್ರೇಷ್ಠ ಕನಕದಾಸ ಜಯಂತಿ ಆಚರಣೆ Taluk administration celebrates Kanakadasa Jayanti


ಹುಬ್ಬಳ್ಳಿ ನ.8: ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಾಡ ಗ್ರಾಮದಲ್ಲಿ ಕನಕದಾಸರು ಜನಿಸಿದರು. ತಾಯಿ ಬಚ್ಚಮ್ಮ ತಂದೆ ಭರಮಗೌಡರು ಮಗನಾಗಿದ್ದರು. ಯುದ್ಧದಲ್ಲಿ ಸೋತು ಮನನೊಂದು ದೈವ ವಾಣಿ ಮೂಲಕ ದೈವ ದಾಸರಾಗಿ ಉಡುಪಿಯಲ್ಲಿ ಶ್ರೀ ಕೃಷ್ಣನನ್ನು ಆರಾಧಿಸಿ ಒಲಿಸಿಕೊಂಡು ಕೃಷ್ಣನ ಭಕ್ತರಾದವರು ಕನಕದಾಸರು ಎಂದು ಶಾಸಕರಾದ ಮಹೇಶ ಟೆಂಗಿನಕಾಯಿ ಹೇಳಿದರು. ಇಂದು ತಾಲೂಕ ಪಂಚಾಯತ್ ಸಭಾಭವನದಲ್ಲಿ ತಾಲೂಕ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ದಾಸಶ್ರೇಷ್ಠ  ಕನಕದಾಸ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಕೀರ್ತನೆಗಳ ರಚನೆ ಮೂಲಕ ಕನ್ನಡ ಸಾಹಿತ್ಯಕ್ಕೆ ಸ್ಮರಣೀಯ ಕೊಡುಗೆಗಳನ್ನು ನೀಡಿದ್ದಾರೆ. ಉಡುಪಿಯಲ್ಲಿ ಕೃಷ್ಣನ ಲೀಲೆ ಎಷ್ಟಿದೆಯೋ ಅಷ್ಟು ಕನಕದಾಸರದು ಕೂಡ ಕನಕನ ಕಿಂಡಿ ಎಂಬ ಪ್ರಸಿದ್ಧ ಭಕ್ತಿ ಇದೆ. "ಕುಲ ಕುಲವೆಂದು ಹೊಡೆದಾಡದಿರಿ ಹುಚ್ಚಪ್ಪ ಗಳಿರಾ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ " ಎಂದು ತಮ್ಮ ಕೀರ್ತನೆಗಳ ಮೂಲಕ ಜಾತಿ ವಿರುದ್ಧ ಹೋರಾಡಿದವರು. ದಾಸರಲ್ಲಿ ದಾಸ ಶ್ರೇಷ್ಠರು ಕನಕದಾಸರು. ಕೇವಲ ಒಂದು ಜಾತಿ ಸಮುದಾಯಗಳಿಗೆ ಸೀಮಿತವಾಗದೆ, ಕೇವಲ ಕುರುಬ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲ ಸಮುದಾಯ ವರ್ಗದವರಿಗೂ ಸೀಮಿತವಾದವರು ಕನಕದಾಸರು. ಕನಕದಾಸರು ಹಾಕಿ ಕೊಟ್ಟಿರುವ ಮಾರ್ಗದಲ್ಲಿ ನಾವು ನಡೆಯಬೇಕು. ಮುಂದಿನ ಪೀಳಿಗೆಯನ್ನು ದಾಸರ ವ್ಯಕ್ತಿತ್ವವನ್ನು ತಿಳಿಸಿ ಸಮಾಜವನ್ನು ಒಗ್ಗಟ್ಟಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. 

 ಈ ಸಂದರ್ಭದಲ್ಲಿ ದಾಸಶ್ರೇಷ್ಠ  ಕನಕದಾಸ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಮಾಜದ ಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಶರಣು ಅಣ್ಣಿಗೇರಿ ಉಪನ್ಯಾಸ ನೀಡಿದರು. ಶಾಸಕರಾದ ಎನ್‌.ಎಚ್‌.ಕೋನರಡ್ಡಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಕನಕದಾಸರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಶಹರ ತಹಶೀಲ್ದಾರ ಮಹೇಶ ಗಸ್ತೆ, ಗ್ರಾಮೀಣ ತಹಶೀಲ್ದಾರ ಜೆ.ಬಿ.ಮಜ್ಜಗಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಆರ್‌.ವಾಯ್‌. ಹೊಸಮನಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ನಾಗರತ್ನಾ ಕ್ಯಾಸನೂರ, ಹುಬ್ಬಳ್ಳಿ ಶಹರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಅಬ್ದುಲ್ ಬೋಲಾಬಾಯಿ, ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಎಂ. ಪಡ್ನೇಶಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ್ ,ನವರ ಸಮಾಜದ ಮುಖಂಡರಾದ ಬಸವರಾಜ ಬೋರಣ್ಣವರ, ಮಂಜುನಾಥ ಗೊಜನೂರ , ವೀರನಾರಾಯ ಅರ್ಜಿ, ಈಶ್ವರ ಹೊಳೆಮನ್ನವರ, ಪಾರ್ವತಿ, ಆರ್‌. ಜಿ. ಮೇಟಿ, ಸಂಜೀವ ಧುಮಕ್ಕನಾಳ, ಶೋಭಾ ಬಳ್ಳಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.