ತಾಳಿಕೋಟಿ ಹೋರಾಟ ಸಮಿತಿಯಿಂದ ಉಗ್ರ ಹೋರಾಟದ ಎಚ್ಚರಿಕೆ. 39 ನೇ ದಿನಕ್ಕೆ ಮುಂದುವರೆದ ಧರಣಿ
Talikoti Struggle Committee warns of violent struggle. Dharani continues for 39th day
ಲೋಕದರ್ಶನ ವರದಿ
ತಾಳಿಕೋಟೆ 04: ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ನಡೆಯುತ್ತಿರುವ ಧರಣಿ ಸತ್ಯಾಗ್ರಹವು 39 ನೇ ದಿನಕ್ಕೆ ಮುಂದುವರೆದಿದೆ. ಹೋರಾಟ ಸಮಿತಿಯ ಸಹ ಕಾರ್ಯದರ್ಶಿ ಮಹೇಶ ಛಲವಾದಿ ಮಾತನಾಡಿ ಜಿಲ್ಲಾಧಿಕಾರಿಗಳು ಹಾಗೂ ಶಾಸಕರು ಧರಣಿ ಸ್ಥಳಕ್ಕೆ ಬಾರದೆ ಇರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಳಿಕೋಟಿ ಪಟ್ಟಣದ ಎಲ್ಲಾ ಸಮಾಜದ ಮುಖ್ಯಸ್ಥರು, ಸಂಘ ಸಂಸ್ಥೆಗಳು, ಎಲ್ಲಾ ಸಮಾಜದ ಹಿರಿಯರು ವಿವಿಧ ಅಸೋಷಿಯೇಷನಗಳ ಹಾಗೂ ತಾಲೂಕಿನ ಎಲ್ಲಾ ಹಳ್ಳಿಗಳ ಸಾರ್ವಜನಿಕರು 38 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಯುತ್ತಿದ್ದರು ಈ ಧರಣಿ ಸ್ಥಳಕ್ಕೆ ಬಾರದೆ ಇಡಿ ತಾಲೂಕಿಗೆ ಅನ್ಯಾಯವನ್ನ ಮಾಡುತ್ತಿದ್ದಾರೆ ಎಂದರು. ಇವರ ಈ ನಡೆಗೆ ಉಗ್ರವಾಗಿ ಖಂಡಿಸುತ್ತೇವೆ ಎಂದರು. ಈ ಸಂದರ್ಭದಲ್ಲಿ ತಾಳಿಕೋಟಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ದಶರಥಸಿಂಗ್ ಮನಗೂಳಿ ಗೌರವ ಅಧ್ಯಕ್ಷ ಎಸ್ ಬಿ ಕಟ್ಟಿಮನಿ ಕಾರ್ಯಧ್ಯಕ್ಷ ಆರ್ ಎಸ್ ಪಾಟೀಲ( ಕೂಚಬಾಳ ) ಉಪಾಧ್ಯಕ್ಷರಾದ ಮುತ್ತಪ್ಪ ಚಮಲಾಪುರ, ಮಾಸೂಮಸಾಬ್ ಕೆಂಭಾವಿ,
ಕಾಶಿನಾಥ ಮುರಾಳ ವಿಜಯಸಿಂಗ ಹಜೇರಿ, ಸುರೇಶ ಹಜೇರಿ, ಅನಿಲಸಿಂಗ ವಿಜಯಪುರ ಮಹೇಶ ಚಲವಾದಿ , ಸಂಜು ಬರದೆನಾಳ , ಸುರೇಶ ಪುಲುಸ್, ಮಯೂರ ಪಾಟೀಲ, ರತನಸಿಂಗ ಕೊಕಟನೂರ,ಪ್ರಭುಗೌಡ ಪಾಟೀಲ ಬಳಗನೂರ, ರಾಮಣ್ಣ ಕಟ್ಟಿಮನಿ, ಕಳಕುಸಾ ರಂಗರೇಜ್, ಎಲ್ ಬಿ ಕೊಡೇಕಲ್, ನಿಂಗನಗೌಡ ದೇಸಾಯಿ, ಭೀಮನಗೌಡ ದೇಸಾಯಿ (ಹಡಗಿನಾಳ)ತಿಮ್ಮಪ್ಪ ಗೊಲ್ಲರ, ಯಂಕಪ್ಪ ಗೊಲ್ಲರ, ಸದ್ದಾಂ ಹುಸೇನ್ ಬೀಳಗಿ, ದತ್ತು ಹೇಬಸೂರ, ನಿಂಗನಗೌಡ ಬಿರಾದಾರ ಗಡಿಸೋಮನಾಳ, ಭೀಮನಗೌಡ ಪಾಟೀಲ, ತಿಪ್ಪಣ್ಣ ಸಜ್ಜನ, ಡಿಶೇಕಪ್ಪ ರಕ್ಕಸಗಿ, ಬಸ್ಸು ತಾಳಿಕೋಟಿ ಹಾಗೂ ತಾಲೂಕಿನ ಅನೇಕರು ಹಾಜರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 